ಮಧುಗಿರಿ : ಕೆಲವು ದಿನಗಳ ಹಿಂದೆ ಬಿದ್ದ ಮಳೆಗೆ ಹಲವಾರು ಮನೆಗಳು ಹಾನಿಯಾಗಿದ್ದು ತಲಾ ಮನೆಗೆ ಫಲಾನುಭವಿಗೆ ಐವತ್ತು ಸಾವಿರ ಪರಿಹಾರ ಚೆಕ್ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಹೇಳಿದರು.
ತಾಲ್ಲೂಕು ಕಚೇರಿಯ ಸಭಾಂಗಣ 2021 ಮತ್ತು 2022 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರವಾಹದಿಂದ ಭಾದಿತರಾದ ನೆರೆ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು .
ಮಧುಗಿರಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದಾಗಿ 72 ಮನೆಗಳಿಗೆ ಹಾನಿ ಉಂಟಾಗಿರುವ ಮನೆಗಳಿಗೆ ಐವತ್ತು ಸಾವಿರ
1 ಮನೆ ಸಂಪೂರ್ಣ ಹಾನಿ ಯಾಗಿರುವ ಫಲಾನುಭವಿಗೆ 95 ಸಾವಿರ ಪರಿಹಾರದ ಚೆಕ್ ವಿತರಿಸಲಾಯಿತು .
ಮನೆಗೆ ನೀರು ನುಗ್ಗಿ ದವಸ ಧಾನ್ಯಗಳ ಹಾನಿಯಾಗಿರುವ 72 ಪ್ರಕರಣಗಳಿಗೆ ಹತ್ತು ಸಾವಿರ ನೇರ ಖಾತೆಗೆ ಹಣ ಜಮಾವಣೆ ಮಾಡಲಾಗಿದೆ.
ಮಳೆ ಹಾನಿಯಿಂದ ಸಂಕಷ್ಟದಲ್ಲಿದ್ದ ಫಲಾನುಭವಿಗಳಿಗೆ ಮಾನ್ಯ ಶಾಸಕರಾದ ಎಂ.ವಿ ವೀರಭದ್ರಯ್ಯ ಚೆಕ್ ವಿತರಿಸಿದರು…
ಗ್ರಾಮಗಳಲ್ಲಿ ಬೆಳೆ ನಾಶವಾಗಿದ್ದು ಅದೇ ರೀತಿ ಜಯಮಂಗಲಿ ನದಿ,
ಸುವರ್ಣಮುಖಿನದಿ, ಕುಮದ್ವತಿ ನದಿಪಾತ್ರದಲ್ಲಿ ಹಾನಿಯಾಗಿರುವ ಭಾಗಗಳಲ್ಲಿ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಳೆ ಹಾನಿಯಿಂದ ಸಂಕಷ್ಟದಲ್ಲಿದ್ದ ಫಲಾನುಭವಿಗಳಿಗೆ ಮಾನ್ಯ ಶಾಸಕರಾದ ಎಂ.ವಿ ವೀರಭದ್ರಯ್ಯ ಚೆಕ್ ವಿತರಿಸಿದರು…
ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಮಳೆಯಿಂದಾಗಿ 72 ಮನೆಗಳು ಭಾಗಶಃ ಹಾಳಾಗಿದ್ದು ,
ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಮುಖಂಡರಾದ ಎಂ.ಆರ್. ಜಗನ್ನಾಥ್, ರಾಜಸ್ವ ನಿರೀಕ್ಷಕರಾದ ನಾರಣಪ್ಪ, ರವೀಂದ್ರ ,ಚನ್ನವೀರಯ್ಯ,ವೇಣುಗೋಪಾಲ್, ಗ್ರಾಮಲೆಕ್ಕಾಧಿಕಾರಿ ಸುನೀಲ್ ಕುಮಾರ್ ಇತರರು ಹಾಜರಿದ್ದರು