ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ : ಜಿ.ಸಿ.ಕೃಷ್ಣಮೂರ್ತಿ

ಗುಬ್ಬಿ: ಇಂದಿನ ದಿನಮಾನದಲ್ಲಿ ರೋಗಗಳ ಅಟ್ಟಹಾಸ ಹೆಚ್ಚಿದೆ. ಈ ನಿಟ್ಟಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ವ್ಯಾಯಾಮ ಅಗತ್ಯ. ಈ ನಿಟ್ಟಿನಲ್ಲಿ ವಿಧ್ಯಾರ್ಥಿಗಳು ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಆಸಕ್ತ ಆಟಗಳಲ್ಲಿ ತೊಡಗಿಸಿಕೊಳ್ಳಲು ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜೂನಿಯರ್ ಕಾಲೇಜು ಆಯೋಜಿಸಿದ್ದ ಪದವಿ ಪೂರ್ವ ಕಾಲೇಜಿನ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆ ಜೊತೆ ಯೋಗ ಶಿಕ್ಷಣಕ್ಕೂ ಒತ್ತು ನೀಡುವುದು ಸೂಕ್ತ ಎಂದರು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ ಇಂದಿನ ಮಕ್ಕಳಲ್ಲಿ ಕ್ರೀಡೆ ಆಸಕ್ತಿ ಬೆಳೆಸಿದಲ್ಲಿ ನಮ್ಮಲ್ಲಿ ಉತ್ತಮ ಕ್ರೀಡಾಪಟುಗಳ ತಯಾರಿ ಆಗಲಿದೆ. ಇಂತಹ ಕಾರ್ಯಕ್ಕೆ ಅವಶ್ಯ ಪೂರ್ವ ನಿಯಿಜನೆಯನ್ನು ದೈಹಿಕ ಶಿಕ್ಷಕ ವರ್ಗ ಮಾಡಿದಲ್ಲಿ ಸಾರ್ಥಕ ಕೆಲಸ ಆಗಲಿದೆ ಎಂದು ಸಲಹೆ ನೀಡಿದರು.

ಶ್ರೀ ಚನ್ನಬಸವೇಶ್ವರ ಯುವಕ ಸಂಘ ಪ್ರಧಾನ ಕಾರ್ಯದರ್ಶಿ ಸಿ.ಆರ್.ಶಂಕರಕುಮಾರ್ ಮಾತನಾಡಿ ಕ್ರೀಡೆ ಫ್ಯಾಷನ್ ಆಗಿ ಬಳಸದೆ ತಮ್ಮಲ್ಲಿನ ಪ್ರತಿಭೆ ಹೊರ ಹಾಕುವ ಕೆಲಸ ಯುವಕರಲ್ಲಿ ಆಗಬೇಕಿದೆ. ಒತ್ತಡದ ಬದುಕಿಗೆ ವಿರಾಮ ಹೇಳಲು ಸಹ ಕ್ರೀಡೆ ಸಹಕಾರಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕ್ರೀಡಾಕೂಟದ ಜ್ಯೋತಿ ಬೆಳಗಿಸಲಾಯಿತು. ಎಲ್ಲಾ ಕಾಲೇಜು ಕ್ರೀಡಾಪಟುಗಳ ಪರಿಚಯ ಮಾಡಲಾಯಿತು.

ವೇದಿಕೆಯಲ್ಲಿ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ರಂಗಸ್ವಾಮಿ, ಸದಸ್ಯ ಯಲ್ಲಪ್ಪ, ಪ್ರಾಂಶುಪಾಲ ಕೃಷ್ಣಮೂರ್ತಿ, ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್, ಉಪನ್ಯಾಸಕ ಕುಮಾರ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!