ವಸತಿ ಯೋಜನೆಯ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಿ: ಶಾಸಕ ಎಂ.ವಿ.ವೀರಭದ್ರಯ್ಯ

ಮಧುಗಿರಿ: ವಸತಿ ಯೋಜನೆಯ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ತಾಲೂಕಿನ ದೊಡ್ಡೇರಿ ಹೋಬಳಿಯ ರಂಗಾಪುರ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ ಮಂಜೂರಾದ ವಸತಿ ಸೌಲಭ್ಯಗಳ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ ಮಾಡಿ ಮಾತನಾಡುತ್ತಾ  ಮನುಷ್ಯನಿಗೆ ಬದುಕಲು ಸೂರು ಮುಖ್ಯ , ಸರ್ಕಾರ ವಸತಿ ರಹಿತರಿಗೆ ವಸತಿ ಸವಲತ್ತು ಕಲ್ಪಿಸಿದ್ದು ಸದ್ವಿನಿಯೋಗವಾಗಬೇಕು. ತಾಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು ಕೆರೆಕಟ್ಟೆಗಳು ತುಂಬಿವೆ. ಸುವರ್ಣಮುಖಿನದಿಗೆ 12ಕೋಟಿ ವೆಚ್ಚದಲ್ಲಿ 6 ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದು ಎಲ್ಲಾ ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿವೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಅಕ್ಕಪಕ್ಕದ ಕೊಳವೆಬಾವಿಗಳಲ್ಲಿ ನೀರು ಪುನಶ್ಚೇತನ ಗೊಂಡಿವೆ. ರೈತರ ಕೃಷಿಚಟುವಟಿಕೆಗೆ ಅನುಕೂಲವಾಗುತ್ತಿದೆ. ಕುಡಿಯುವ ನೀರಿಗೂ ಅಭಾವವಿರುವುದಿಲ್ಲ ಎಂದರು. 

ಕಾರ್ಯಕ್ರಮದಲ್ಲಿ  ಗ್ರಾ.ಪಂ ಅಧ್ಯಕ್ಷರಾದ  ಜ್ಯೋತಿ, ಉಪಾಧ್ಯಕ್ಷ  ನಾಗೇಶ್ ,  ಸದಸ್ಯರಾದ  ಮಂಜುಳಾ ,  ಶ್ರೀನಿವಾಸ್,ಮುದ್ದೋಬಳಯ್ಯ,  ಸಾಕಮ್ಮ ,  ರಾಧಮ್ಮ,ಗೋವಿಂದಪ್ಪ,  ಕಾಮರಾಜು, ಮುಖಂಡರಾದ ಪ್ರಶಾಂತ್, ರಘು, ವಿಜಯ್ ಪ್ರಕಾಶ್, ಉಮೇಶ್,  ಬಾವಿಮನೆ ರಂಗನಾಥ್, ನವೀನ್ , ಪಿಡಿಒ ಜುಂಜೇಗೌಡ,  ಕಾರ್ಯದರ್ಶಿ ಚಿಕ್ಕನರಸಯ್ಯ , ರಾಕೇಶ್, ಹಾಗೂ  ಗ್ರಾ.ಪಂ ಸಿಬ್ಬಂದಿ ವರ್ಗ ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!