ಪರಿಸರ ಶುಚಿಯಾಗಿಟ್ಟುಕೊಂಡು ಅಂತರ್ಜಲ ಸಂರಕ್ಷಣೆಯ ಬಗ್ಗೆ ಕಾಳಜಿವಹಿಸಿ

ಗುಬ್ಬಿ : ಕೃಷಿ ನಮ್ಮ ದೇಶದ ಬೆನ್ನೆಲುಬು, ರೈತರು ಸಾಂಪ್ರದಾಯಕ ಪದ್ಧತಿಯ ಜೊತೆಗೆ ಸಾವಯವ ಕೃಷಿ ಆಧುನಿಕ ಬೇಸಾಯ ಇತರ ಉಪಕಸಗಳಾದ ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಾಣಿಕೆ ಮಾಡುವ ಮೂಲಕ ಸಮಗ್ರ ಕೃಷಿ ಮಾಡಿದರೆ ಲಾಭ ಗಳಿಸಬಹುದು ಎಂದು ಕೃಷಿ ಅಧಿಕಾರಿ ಪ್ರಕಾಶ್.ಜಿ ತಿಳಿಸಿದರು.
ತಾಲ್ಲೂಕಿನ ಸಿಎಸ್ ಪುರ ಹೋಬಳಿ ಉಂಗ್ರ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಗುಬ್ಬಿ , ಐಡಿಎಫ್ ಸಂಸ್ಥೆ, ಗ್ರಾಮ್ ಸರ್ವ್ ಪ್ರೈ.ಲಿ. ಬೆಂಗಳೂರು ಹಾಗೂ ಸಿಎಸ್ ಪುರ ರೈತ ಉತ್ಪಾದಕರ ಕಂಪನಿ ಸಿಎಸ್ ಪುರ ಇವರ ಅಶ್ರಯದಲ್ಲಿ ಏರ್ಪಡಿಸಿದ್ದ ಕೃಷಿ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಮೀನಿನ ಮಣ್ಣಿನ ಪರೀಕ್ಷೆ ನಡೆಸಿ ಅದಕ್ಕುನುಗುಣವಾಗಿ ಬೆಳೆ ಬೆಳೆಯಬೇಕು ಮತ್ತು ಸುತ್ತಮುತ್ತಲ ಪರಿಸರವನ್ನು ಶುಚಿಯಾಗಿಟ್ಟುಕೊಂಡು ಅಂತರ್ಜಲ ಸಂರಕ್ಷಣೆಯ ಬಗ್ಗೆ ಕಾಳಜಿಹಿಸಬೇಕು ತಿಳಿಸಿದರು.
ಕೆನರಾ ಬ್ಯಾಂಕ್ ಕೃಷಿ ವಿಸ್ತಾರಣಾಧಿಕಾರಿ ಜಯಶ್ರೀ.ಸಿ ಮಾತನಾಡಿ, ಬ್ಯಾಂಕಿನಲ್ಲಿ ಖಾತೆ ಹೊಂದಿರು ಸದಸ್ಯರು ಎಟಿಎಂ ಕಾರ್ಡ್ ಹೊಂದಿರುವುದರಿಂದ ಕೆಲವರು ಅಂತಜಾಲ ಕ್ರೈಂ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬ್ಯಾಂಕಿನಿಂದ ಎಟಿಎಂ ನಂಬರ್, ಪಿನ್ ನಂಬರ್ ಹೇಳಿ ಎಂದು ಕೆಳುವುದಿಲ್ಲ. ಆದ್ದರಿಂದ ಯಾರಾದರು ಬ್ಯಾಂಕಿನಿಂದ ಎಂದು ಪೋನ್ ಮಾಡಿದರೆ ನಿಮ್ಮ ಎಟಿಎಂ ನಂಬರ್ ಹೇಳಬಾರದು. ಬ್ಯಾಂಕಿಗೆ ಬಂದು ವಿಚಾರಿಸಬೇಕು ಎಂದು ತಿಳಿಸಿದರು.
ಐಡಿಎಫ್ ಸಂಸ್ಥೆಯ ಸಹಾಯಕ ಯೋಜನಾ ನಿರ್ದೇಶಕ ಕೆ.ಎನ್.ಗುರುದತ್ ಮಾತನಾಡಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿದರೆ ಲಾಭ ಗಳಿಸಬಹುದು ಇಲ್ಲದಿದ್ದರೆ ಕೃಷಿ ಉತ್ಪನ್ನಗಳ ಆದಾಯದ ಬಹುಪಾಲು ಮಧ್ಯವರ್ತಿಗಳ ಪಾಲಾಗುತ್ತದೆ. ಈ ನಿಟ್ಟಿನಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡುವ ಮೂಲಕ ಮಾರಾಟ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಇಒ ಲೋಕೇಶ.ಡಿ, ಆರ್ಥಿಕ ಸೇರ್ಪಡೆಯ ವ್ಯವಸ್ಥಾಪಕ ಶ್ರೀನಿವಾಸಯ್ಯ.ಆರ್, ಬಿಸಿಎ ನಳಿನ, ಲೆಕ್ಕಾಧಿಕಾರಿ ಶ್ರೀಕಾಂತ್ ಸಿಪಿ, ವಿವಿಧ ಸಂಘದ ಸದಸ್ಯರು, ರೈತ ಮುಖಂಡರಾದ ಮತ್ತಿತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!