ಕೊರಟಗೆರೆ ಕ್ಷೇತ್ರದ ಮಹಿಳೆಯರ ಕಷ್ಟಗಳಿಗೆ ಬಂಧುವಾಗಿ ಸ್ಪಂದಿಸುವೆ: ಶಾಸಕ ಡಾ.ಜಿ.ಪರಮೇಶ್ವರ

ಕೊರಟಗೆರೆ :- ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆಯಿಂದ ಪಟ್ಟಣದ ಗುರುಭವದಲ್ಲಿ ಏರ್ಪಡಿಸಿದ್ದ
ಅಮೃತ ಮಹಿಳಾ ಸ್ವಸಹಾಯ ಗುಂಪುಗಳಿಗೆ ಬೀಜಧನ
ಚಕ್‌ಗಳ ವಿತರಣಾ ಕಾರ್ಯಕ್ರಮನ್ನು ಉದ್ಘಾಟನೆ ಮಾಡಿ ..

ನಂತರ ಮಾತನಾಡಿದ ಶಾಸಕ ಡಾ.ಜಿ.ಪರಮೇಶ್ವರ ಭಾರತದಲ್ಲಿ
ಮಹಿಳೆಯರಿಗೆ ಕೊಟ್ಟತಂಹ ಪ್ರೋತ್ಸಾಹ ಬೇರೆ ಯಾವ
ದೇಶದಲ್ಲೂ ನೀಡಿಲ್ಲ, ಬಹಳಷ್ಟು ವಿದ್ಯಾವಂತರಲ್ಲದ
ಮಹಿಳೆಯರು ಈ ಸ್ವಸಹಾಯ ಸಂಘಗಳಿಂದ ಸ್ವಾವಲಂಬಿ
ಜೀವನವನ್ನು ನಡೆಸುತ್ತಿದ್ದಾರೆ, ಅಂತಹ ಮಹಿಳಾ
ಗುಂಪುಗಳಿಗೆ ಒಂದು ಲಕ್ಷ ವಂತಿಕೆ ನೀಡುತ್ತಿದ್ದು
ಇದು ಅವರ ಪ್ರಗತಿಗೆ ಪೂರಕವಾಗಿರುತ್ತದೆ,
ಕರ್ನಾಟಕದಲ್ಲಿ ಸುಮಾರು 1.65 ಲಕ್ಷ ನೊಂದಾಯಿತ
ಮಹಿಳಾ ಸಂಘಗಳಿವೆ ಇದು ನಮ್ಮ ರಾಜ್ಯದ ಸ್ತ್ರೀ
ಶಕ್ತಿಯಾಗಿದೆ, ನನ್ನ ವಿಧಾನ ಸಭಾ ಕ್ಷೇತ್ರದಲ್ಲಿ
ಸುಮಾರು 1800ಕ್ಕೂ ಹೆಚ್ಚು ಮಹಿಳಾ
ಸಂಘಗಗಳಿದ್ದು ಅವುಗಳ ಸ್ವಾಭಿಮಾನದ ಆರ್ಥಿಕ
ಪ್ರಗತಿಗೆ ಸಾಕಷ್ಟು ಪ್ರೋತ್ಸಾಹ ನೀಡಲಾಗುವುದು
ಕ್ಷೇತ್ರದ ಮಹಿಳೆಯರ ಕಷ್ಟಗಳಿಗೆ ಮಗನಾಗಿ ಅಣ್ಣ
ನಾಗಿ ಸ್ಪಂದಿಸುವುದಾಗಿ ತಿಳಿಸಿದರು.
ಹಿಂದಿನ ಎಸ್.ಎಂ.ಕೃಷ್ಣರವರ ಕಾಂಗ್ರೆಸ್ ಪಕ್ಷದ
ಸರ್ಕಾರದಲ್ಲಿ ಸಚಿವೆ ಮೋಟಮ್ಮ ರವರು ಮಹಿಳಾ ಮತ್ತು
ಮಕ್ಕಳ ಕಲ್ಯಾಣ ಸಚಿವರಾಗಿದ್ದ ಕಾಲದಲ್ಲಿ ಮಹಿಳೆಯರಿಗೆ
ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ತ್ರೀ ಶಕ್ತಿ
ಸಂಘಗಳ ಸ್ಥಾಪನೆಗೆ ಚಾಲನೆ ನೀಡಲಾಯಿತು. ಅಂದು
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ನನಗೆ
ಮಹಿಳಾ ಸಮಾವೇಶದ ಜವಾಬ್ದಾರಿ ವಹಿಸಿದರು, ಆಗ
ಹೆಬ್ಬೂರಿನಲ್ಲಿ 7 ಲಕ್ಷ ಮಹಿಳೆಯರ ಸಮ್ಮುಖದಲ್ಲಿ ಕಾಂಗ್ರೆಸ್
ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ರವರ

ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆದು ಇಂದು
ಮಹಿಳಾ ಸ್ವಸಹಾಯ ಸಂಘಗಳು ಬೃಹದಾರವಾಗಿ ಬೆಳೆದಿದೆ
ಎಂದರು. ತಮ್ಮ ಹೆಣ್ಣು ಮಕ್ಕಳನ್ನು ವಿದ್ಯಾವಂತರನ್ನಾಗಿ
ಮಾಡಿ ಎಲ್ಲಾರಂಗಗಳಲ್ಲೂ ಮಹಿಳೆಯರು ಮುಖ್ಯ
ಭೂಮಿಕೆಗೆ ಬರಬೇಕು ಎಂದರು.
ಕಾರ್ಯಕ್ರದಲ್ಲಿ ತಾಲೂಕು ಮಹಿಳಾ ಮತ್ತು ಮಕ್ಕಳ
ಅಭಿವೃಧಿ ಇಲಾಖೆ ಅಧಿಕಾರಿ ಅಂಬಿಕಾ, ಸಂಯೋಜಕ ಜಗದೀಶ್,
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೋಡ್ಲಹಳ್ಳಿ
ಅಶ್ವಥನಾರಾಯಣ, ಅರಕೆರೆ ಶಂಕರ್, ಮಹಿಳಾ ಅದ್ಯಕ್ಷೆ
ಜಯಮ್ಮ ಸೇರಿದಂತೆ ಇತರರು ಹಾಜರಿದ್ದರು.

ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!