ಕೋಳಾಲ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ರೈತ ಸಾವುಕೊರಟಗೆರೆ :- ತಾಲ್ಲೂಕಿನ ಕೋಳಾಲ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತನೋರ್ವ ಸಾವನ್ನಪ್ಪಿರುವ ಘಟನೆ ಕೊಳಲು ಹೋಬಳಿಯ ಕ್ಯಾತಗಾನಹಳ್ಳಿಯಲ್ಲಿ ನಡೆದಿವೆ ..


ರೈತ ಮಹೇಶ್ ತೋಟದ ಕಡೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಸಂಜೆ 6ಗಂಟೆಗೆ ಮನೆಯಿಂದ ಹೊರಟಿದ್ದಾನೆ ತೋಟಕ್ಕೆ ಹೋದವನು ರಾತ್ರಿ 8ಗಂಟೆಯಾದರೂ ಬಾರದೇ ಇರುವುದನ್ನು ಕಂಡ ಮನೆಯವರು ಫೋನ್ ಮಾಡಿದ್ದಾರೆ ಎಷ್ಟು ಬಾರಿ ಫೋನ್ ಮಾಡಿದರೂ ಉತ್ತರಿಸಿದ ಮಹೇಶ್ ಮನೆಯವರು ಗಾಬರಿಗೊಂಡು ಹುಡುಕಾಡಲು ಪ್ರಯತ್ನಿಸಿದ್ದಾರೆ ತೋಟದ ಬಳಿ ಹೋಗಿ ನೋಡಿದಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವುದನ್ನು ಗಮನಿಸಿದ್ದಾರೆ ..

ಕೂಡಲೇ ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ಥಳಕ್ಕೆ ಬಾರದೇ ಇರುವ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ..

ಬೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಬ್ಬ ರೈತನ ಸಾವು ಆಗಿದೆ ಎಂದು ಸ್ಥಳೀಯ ರೈತರು ಹಾಗೂ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ …

ಕೊಳಲು ವ್ಯಾಪ್ತಿಯಲ್ಲಿ ಬರುವ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಅಲ್ಲಿನ ಹಳ್ಳಿಗಳಲ್ಲಿ ಇನ್ನೂ ಅನೇಕ ಸಮಸ್ಯೆಗಳು ಇದೇ ರೀತಿ ಎಂದು ಸ್ಥಳಿಯ ರೈತರು ತಿಳಿಸಿದ್ದಾರೆ

ಸುಖಾಸುಮ್ಮನೆ ಕೊರಟಗೆರೆಯ ಬೆಸ್ಕಾಂ ಅಧಿಕಾರಿಗಳಿಗೆ ಫೋನ್ ಮಾಡಿ ಪದೇಪದೆ ಎಲ್ ಸಿ ತೆಗೆದುಕೊಳ್ಳುವುದು ಬಿಟ್ಟರೆ ಇವರ ಕೆಲಸ ಏನೂ ಇಲ್ಲ ಎನ್ನುವುದು ಇಲ್ಲಿನ ರೈತರ ಆರೋಪ

ಮೃತ ಮಹೇಶನಿಗೆ ಇತ್ತೀಚೆಗಷ್ಟೇ ಮದುವೆಯಾಗಿತ್ತು ಮದುವೆಯಾಗಿ ವರ್ಷವೂ ಕಳಿಯದ ಮಹೇಶ್ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ ..

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ

ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!