ನಿಟ್ಟೂರು ಶ್ರೀ ಸಿದ್ದರಾಮೇಶ್ವರ ಸಹಕಾರ ಬ್ಯಾಂಕ್ ನವೀಕರಣ ಶಾಖೆ ಆರಂಭ

ಗುಬ್ಬಿ: ತಾಲ್ಲೂಕಿನ ನಿಟ್ಟೂರು ಮೈಸೂರು ರಸ್ತೆಯಲ್ಲಿ ನವೀಕರಣಗೊಂಡ ಶ್ರೀ ಸಿದ್ದರಾಮೇಶ್ವರ ಸಹಕಾರ ಬ್ಯಾಂಕ್ ಕಚೇರಿಯನ್ನು ಬ್ಯಾಂಕ್ ಅಧ್ಯಕ್ಷ ಜಿ.ಎಸ್.ರವಿಶಂಕರ್ ಉದ್ಘಾಟಿಸಿದರು.

ಗ್ರಾಮೀಣ ಭಾಗದಲ್ಲಿ ರೈತರ ನೆರವಿಗೆ ನಿಂತ ಈ ಸಿದ್ದರಾಮೇಶ್ವರ ಬ್ಯಾಂಕ್ ಹಲವು ವರ್ಷದಿಂದ ವಹಿವಾಟು ನಡೆಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಈ ಬ್ಯಾಂಕ್ ಗುರುತಿಸಿಕೊಂಡು ಬೆಳೆದಿದೆ ಎಂದು ಅಧ್ಯಕ್ಷ ಜಿ.ಎಸ್.ರವಿಶಂಕರ್ ಹೇಳಿದರು.

ವ್ಯಾಪಾರಿ ಕೇಂದ್ರವಾದ ನಿಟ್ಟೂರು ಹೋಬಳಿಯಲ್ಲದೇ ತಾಲ್ಲೂಕಿನ ಪ್ರಮುಖ ಸಹಕಾರ ಬ್ಯಾಂಕ್ ಎನಿಸಿಕೊಂಡು ಶಾಖೆಗೆ ನವೀಕರಿಸಿದ ಕಚೇರಿ ಸಿದ್ದಪಡಿಸಿ ಗ್ರಾಹಕರ ಬಳಕೆಗೆ ಲೋಕಾರ್ಪಣೆ ಮಾಡಲಾಗಿದೆ. ರೈತರ ಸಹಕಾರಕ್ಕೆ ಬೆನ್ನಲುಬಾಗಿ ಗ್ರಾಹಕರ ಅನುಕೂಲಕ್ಕೆ ತಕ್ಕನಾದ ಸಾಲ ಸೌಲಭ್ಯ ಸಹ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಜೆ.ಎಂ.ಸುರೇಶ್ ಹಾಗೂ ಕಾರ್ಯಕಾರಿಣಿ ಮಂಡಳಿ ಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!