ಕೊರಟಗೆರೆ: ವಿದ್ಯಾರ್ಥಿಗಳಿಂದ ರಾರಾಜಿಸಿದ 1700 ಮೀ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆ

ಕೊರಟಗೆರೆ: ಕೊರಟಗೆರೆ ಇತಿಹಾಸದಲ್ಲಿ ಮೊಟ್ಟ
ಮೊದಲ ಬಾರಿಗೆ ಸ್ವತಂತ್ರ ಅಮೃತ ಮಹೋತ್ಸವದ ಅಂಗವಾಗಿ 1700ಮೀ ಉದ್ದದ ತ್ರಿವರ್ಣ ಧ್ವಜವನ್ನು ಸರ್ಕಾರಿ ಬಸ್ ನಿಲ್ದಾಣದಿಂದ,
ಸರ್ಕಾರಿ ಜೂನಿಯರ್ ಕಾಲೇಜು ಮೈದಾನದವರೆಗೆ ಆಯೋಜಕರು, ಪಟ್ಟಣದ ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ವಂದೇ ಮಾತರಂ ಎಂಬ ಘೋಷಣೆಯೊಂದಿಗೆ ಮೆರವಣಿಗೆ ಮುಖಾಂತರ ಸಾಗುತ್ತ ಸಾರ್ವಜನಿಕರಲ್ಲಿ ದೇಶಾಭಿಮಾನವನ್ನು ಹೆಚ್ಚಿಸುವಂತಹ ಕೆಲಸ ಮಾಡಿದರು.
ಆಯೋಜಕರು ಬಾಲಾಜಿ ದರ್ಶನ್ಮೆ ರವಣಿಗೆಯ ವೇಳೆ ಮಾತನಾಡಿ, 75ನೇ ಸ್ವತಂತ್ರ ಅಮೃತ ಮಹೋತ್ಸವದ ಅಂಗವಾಗಿ ಕೊರಟಗೆರೆಯ ಇತಿಹಾಸದಲ್ಲೇ ಪ್ರಪ್ರಥಮವಾಗಿ 1700ಮೀ ಉದ್ದದ ತ್ರಿವರ್ಣ
ಧ್ವಜ ಮೆರವಣಿಗೆಯ ಕಾರ್ಯಕ್ರಮ ನಡೆಯುತ್ತಿದೆ. ರಾಷ್ಟ್ರಧ್ವಜ ಹಿಡಿದು ಸಾಗುವುದರಿಂದ ಇನ್ನಷ್ಟೂ ಹೆಚ್ಚಿನ ನಮ್ಮ ದೇಶದ ಬಗ್ಗೆ ಇರುವ ಅಭಿಮಾನ ಸಾರ್ವಜನಿಕರಲ್ಲಿ ಬೆಳೆಯಲಿ ಎಂಬ ಹಿತದೃಷ್ಟಿಯಿಂದ ಈ ಕಾರ್ಯಕ್ರಮವನ್ನು ನಮ್ಮ ಬಾಲಾಜಿ ಟೆಕ್ಸ್ ಟೈಲ್ಸ್ನ ಮಾಲೀಕರ ಕುಟುಂಬದಿಂದ ಆಯೋಜನೆ ಮಾಡಲಾಗಿದೆ ಎಂದರು.

ವಾಸವಿ ಯುವಜನ ಸಂಘದ ನಿರ್ದೇಶಕ
ಬದ್ರಿಪ್ರಸಾದ್ ಮಾತನಾಡಿ, 17೦೦ ಮೀ ಉದ್ದದ
ತ್ರಿವರ್ಣಧ್ವಜ ಮೆರವಣಿಗೆ ನಮ್ಮ ಪಟ್ಟಣದಲ್ಲಿ
ಒಂದು ಹಬ್ಬದ ರೀತಿಯಲ್ಲಿ ಕಾಣುತ್ತಿದೆ. 1ಸಾವಿರಕ್ಕೂ ಹೆಚ್ಚು
ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ 1ಕಿ.ಮೀವರೆಗೆ ತ್ರಿವರ್ಣ ಧ್ವಜ ಹಿಡಿದು ಬರುತ್ತಿರುವುದನ್ನು ಕಾಣಲು ನಾವುಗಳು ಭಾಗ್ಯವಂತರು ಎಂದು ಹೆಮ್ಮೆಯ ಮಾತುಗಳನ್ನಾಡಿದರು.

ರಾಷ್ಟ್ರಧ್ವಜ ಮೆರವಣಿಗೆಯಲ್ಲಿ ಆಯೋಜಕರಾದ ಬಾಲಾಜಿ ಟೆಕ್ಸ್ ಟೈಲ್ಸ್ ಮಾಲೀಕರಾದ ದರ್ಶನ್ ಶಿಲ್ಪಾ ಹಾಗೂ ಕುಟುಂಬಸ್ಥರು ಸೇರಿದಂತೆ ಕಾಳಿದಾಸ ಫ್ರೌಢಶಾಲೆ, ರವೀಂದ್ರ ಭಾರತಿ ಶಾಲೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಪ್ರಿಯದರ್ಶಿನಿ ಪಿಯು ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು, ವಾಸವಿ ಯುವಜನ ಸಂಘದ ಪಧಾದಿಕಾರಿಗಳು ಈ ಮೆರವಣಿಗೆಯಲ್ಲಿ ಭಾಗಿಯಾಗಿ ನಾಗರೀಕರಲ್ಲಿ ದೇಶದ ಗೌರವದ ಬಗ್ಗೆ ಅರಿವು ಮೂಡಿಸಿ ಸಾರ್ವಜನಿಕರಿಂದ ಮೆಚ್ಚುಗೆ ಮಾತುಗಳು ಕೇಳಿಬಂದವು .

ಈ ಸಂದರ್ಭದಲ್ಲಿ ಗ್ರೇಡ್ 2 ತಹಸಿಲ್ದಾರ್ ನರಸಿಂಹಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್, ಸಬ್ ಇನ್ಸ್ಪೆಕ್ಟರ್ ನಾಗರಾಜು, ಕಂದಾಯ ಅಧಿಕಾರಿಗಳಾದ ಪ್ರತಾಪ್, ಬಸವರಾಜು, ಲಕ್ಷ್ಮಿ ನಾರಾಯಣ, ಗಿರೀಶ್, ಪ್ರಭಾಕರ್, ನಾಗರಾಜ್ ಶೆಟ್ಟಿ, ಬಾಲಾಜಿದರ್ಶನ್, ಬದ್ರಿನಾಥ್, ಪದ್ಮರಮೇಶ್, ಪಟ್ಟಣದ ಎಲ್ಲಾ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ನಾಗರಿಕರು ಭಾಗವಹಿಸಿದ್ದರು…

ವರದಿ ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!