ಕೊರಟಗೆರೆ :- ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆ ಬಿದ್ದ ಕಾರಣ ಅನೇಕ ಮನೆಗಳಿಗೆ ನೀರು ನುಗ್ಗಿ ಅವಘಡ ಸೃಷ್ಟಿಯಾಗಿತ್ತು ಜೊತೆಗೆ ಎಷ್ಟೋ ಮನೆಗಳು ಬಿದ್ದು ಹೋಗಿದ್ದವು ಇಂತಹ ಮನೆಗಳ ಕುಟುಂಬಸ್ಥರಿಗೆ ಪಾವಗಡದ ಶ್ರೀ ರಾಮಕೃಷ್ಣ ಆಶ್ರಮದ ಜಪಾನಂದ ಶ್ರೀಗಳು ದಿನಸಿ ಕಿಟ್ ಟಾರ್ಪಲ್ ಸೇರಿದಂತೆ ಪ್ರತಿನಿತ್ಯ ಸಾರ್ವಜನಿಕರಿಗೆ ಬೇಕಾಗುವ ಕೆಲವು ಗೃಹಪಯೋಗಿ ವಸ್ತುಗಳನ್ನುಕೆಲವು ಗ್ರಾಮಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ವಿತರಿಸಿದರು ..
ನಂತರ ಉಳಿದ ಸಾಕಷ್ಟು ಹಳ್ಳಿಗಳಿಗೆ ತಲುಪಿಸಬೇಕಾದ ದಿನಸಿ ಕಿಟ್ ಗಳು ಹಾಗೂ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಿಗೆ ಪಂಚೆ ಇನ್ನೂ ಗೃಹೋಪಯೋಗಿ ಕೆಲವು ವಸ್ತುಗಳನ್ನು ತಾಲ್ಲೂಕು ದಂಡಾಧಿಕಾರಿ ನಾಹೀದ ಜಮ್ ಜಮ್ ಅವರಿಗೆ ನೀಡಿ ಎಲ್ಲೋ ಒಂದು ಕಡೆ ಶೇಖರಿಸಿ ಎಲ್ಲಾ ಗ್ರಾಮದ ನೆರೆ ಸಂತ್ರಸ್ತರಿಗೆ ಆದಷ್ಟು ಬೇಗ ತಲುಪುವ ವ್ಯವಸ್ಥೆ ಮಾಡಲು ತಿಳಿಸಿದರು ..
ಅದರಂತೆ ತಹಶೀಲ್ದಾರ್ ನಾಹೀದ ಜಮ್ ಜಮ್ ಪತ್ರಕರ್ತರ ಸಹಕಾರದೊಂದಿಗೆ ಪತ್ರಕರ್ತರ ಭವನದಲ್ಲಿ ಶೇಖರಿಸಿಟ್ಟಿದ್ದ ದಿನಸಿ ಪದಾರ್ಥಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಸಮದ್ ಭಟ್ಟ ಗ್ರಾಮದ ನೆರೆ ಸಂತ್ರಸ್ಥರಿಗೆ ಇಂದು ವಿತರಿಸಲಾಯಿತು ..
ಇದೇ ಸಂದರ್ಭದಲ್ಲಿ ತಾಲ್ಲೂಕು ಕಚೇರಿಯ ಕೆಲ ಅಧಿಕಾರಿಗಳು ಹಾಗೂ ಪತ್ರಕರ್ತ ಸಂಘದ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು