ಕೊರಟಗೆರೆ ಪಟ್ಟಣದಲ್ಲಿ ಸುಧಾಕರಲಾಲ್ ಜನಜಾತ್ರೆ ಸ್ನೇಹಜೀವಿಯ 55ನೇ ಹುಟ್ಟುಹಬ್ಬದ ಸಂಭ್ರಮ

ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮ 10ಸಾವಿರಕ್ಕೂ ಅಧಿಕ ಕಾರ್ಯಕರ್ತರು ಉಪಸ್ಥಿತಿ..

ರಕ್ತಧಾನ-ಆರೋಗ್ಯ ಶಿಭಿರ ಆಯೋಜನೆ ಕೊನೆ ಉಸಿರು ಇರುವರೇಗೆ ಕೊರಟಗೆರೆ ಜನರ ಸೇವೆ ಮಾಡುತ್ತೇನೆ ಮಾಜಿ ಜನಪ್ರಿಯ ಶಾಸಕ ಸುಧಾಕರಲಾಲ್ ಹೇಳಿಕೆ ..

ಕೊರಟಗೆರೆ:- ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿ ದೇವರುಗಳ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಸದಾ ಚಿರಾಋಣಿ.ನಿಮ್ಮೇಲ್ಲರ ಆರ್ಶಿವಾದ ಮತ್ತು ಹಾರೈಕೆ ಸದಾ ನನ್ನ
ಮೇಲಿರಲಿ ಅಷ್ಟು ಸಾಕು. ನನ್ನ ಕೊನೆಯ ಉಸಿರು
ಇರುವರೇಗೆ ಕೊರಟಗೆರೆ ಕ್ಷೇತ್ರದ ಜನತೆಯ ಸೇವೆ ಮಾಡುತ್ತೇನೆ ಎಂದು ಕೊರಟಗೆರೆ ಕ್ಷೇತ್ರದ ಜನಪ್ರೀಯ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.

ಕೊರಟಗೆರೆ ಪಟ್ಟಣದ ಪಪಂ ಆವರಣದಲ್ಲಿ ಜಾತ್ಯಾತೀತ ಜನತಾದಳ ಪಕ್ಷ, ಜೆಡಿಎಸ್ ಯುವಪಡೆ ಮತ್ತು ಸ್ನೇಹಜೀವಿ ಅಭಿಮಾನಿ ಬಳಗದಿಂದ ಗುರುವಾರ ಏರ್ಪಡಿಸಲಾಗಿದ್ದ ಕೊರಟಗೆರೆ ಕ್ಷೇತ್ರದ ಸ್ನೇಹಜೀವಿ
ಮಾಜಿ ಶಾಸಕರಾದ ಪಿ.ಆರ್.ಸುಧಾಕರಲಾಲ್ ರವರ 55ನೇ
ಹುಟ್ಟುಹಬ್ಬದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿದರು.

ಕೊರಟಗೆರೆ ಕ್ಷೇತ್ರದ ಮನೆಮಗನಾಗಿ 15ವರ್ಷ ಜಿಪಂ ಸದಸ್ಯ ಮತ್ತು 5ವರ್ಷ ಶಾಸಕನಾಗಿ 20ವರ್ಷ ಹಗಲುರಾತ್ರಿ ಎನ್ನದೇ ಸಾಮಾನ್ಯನಂತೆ ಜನತೆಯ ಸೇವೆ ಸಲ್ಲಿಸಿದ್ದೇನೆ. 2018ರಲ್ಲಿ ನಾನು ಸೋತರು ಸಹ
ಕೊರಟಗೆರೆ ಕ್ಷೇತ್ರದ ಜನತೆಯ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದೇನೆ. 2023ರ ಕೊರಟಗೆರೆ
ಕ್ಷೇತ್ರದ ವಿಧಾನಸಭಾ ಚುನಾವಣೆಗೆ ನಿಮ್ಮೇಲ್ಲರ
ಆರ್ಶಿವಾದ ನನ್ನ ಮೇಲಿರಲಿ.

ಮನೆಯ ಮಗನಾಗಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು.

ತುಮಕೂರು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಮಾತನಾಡಿ:-

ಸ್ನೇಹಜೀವಿಯ ಹುಟ್ಟುಹಬ್ಬದ ಸಂಭ್ರಮವು ಸಾಮಾಜಿಕ ಕಾರ್ಯಕ್ರಮವಾಗಿ ಕೊರಟಗೆರೆ ಕ್ಷೇತ್ರದಲ್ಲಿ ನಡೆಯುತ್ತೀದೆ.

ಕೊರಟಗೆರೆ ಕ್ಷೇತ್ರದ ಪ್ರತಿ ಮನೆಯಲ್ಲಿ ಸುಧಾಕರಲಾಲ್ ಹುಟ್ಟಹಬ್ಬದ ಸಂಭ್ರಮ ಮನೆಮಾಡಿದೆ. 5ವರ್ಷ ಶಾಸಕರಾಗಿ ಮಾಡಿದ ಕೆಲಸಗಳೇ
ಈಗ ಫಲ ನೀಡಲು ಪ್ರಾರಂಭಿಸಿವೆ. ಕೊರಟಗೆರೆ ಕ್ಷೇತ್ರದಲ್ಲಿ 2023ಕ್ಕೆ ಮತ್ತೇ ಸುಧಾಕರ ಪರ್ವಆರಂಭ ಆಗಲಿದೆ ಎಂದು ತಿಳಿಸಿದರು.

