ಮಧುಗಿರಿಯ ದಬ್ಬೇಗಟ್ಟ ಪಂಚಾಯಿತಿಯಲ್ಲಿ ತಿಂಗಳಿಗೊಂದು ಪಿಡಿಒ ಬದಲಾವಣೆ ಆಗುತ್ತಿರುವ ಬಗ್ಗೆ ಅಧ್ಯಕ್ಷರು ಮತ್ತು ಸದಸ್ಯರು ಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಇದುವರೆಗೂ ಹಾಕಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯಿತಿ ಅಧ್ಯಕ್ಷೆ ಭಾರತಿ ಸಿದ್ದೇಶ್ ನಮ್ಮ ಪಂಚಾಯಿತಿಯಲ್ಲಿ ಎರಡು ತಿಂಗಳಿಗೊಮ್ಮೆ ಒಬ್ಬ ಪಿಡಿಓ ಬದಲಾಗುತ್ತಿದ್ದಾರೆ, ಇದರಿಂದ ನಮ್ಮ ಪಂಚಾಯಿತಿಯಲ್ಲಿ ಯಾವುದೇ ಅಭಿವೃದ್ಧಿ ಕಾಣಲಾಗುತ್ತಿಲ್ಲ, ಇದರಿಂದ ಜನರಿಗೂ ತೊಂದರೆ ಪಂಚಾಯಿತಿ ವ್ಯವಸ್ಥೆಗೂ ತೊಂದರೆಯಾಗುತ್ತದೆ. ಸಂಬಂಧಪಟ್ಟ ಇ ಓ ಗೆ ಬದಲಾವಣೆ ಬೇಡ ಎಂದು ತಿಳಿಸಿದರು ಆರನೇ ಪಿಡಿಒ ಆಗಮನವಾಗುತ್ತಿದೆ. ಈಗಿರುವ ಪಿಡಿಓ ನಮಗೆ ಸಾಕಾಗಿದೆ ಮತ್ತೊಮ್ಮೆ ಬದಲಾವಣೆ ಆಗುವಂತಿದ್ದರೆ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್ ಮುಂದೆ ನಾವೆಲ್ಲರೂ ಧರಣಿ ಮಾಡಬೇಕಾಗುತ್ತದೆ ಎಂದು ಹೇಳಿದರು.
ಇನ್ನು ಮತ್ತೊಬ್ಬ ಪಂಚಾಯಿತಿ ಸದಸ್ಯನಾದ ಶ್ರೀನಿವಾಸ್ ಮಾತನಾಡಿ ನಿಜವಾಗಿಯೂ ನಾವು ಆಡಳಿತಕ್ಕೆ ಬಂದು ಒಂದು ವರ್ಷ ಆರು ತಿಂಗಳು ಕಳೆದಿವೆ ಇಲ್ಲಿಯವರೆಗೂ ಆರು ಪಿಡಿಒವಗಳ ಬದಲಾವಣೆ ಆಗುತ್ತಿದೆ. ಇದರಿಂದ ರೈತರಿಗೆ ಬಹಳ ಸಮಸ್ಯೆಯಾಗುತ್ತಿದೆ, ನಮ್ಮ ರೈತ ಮತಬಾಂಧವರಿಗೆ ನಮ್ಮೆಲ್ಲ ಸದಸ್ಯರಿಗೆ ಮುಖ ತೋರಿಸಲು ಆಗುತ್ತಿಲ್ಲ ಯಾಕೆಂದರೆ ಜನರ ಹಿತ ಕಾರ್ಯಗಳು ಮಾಡಲು ನಮ್ಮೊಂದ ಆಗುತ್ತಿಲ್ಲ, ಇದಕ್ಕೆ ಕಾರಣ ಪಿಡಿಒಗಳ ಬದಲಾವಣೆ, ಆದುದರಿಂದ ಇಂತಹ ಅನುಮಾನಸ್ಪದ ಬದಲಾವಣೆಗಳನ್ನು ಖಂಡಿಸುತ್ತೇವೆ ಹಾಗೂ ಇದರ ಪರಿಶೀಲನೆ ನಡೆಸಿ ಎಂದು ಹೇಳಿದರು.
ಹೌದು ಒಂದು ಪಂಚಾಯಿತಿಯಲ್ಲಿ ಇಷ್ಟೊಂದು ಅನುಮಾನಸಪದವಾದ ಎರಡು ತಿಂಗಳಿಗೊಮ್ಮೆ ಪಿಡಿಓಗಳು ಬದಲಾಗುತ್ತಿರುವುದನ್ನು ನಿಜವಾಗಿಯೂ ಸರ್ಕಾರ ಇದನ್ನು ಗಮನಿಸಬೇಕಾಗಿದೆ. ಇದರ ಹಿಂದೆ ಯಾವುದೋ ಕೈವಾಡ ಇದ್ದೇ ಇರುತ್ತದೆ ಎಂದೆನಿಸುತ್ತದೆ.
ಇನ್ನು ಈ ಸಂದರ್ಭದಲ್ಲಿ ತವೆಗಟ್ಟ ಪಂಚಾಯತಿಯ ಸದಸ್ಯರುಗಳು, ಉಪಾಧ್ಯಕ್ಷರು, ಸಾರ್ವಜನಿಕರು ಹಾಜರಿದ್ದರು.