ಗುಬ್ಬಿ: ತಾಲೂಕಿನ ಚೇಳೂರು ಹೋಬಳಿ ಚಿಂದಿಗೆರೆ ಗ್ರಾಮದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ಕಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ತಹಸಿಲ್ದಾರ್ ಬಿ ಆರತಿ ಅವರು ಚಾಲನೆ ನೀಡಿದರು.
ಸಾರ್ವಜನಿಕರ ಬಳಿ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಈಗಾಗಲೇ ತಾಲೂಕಿನಲ್ಲಿ ವೇತನಕ್ಕೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಿಗರು ಪ್ರತಿ ಮನೆಗೂ ತೆರಳಿ ಸ್ಥಳದಲ್ಲಿಯೇ ಅರ್ಜಿಯನ್ನು ಪಡೆದು ಕೆಲವೇ ದಿನಗಳಲ್ಲಿ ವೇತನ ಸಿಗುವಂತೆ ಮಾಡಲಾಗುತ್ತಿದ್ದು, ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ಸಿಗುವಂತೆ ಮಾಡಲು ಸರ್ಕಾರವು ಈ ರೀತಿಯ ಕಾರ್ಯಕ್ರಮಗಳ ಮುಖೇನ ವ್ಯವಸ್ಥೆ ಮಾಡುತ್ತಾ ಇದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಇಂದು 60 ಮಂದಿಗೆ ವೇತನದ ಪ್ರಮಾಣ ಪತ್ರ ನೀಡಿದ್ದು, 16 ಮಂದಿಗೆ ಆರೋಗ್ಯ ಇಲಖೆಯಿಂದ ಕನ್ನಡಕವನ್ನು ವಿತರಿಸಲಾಗಿದೆ ಎಂದ ಅವರು 16 ಅರ್ಜಿಗಳು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳು ಬಂದಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಇಓ ಪರಮೇಶ್, ತಾಲೂಕು ವೈದ್ಯಾಧಿಕಾರಿ Dr ಬಿಂದು ಮಾಧವ, ಕಂದಾಯ ನಿರೀಕ್ಷಕ ಆರ್ ಜಿ.ನಾಗಭೂಷಣ್, ಉಪ ತಹಶೀಲ್ದಾರ್ ವೆಂಕಟ ರಂಗನ್, ಸುಮತಿ, ವೆಂಕಟೇಶ್, ನಾಗಭೂಷಣ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು