ಗುಬ್ಬಿ: ಪಟ್ಟಣದ ಐತಿಹಾಸಿಕ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಛಲವಾದಿ ಕಾಯಕ ನಡೆಸುತ್ತಿದ್ದ ಕೆಂಚ ಮಾರಯ್ಯ ಅವರ ನಿವೃತ್ತಿ ಹಿನ್ನಲೆ ಯೋಗೀಶ್ ಅವರನ್ನು ನೇಮಕ ಮಾಡಿ ಹದಿನೆಂಟು ಕೋಮಿನ ಮುಖಂಡರ ಸಮ್ಮುಖದಲ್ಲಿ ಅಧಿಕೃತ ಘೋಷಣೆ ಮಾಡಲಾಯಿತು.
ಕಳೆದ 45 ವರ್ಷದಿಂದ ಛಲವಾದಿ ಧರ್ಮ ನಿಷ್ಠೆ ಕಾಯಕ ನಡೆಸಿದ್ದ ಕೆಂಚ ಮಾರಯ್ಯ ಅವರ ಸುಧೀರ್ಘ ಸೇವೆ ಸ್ಮರಿಸಿದ ಎಲ್ಲಾ ಕೋಮಿನ ಮುಖಂಡರು ಮುಂದೆ ಈ ಕಾಯಕ ನಡೆಸಲು ಜಿ.ಡಿ.ಯೋಗೀಶ್ ಅವರನ್ನು ನೇಮಕ ಮಾಡಿ ಜವಾಬ್ದಾರಿ ವಹಿಸಲಾಯಿತು.
ದೇವಾಲಯದ ಗಂಧ ಬಟ್ಟಲು ಹೊತ್ತು ಧಾರ್ಮಿಕ ಸೇವೆ ನಡೆಸುವ ಶ್ರೇಷ್ಠ ಕಾಯಕವನ್ನು ಅಚ್ಚುಕಟ್ಟಾಗಿ ನಡೆಸಿ ಹದಿನೆಂಟು ಕೋಮಿನ ಭಕ್ತರು ಹಾಗೂ ದೇವಾಲಯದ ವಿಧಿ ವಿಧಾನಗಳಂತೆ ನಡೆದುಕೊಳ್ಳುವುದಾಗಿ ದೀಕ್ಷೆ ಪಡೆದ ಜಿ.ಡಿ.ಯೋಗೀಶ್ ನುಡಿದರು. ಈ ಸಂದರ್ಭದಲ್ಲಿ ಹದಿನೆಂಟು ಕೋಮಿನ ಮುಖಂಡ ಪಟೇಲ್ ಕೆಂಪೇಗೌಡ, ಪಪಂ ಸದಸ್ಯರಾದ ಕುಮಾರ್, ರೇಣುಕಾ ಪ್ರಸಾದ್, ಪ್ರಕಾಶ್, ಮುಖಂಡರಾದ ಸೋಮಶೇಖರಪ್ಪ, ವಿಜಯಕುಮಾರ್, ಅರ್ಚಕರಾದ ರಾಜು, ರುದ್ರೇಶ್, ನಾರಾಯಣ್ ಇತರರು ಇದ್ದರು.