ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಆಟಗಾರರಿಗೆ ಸಮವಸ್ತ್ರ ನೀಡಿದ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು

ಗುಬ್ಬಿ: ಪಟ್ಟಣದಲ್ಲಿ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಐಡಿ ಕಾರ್ಡ್ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿದ ಸ್ನೇಹಮಯಿ ಯುವಕ ಸಂಘದ ಆಟಗಾರರಿಗೆ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಅವರು ಸಮವಸ್ತ್ರ ನೀಡಿ ಪ್ರೋತ್ಸಾಹಿಸಿದರು.

ಇದೇ ತಿಂಗಳ 27 ಮತ್ತು 28 ಎರಡು ದಿನ ನಡೆಯುವ ಹೊನಲು ಬೆಳಕಿನ ಪಂದ್ಯಾವಳಿಗೆ ರಾಜ್ಯ ಮಟ್ಟದ ಹೆಸರಾಂತ ತಂಡಗಳು ಆಗಮಿಸಲಿದ್ದು, ರಾಷ್ಟ್ರೀಯ ಮಟ್ಟದ ವಾಲಿಬಾಲ್ ಕ್ರೀಡಾಪಟುಗಳು ತಮ್ಮ ಆಟದ ಕೌಶಲ್ಯ ಪ್ರದರ್ಶಿಸಲಿದ್ದಾರೆ. ಇಂತಹ ಸಂದರ್ಭದಲ್ಲಿ ಗುಬ್ಬಿಯ ಕ್ರೀಡಾಪಟುಗಳು ಶಿಸ್ತು ಬದ್ದ ಕ್ರೀಡಾಳುಗಳಂತೆ ಕಾಣಲು ಅವಶ್ಯ ಸಮವಸ್ತ್ರವನ್ನು ಸಂಘದ ಎಲ್ಲಾ ಸದಸ್ಯರಿಗೆ ನೀಡಲಾಗಿದೆ ಎಂದು ಮುಖಂಡ ಬಿ.ಎಸ್.ನಾಗರಾಜು ತಿಳಿಸಿದರು.

ಈ ಸಂದರ್ಭದಲ್ಲಿ ಪಪಂ ಮಾಜಿ ಅಧ್ಯಕ್ಷ ಜಿ.ಡಿ. ಸುರೇಶಗೌಡ, ಮುಖಂಡರಾದ ಗಂಗಾಧರ್, ಡಿ.ರಘು, ಗೋವಿಂದರಾಜು, ಕಡ್ಡಿಪುಡಿ ಮಲ್ಲಿಕಾರ್ಜುನ್, ಮಧು, ರಾಜ್ಯ ಮಟ್ಟದ ವಾಲಿಬಾಲ್ ಆಟಗಾರ ಗಿರೀಶ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!