ತುಮಕೂರು: ಶಿರಾ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಕ್ರೂಸರ್ನಲ್ಲಿ ಪ್ರಯಾಣಿಸುತ್ತಿದ್ದ 23 ಮಂದಿ ಕಾರ್ಮಿಕರರೆಲ್ಲರೂ ನಿದ್ರೆಯ ಮಂಪರಿನಲ್ಲಿದ್ದರು. ಈ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದಿದ್ದು, ಘೋರ ದುರಂತ ಸಂಭವಿಸಿದೆ.
ಅಪಘಾತದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡರು ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದ್ದಲ್ಲದೆ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಭೀಕರ ಅಪಘಾತದಲ್ಲಿ ಗಾಯಗೊಂಡ ಮಗುವನ್ನ ಎತ್ತಿಕೊಂಡು ಹಾರೈಕೆ ಮಾಡಿ ಸಂತೈಸಿದ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್
ಯಾರ ಮಗುವಾದ್ರೇನೂ ಖಾಕಿಯೊಳಗೊಬ್ಬ ಪ್ರೀತಿ ಹಂಚುವ ದೇವತಾ ಮನುಷ್ಯನಿದ್ದಾನೆ

ಮಗುವನ್ನು ತಾಯಿಯಂತೆ ಸಂತೈಸಿ ಎಲ್ಲರಿಗೂ ಧೈರ್ಯ ತುಂಬುವ ಕೆಲಸವನ್ನು ನಮ್ಮ ಹೆಮ್ಮೆಯ ದಕ್ಷ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ರವರು ಸದ್ದಿಲ್ಲದೆ ಸೇವೆ ಸಲ್ಲಿದ್ದಾರೆ ಇಂಥ ಮಾತೃ ಹೃದಯಿ ಅಧಿಕಾರಿಗೆ ಸಾರ್ವಜನಿಕರಿಂದ ಪ್ರಶಂಸೆಯೇ ಬರುತ್ತಿದ್ದೆ
ನಮ್ಮ ಜಿಲ್ಲೆಗೆ ಒಬ್ಬ ಪ್ರಾಮಾಣಿಕ, ನಿಷ್ಟಾವಂತ, ಮಾತೃ ಹೃದಯಿ, ಸ್ನೇಹಜೀವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಇರುವುದು ಸಂತೋಷದ ವಿಷಯ ಇವರ ಸೇವೆ ಹೀಗೆ ನಿರಂತರವಾಗಿ ನಡೆಯಲಿ ಎಂದು ಪತ್ರಿಕೆ ಆಶಿಸುತ್ತದೆ.