ಸ್ನೇಹಜೀವಿ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ 55ನೇ
ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕೊರಟಗೆರೆ
ಪಟ್ಟಣದ ಕನಕ ವೃತ್ತದಿಂದ ಆರಂಭವಾದ ಬೃಹತ್
ಮೆರವಣಿಗೆ ಸರಕಾರಿ ಬಸ್ ನಿಲ್ದಾಣದ ಮುಖ್ಯರಸ್ತೆಯಲ್ಲಿ
ಜೆಡಿಎಸ್ ಪಕ್ಷದ ಮುಖಂಡರು ಮತ್ತು
ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಪಟಾಕಿ ಸಿಡಿಸಿ ಸಿಹಿ ವಿತರಿಸಿ
ಸಂಭ್ರಮಾಚರಣೆ ನಡೆಸಿ ಮಾಜಿ ಶಾಸಕರಿಗೆ ಹೂವಿನ
ಮಳೆಯನ್ನು ಸುರಿಸಿ ವೇದಿಕೆ ಕಾರ್ಯಕ್ರಮಕ್ಕೆ
ಕರೆತಂದರು.

ವೇದಿಕೆಯಲ್ಲಿ ಪಪಂ ಅಧ್ಯಕ್ಷರಾದ ಕಾವ್ಯ, ಉಪಾಧ್ಯಕ್ಷ ಭಾರತಿ, ಸ್ಥಾಯಿ ಸಮಿತಿ ಅಧ್ಯಕ್ಷಕೆ.ಎನ್.ನಟರಾಜ್, ಮಾಜಿ ಅಧ್ಯಕ್ಷ ಮಂಜುಳ, ಸದಸ್ಯರಾದ

ಹುಸ್ನಾಫಾರೀಯ, ಅನಿತಾ, ಲಕ್ಷ್ಮಿನಾರಾಯಣ,
ಪುಟ್ಟನರಸಪ್ಪ, ಮಾವತ್ತೂರು ಗ್ರಾಪಂ ಮಾಜಿ
ಅಧ್ಯಕ್ಷ ಮಂಜುನಾಥ, ಮುಖಂಡರಾದ
ಸತ್ಯನಾರಾಯಣ್, ಸಿದ್ದಮಲ್ಲಪ್ಪ, ಕಲೀಂವುಲ್ಲ, ರಘು,
ಕೌಷಿಕ್, ನಾಗರಾಜು, ರಮೇಶ್, ಶಶಿಕುಮಾರ್, ಪಾರುಕ್,
ಸೈಯದ್ ಸೈಪುಲ್ಲ, ಅಮರ್, ಅಷಿಲಾಶ್, ಕಿರಣ್, ಸಿದ್ದರಾಜು
ಉಪಸ್ಥಿತರಿದ್ದರು.
ಕರ‍್ಯಕ್ರಮದಲ್ಲಿ ಕೊರಟಗೆರೆ ಜೆಡಿಎಸ್ಕ ಕಾರ‍್ಯಧ್ಯಕ್ಷ ನರಸಿಂಹರಾಜು, ಕರ‍್ಯರ‍್ಶಿ ಲಕ್ಷ್ಮಣ್ , ವಕ್ತಾರ ಲಕ್ಷ್ಮೀಶ್ , ಕೋಳಾಲ ಜಿಪಂ ಸದಸ್ಯ ಶಿವರಾಮಯ್ಯ, ಪುರವಾರ ಹೋಬಳಿ ಅಧ್ಯಕ್ಷ ಸತೀಶ್, ಕಾಂತರಾಜು, ಕೋರಾ ಜಿಪಂ ಸದಸ್ಯ ಲಕ್ಷ್ಮಿನರಸೇಗೌಡ, ಮಾಜಿ ತಾಪಂ ಸದಸ್ಯ ಎಲ್.ವಿ.ಪ್ರಕಾಶ್, ಜಗಣ್ಣ, ಬೋರಣ್ಣ, ರವಿಕರ‍್ತಿ, ಮೋಹನ್, ಮುಖಂಡರಾದ ಶ್ರೀನಿವಾಸ್, ಗಿರೀಶ್ ರಾವ್ ಸಿದ್ದರಾಜು ಸೇರಿದಂತೆ ಇತರರು ಇದ್ದರು.


ನೂರಾರು ಜನ ಜೆಡಿಎಸ್‌ಗೆ ಸೇರ್ಪಡೆ ..

ಕೊರಟಗೆರೆ ಪಟ್ಟಣದ ಇರ್ಷಾದ್, ಬಾಬಣ್ಣ, ಇದಾಯತ್, ನವೀನ್,
ಮಹೇಶ್, ರಾಜಶೇಖರ ಮತ್ತು ನೀಲಗೊಂಡನಹಳ್ಳಿ
ಗ್ರಾಪಂ ಅಧ್ಯಕ್ಷೆ ಲಿಂಗಮ್ಮರಂಗನಾಥ ಸೇರಿದಂತೆ
ನೂರಾರು ಜನ ಯುವ ಕಾರ್ಯಕರ್ತರು
ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕರಾದ ಪಿ.ಆರ್.ಸುಧಾಕರಲಾಲ್ಸ ಸಮ್ಮುಖದಲ್ಲಿ ವೇದಿಕೆಯಲ್ಲಿ ಸೇರ್ಪಡೆಯಾದರು.
ಯಶಸ್ವಿಯಾದ ಆರೋಗ್ಯ ಶಿಭಿರ.. ಕೊರಟಗೆರೆ ಪಪಂ ಮುಂಭಾಗ ಸುಧಾಕರಲಾಲ್ಹು ಟ್ಟುಹಬ್ಬದ ಪ್ರಯುಕ್ತ ಕೊರಟಗೆರೆ ಪಪಂ
ಮುಂಭಾಗ ಏರ್ಪಡಿಸಲಾಗಿದ್ದ ಬೃಹತ್ ಆರೋಗ್ಯ,
ರಕ್ತಧಾನ ಶಿಭಿರ ಮತ್ತು ಕಣ್ಣಿನ ತಪಾಸಣಾ ಕಾರ್ಯಕ್ರಮವು ಯಶಸ್ವಿಕಂಡಿದೆ. ವಿಶೇಷ ಚೇತನರಿಗೆ ಸಮಾವಸ್ತçವನ್ನು ವಿತರಣೆ ಮತ್ತು
ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಜೆಡಿಎಸ್
ಮುಖಂಡರು ಮತ್ತು ಕಾರ್ಯಕರ್ತರು ಹಾಲು- ಹಣ್ಣು ವಿತರಣೆ ಮಾಡಿದರು.


ಮನೆಮಗನಾಗಿ 25ವರ್ಷ ಕೊರಟಗೆರೆ ಕ್ಷೇತ್ರದಲ್ಲಿ
ಹಗಲುರಾತ್ರಿ ಜನತೆಯ ಸೇವೆ ಮಾಡಿದ್ದೇನೆ. 2013ರಿಂದ
2018ರ 5ವರ್ಷದ ಅವಧಿಯಲ್ಲಿ ನಾನು ಮಾಡಿರುವ
ಅಭಿವೃದ್ದಿ ಕಾಮಗಾರಿಗಳೇ ಇಂದು ಕೊರಟಗೆರೆ
ರೈತರಿಗೆ ವರದಾನ ಆಗಿವೆ.

ಅಂತರ್ಜಲ ಅಭಿವೃದ್ದಿಗೆ ನಾನು ಅತಿಹೆಚ್ಚು ಆಧ್ಯತೆ ನೀಡಿದ ಪರಿಣಾಮ
ಕೊರಟಗೆರೆ ಕ್ಷೇತ್ರದ ನಾಲ್ಕು ದಿಕ್ಕಿನಲ್ಲಿಯು ಇಂದು
ಅಂತರ್ಜಲ ಏರಿಕೆಯಾಗಿದೆ. ಜನತೆ ನೀಡಿದ ಅಧಿಕಾರವು
ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಸಮರ್ಪಕವಾಗಿ
ಬಳಸಿದ ತೃಪ್ತಿ ನನಗಿದೆ.

ಹಾಗೆಯೇ ಪ್ರತಿ ವರ್ಷ ನನ್ನ ಹುಟ್ಟುಹಬ್ಬಕ್ಕೆ ಅನೇಕ ವಿಕಲಚೇತನರು ಬರುತ್ತಾರೆ ಅವರ ಮನೆಯಲ್ಲಿ ನಾನು ಒಬ್ಬ ಎಂದುಕೊಂಡಿದ್ದಾರೆ ಅದೇ ರೀತಿ ನಾನು ಕೂಡ ಆ ಕುಟುಂಬದಲ್ಲಿ ಒಬ್ಬನಾಗಿ ನನ್ನ ಕೈಲಾದ ಸೇವೆಯನ್ನು ಅವರಿಗೆ ಮಾಡುತ್ತಿದ್ದೇನೆ ಇದರಿಂದ ಪ್ರತಿ ವರ್ಷವೂ ನನ್ನ ಹುಟ್ಟುಹಬ್ಬಕ್ಕೆ ಅನೇಕ ವಿಕಲಚೇತನರು ಬಂದು ಆಚರಿಸುತ್ತಾರೆ ಇದು ನನ್ನ ಪೂರ್ವಜನ್ಮದ ಪುಣ್ಯವೇ ಸರಿ ಎಂದರು..

ಪಿ.ಆರ್.ಸುಧಾಕರಲಾಲ್. ಮಾಜಿ ಶಾಸಕ. ಕೊರಟಗೆರೆ
ಕ್ಷೇತ್ರ.

ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!