ಮಧುಗಿರಿ: ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಎಂದಿಗೂ ಗೆಲ್ಲದ
ಮಧುಗಿರಿ ಮತಕ್ಷೇತ್ರದಲ್ಲಿ ಸ್ಥಳೀಯ ಯುವಕ ನೀರಕಲ್ಲು ಶಿವಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿ ತಳಮಟ್ಟದಿಂದ ಪಕ್ಷ ಸಂಘಟನೆಗೆ ಅಡಿಪಾಯ ಹಾಕುವಂತೆ ಹಲವು ಬಿಜೆಪಿ ರಾಜ್ಯ ನಾಯಕರು ಬಿಜೆಪಿ ಪರಮೋಚ್ಚ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜೀ ಅವರಿಗೆ ಮನವಿ ಮಾಡಿದ್ದಾರೆ.

ಪ್ರತಿ ಚುನಾವಣೆಯಲ್ಲೂ ಟಿಕೆಟ್ ಪಡೆದವರು ಪಕ್ಷಕ್ಕೆ ಹಾನಿ ಮಾಡುತ್ತಿದ್ದಾರೆ. ಸ್ಥಳೀಯ ನಾಯಕತ್ವ ಬೆಳೆಸುವ ಮೂಲಕ ಪಕ್ಷ ಬಲಪಡಿಸಬೇಕು ಎಂದು ಕೋರಿದ್ದಾರೆ.
ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಏಕೆ ತಳಮಟ್ಟದಲ್ಲಿ ಪಕ್ಷ ಸಂಘಟನೆ ಆಗುತ್ತಿಲ್ಲ ಅಲ್ಲಿನ ಜಾತಿ ಸಮೀಕರಣ, ಸಾಮಾಜಿಕ ವ್ಯವಸ್ಥೆ ಹೇಗಿದೆ. ಕಳೆದ 10 ಚುನಾವಣೆಗಳಲ್ಲಿ ಜನಸಂಘ / ಬಿಜೆಪಿ ಸಾಧನೆ ಏನು. ನಿಷ್ಠಾವಂತ ಕಾರ್ಯಕರ್ತರು ಇದ್ದಾರೆಯೇ ಎಂದು ನೀರಕಲ್ಲು ಶಿವಕುಮಾರ್ ಬಳಿ ಆರೆಸ್ಸೆಸ್ ಪ್ರಚಾರ್ ಪ್ರಮುಖ್ ವಾದಿರಾಜ್ ಅವರು ಅನೇಕ ಸಲ ಚರ್ಚಿಸಿದ್ದು ಇದೇ ವಿಚಾರವನ್ನು ಸಂತೋಷ್ ಜೀ ಅವರು ಕೂಡಾ ನೀರಕಲ್ಲು ಶಿವಕುಮಾರ್ ಕೇಳಿದ್ದಾರೆ.
ಇತ್ತೀಚಿಗೆ ಭೇಟಿ ಮಾಡಿದಾಗಲೂ ಸಂಪೂರ್ಣ ವರದಿ ಸಿದ್ಧಪಡಿಸಿಕೊಂಡು ದೆಹಲಿಗೆ ಬಂದು ಭೇಟಿ ಆಗುವಂತೆ ಸೂಚಿಸಿದ್ದಾರೆ.

ಸಂತೋಷ್ ಜೀ ಅವರು ಪತ್ರಕರ್ತ ಶಿವಕುಮಾರ್ ಅವರಿಗೆ ಅನೇಕ ವರ್ಷಗಳಿಂದ ಸುಮಧುರ ಬಾಂಧವ್ಯ ಹೊಂದಿದ್ದು ಸಾಹಿತ್ಯಿಕ ಮತ್ತು ದೇಶದ ಆಗು ಹೋಗುಗಳ ಬಗ್ಗೆ ಅನೇಕ ಸಲ ಚರ್ಚಿಸಿ ವೈಚಾರಿಕ ಸಂವಹನ ನಡೆಸುತ್ತಾರೆ. ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಚಿ.ನಾ.ರಾಮು ಅವರು ಸಂತೋಷ್ ಜೀ ಅವರಿಗೆ ಅತ್ಯಂತ ಆಪ್ತರಾಗಿದ್ದು ಶಿವಕುಮಾರ್ ಸ್ಥಳೀಯ ಪ್ರತಿಭಾವಂತ, ಬಡವರು ಮತ್ತು ದೀನ ದಲಿತರ ಪರ ಅಪಾರ ಕಾಳಜಿ ಇರುವ ಯುವಕ ಅಲ್ಲದೆ ಮಧುಗಿರಿಯಲ್ಲಿ ಬಲಿಷ್ಠವಾಗಿರುವ ಸಮುದಾಯಕ್ಕೆ ಸೇರಿದವರು ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೂ ಶಿವಕುಮಾರ್ ನಿಕಟ ಸಂಪರ್ಕ ಹೊಂದಿದ್ದಾರೆ. ಹಿಂದೆ ಸಂಸದ ಬಿ.ಎನ್. ಬಚ್ಚೇಗೌಡರ ಮಾಧ್ಯಮ ಸಲಹೆಗಾರರಾಗಿ ಸೇವೆ ಮಾಡಿದ್ದಾರೆ. ನಾಡಿನ ಪ್ರಮುಖ ಮಾಧ್ಯಮ ಸಂಸ್ಥೆ ಗಳಲ್ಲಿ 17 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೃಜನಶೀಲ ಲೇಖಕರಾಗಿದ್ದಾರೆ. ಬಹುಕಾಲದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ಮತ್ತು ಬಿಜೆಪಿ ರಾಜ್ಯ ನಾಯಕರ ನಿಕಟವರ್ತಿಯಾಗಿದ್ದಾರೆ.