ಕೊರಟಗೆರೆ: ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸರಳ ಸುಂದರವಾಗಿ ಆಚರಿಸಿದ ತಾಲೂಕು ಆಡಳಿತ

ಕೊರಟಗೆರೆ :- ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಅರ್ಪಿಸಿ ಸರಳವಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು …

ತಹಶೀಲ್ದಾರ್ ನಾಹೀದ ಜಮ್ ಜಮ್ ಮಾತನಾಡಿ ..
ಶ್ರೀಕೃಷ್ಣನ ಜನ್ಮ ರಹಸ್ಯ ವಿಸ್ಮಯಕಾರಿಯಾಗಿ ಕಾರಾಗೃಹದಲ್ಲಿ ಜನಿಸಿದವನು ಶ್ರೀಕೃಷ್ಣ ಈ ಮಹಾನ್ ವ್ಯಕ್ತಿಯು ಬಹು ಸುಂದರವಾದ ಶ್ರೀಕೃಷ್ಣನು ಜನಿಸಿದ ಸ್ಥಳದಲ್ಲಿ ಕತ್ತಲು ತುಂಬಿದ್ದರೂ ಸಹ ಬೆಳದಿಂಗಳ ಬೆಳಕಿನಂತೆ ಮಿನುಗುತ್ತಿದ್ದ ಮುದ್ದಾದ ಶ್ರೀಕೃಷ್ಣನು ಅಲ್ಲಿಂದ ಗೋಕುಲದಲ್ಲಿ ಬೆಳೆಸಲಾಯಿತು ಶ್ರೀಕೃಷ್ಣ ಜನಿಸಿದೆ ಕಂಸನ ಸಂಹಾರಕ್ಕಾಗಿ ..
ಕುರುಕ್ಷೇತ್ರದಲ್ಲಿ ಶ್ರೀಕೃಷ್ಣನ ಪಾತ್ರ ಬಹುದೊಡ್ಡದು ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಸಂಹರಿಸಲು ಭೂಮಿಗೆ ಬಂದ ಭಗವಂತ ನೇ ಶ್ರೀಕೃಷ್ಣ ಇಂತಹ ಮಹಾನ್ ವ್ಯಕ್ತಿಯ ಜನ್ಮ ದಿನಾಚರಣೆ ಆಚರಿಸುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಎಂದು ತಿಳಿಸಿದರು …

ಯಾದವ್ ಮುಖಂಡರಾದ ಮಹಾಲಿಂಗಪ್ಪ ಮಾತನಾಡಿ :- ಶ್ರೀಕೃಷ್ಣ ಜನ್ಮಾಷ್ಟಮಿಯ ಸರಳ ಕಾರ್ಯಕ್ರಮ ಸರಳವಾಗಿ ಆಚರಿಸಿದರು ತಾಲ್ಲೂಕು ಅಧಿಕಾರಿಗಳಿಗೆ ನಮ್ಮ ಧನ್ಯವಾದಗಳು ಮುಂದಿನ ದಿನಗಳಲ್ಲಿ ನಮ್ಮ ಯಾದವ ಸಮುದಾಯದ ಶ್ರೀಕೃಷ್ಣಜನ್ಮಾಷ್ಟಮಿಯ ದಿನ ಸರ್ಕಾರಿ ರಜೆ ಘೋಷಿಸಲಿ ಸರ್ಕಾರವು ಎಂದು ಆಶಿಸುತ್ತೇನೆ ಮುಂದಿನ ದಿನಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯು ತಾಲ್ಲೂಕಿನಲ್ಲಿ ಬಹುದೊಡ್ಡ ಕಾರ್ಯಕ್ರಮವಾಗಿ ನೆರವೇರಿಸಿ ವಂತಾಗಲಿ ನಮ್ಮ ಯಾದವ ಸಮುದಾಯದ ಎಲ್ಲ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಎಲ್ಲರಲ್ಲೂ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು ..

ಯಾದವ ಸಮುದಾಯದ ಅಧ್ಯಕ್ಷ ವೆಂಕಟೇಶ್ ಮಾತನಾಡಿ :- ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ 6ನೇ ತಾರೀಕು ನಮ್ಮ ತಾಲ್ಲೂಕಿನ ಯಾದವ್ ಸಂದಾಯದ ಜನಾಂಗದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಎಲ್ಲ ಯಾದವ ಸಮುದಾಯದ ಜನರು ಹಾಗೂ ಅಧಿಕಾರಿಗಳು ಸಾರ್ವಜನಿಕರು ಪ್ರತಿಯೊಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೇಳಿಕೊಳ್ಳುತ್ತೇವೆ ಹಾಗೆಯೇ
ನಮ್ಮ ಸಮುದಾಯದ ಜನರಿಗೆ ಸರ್ಕಾರದಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಸರ್ಕಾರ ಇತರೆ ಜನಾಂಗಕ್ಕೆ ಕೊಡುವ ಸೌಲಭ್ಯಗಳನ್ನು ನಮ್ಮ ಜನಾಂಗಕ್ಕೂ ಕೊಡುವಂತಾಗಲಿ ಈ ಒಂದು ವಿಷಯವಾಗಿ ತಾಲ್ಲೂಕು ಸೇರಿದಂತೆ ಇಡೀ ರಾಜ್ಯದ ಯಾದವ ಸಮುದಾಯದ ಎಲ್ಲಾ ಜನರು ಒಂದಾಗಿ ಸರಕಾರಕ್ಕೆ ಮನವಿ ನೀಡಬೇಕಾಗಿದೆ ಎಂದು ತಿಳಿಸಿದರು ..

ಇದೇ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಯಾದವ ಸಮುದಾಯದ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪದಾಧಿಕಾರಿಗಳು ಸೇರಿದಂತೆ ಯಾದವ ಸಮುದಾಯದ ಎಲ್ಲ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದರು …

ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!