ಲೇಖಕ ಡಾ.ದಿನೇಶಕುಮಾರ್.ಪಿ.ಎನ್.ರವರು ರಚಿಸಿರುವ ಹೊಸದುರ್ಗ ಪ್ರದೇಶದ ಪಾಳೆಗಾರರು ಕೃತಿ ಲೋಕಾರ್ಪಣೆ

ತುಮಕೂರು:ನಮ್ಮದೇ ಶ್ರೇಷ್ಠ ಎಂಬ ತತ್ತೂರಿಯ ಈ ದಿನಗಳಲ್ಲಿ ವಿದ್ವಾಂಸರು, ಸಂಶೋಧಕರು ತಳ ಸಂಸ್ಕೃತಿ, ಪರಂಪರೆ ಅವರ ಆಚಾರ, ವಿಚಾರ,ಆಹಾರ ಪದ್ದತಿಗಳನ್ನು ಎತ್ತಿ ಹಿಡಿಯುವಂತಹ, ಶೋಷಿತ ಸಮುದಾಯಗಳ ಹಿರಿಮೆಯನ್ನು ಪರಿಚಯಿಸುವಂತಹ ಸಂಶೋಧನೆಗಳು ಹೆಚ್ಚಿನ ರೀತಿಯಲ್ಲಿ ನಡೆಯುವ ಅಶವ್ಯಕತೆ ಇದೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯಪರಿಷತ್,ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ದಿ ಟ್ರಸ್ಟ್(ರಿ) ಹಾಗೂ ಶ್ರೀಗುರುಸಿದ್ದರಾಮೇಶ್ವರ ಸಾಹಿತ್ಯ ಸಂಪದ ಇವರವತಿಯಿಂದ ಆಯೋಜಿಸಿದ್ದ ಲೇಖಕ ಡಾ.ದಿನೇಶಕುಮಾರ್.ಪಿ.ಎನ್.ಅವರು ರಚಿಸಿರುವ ಹೊಸದುರ್ಗ ಪ್ರದೇಶದ ಪಾಳೆಗಾರರು ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಒಂದು ಕಾಲದಲ್ಲಿ ರಾಜಾಡಳಿತ ಮಾಡಿದ ತಳ ಸಮುದಾಯಗಳು ಇಂದು ದಯನೀಯ ಸ್ಥಿತಿಗೆ ತಲುಪಿವೆ. ಇದರ ಹಿನ್ನೆಲೆ ಏನು, ಇಂತಹ ಸ್ಥಿತಿಗೆ ಕಾರಣವಾದ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಕುರಿತು ಸಂಶೋಧನೆಗಳು ನಡೆದರೆ ಅವುಗಳಿಂದ ಮತ್ತೊಂದು ಹೊಸ ಚರಿತ್ರೆಯನ್ನು ಸೃಷ್ಟಿಸಲು ಸಾಧ್ಯ. ಈ ನಿಟ್ಟಿನಲ್ಲಿ ಅಕಾಡೆಮಿಕ್ ವಲಯದಲ್ಲಿರುವ ಮತ್ತು ಅದರಿಂದ ಆಚೆಗೆ ಇರುವ ಸಂಶೋದಕರುಗಳು ಗಮನಹರಿಸಬೇಕಾಗಿದೆ ಎಂದರು.

ಇಂದು ಸಂಶೋಧನೆ ಎಂಬುದೇ ದೊಡ್ಡ ಸವಾಲು, ಅದರಲ್ಲಿಯೂ ಚರಿತ್ರೆಯ ಸಂಶೋಧನೆ ಅತ್ಯಂತ ತ್ರಾಸದಾಯಕ.ಸಂಶೋಧಕ ತಾನು ಅಕರಗಳ ಮೂಲಕ ಕಂಡುಕೊಂಡ ಸತ್ಯವನ್ನು ಜನತೆಯ ಮುಂದೆ ಇಡಬೇಕೋ, ಇಲ್ಲ ಜನಾಭಿಪ್ರಾಯಕ್ಕೆ ಹತ್ತಿರವಾದ ವಿಚಾರಗಳನ್ನು ಹೇಳಬೇಕೋ ಎಂಬ ಗೊಂದಲದಲ್ಲಿದ್ದಾನೆ.ಇಂತಹ ಗೊಂದಲಗಳಿಗೆ ಹೊರತಾಗಿ ಡಾ.ದಿನೇಶಕುಮಾರ್ ತಾನು ಕ್ಷೇತ್ರಕಾರ್ಯದಲ್ಲಿ ಕಂಡುಕೊಂಡ ಸತ್ಯವನ್ನು ಬರೆದು ಮುದ್ರಿಸಿ ಜನತೆಯ ಮುಂದೆ ಇಟ್ಟಿದ್ದಾರೆ. ಇವರ ಧೈರ್ಯವನ್ನು ನಾವೆಲ್ಲರೂ ಮೆಚ್ಚಬೇಕಿದೆ. ಆ ಮೂಲಕ ಅಕಾಡೆಮಿಕ್ ವಲಯವಲ್ಲದೆ, ಹವ್ಯಾಸಿಗಳು ಸಂಶೋಧನೆಯಲ್ಲಿ ತೊಡಗಿ, ಜನರಿಗೆ ಸತ್ಯ ತಿಳಿಸಬಹುದು ಎಂಬುದನ್ನು ಸಾಭೀತು ಪಡಿಸಿದ್ದಾರೆ ಎಂದು ಡಾ.ಎಲ್.ಹನುಮಂತಯ್ಯ ತಿಳಿಸಿದರು.

ಸ್ವಾತಂತ್ರ ಹೋರಾಟಗಾರ ಟಿಪ್ಪು ಬಗ್ಗೆ ಇದುವರೆಗೂ ನಡೆದ ಅಧ್ಯಯನಗಳಲ್ಲಿ ಆತ ಹಲವು ಪ್ರಥಮಗಳ ಸರದಾರ. ವಿeನ, ತಂತ್ರeನ, ಕೃಷಿಯಲ್ಲಿ ಹೊಸ ತಳಿಗಳ ಸಂಶೋಧನೆ,ಹಿಂದು ಮುಸ್ಲಿಂರ ಭಾವೈಕ್ಯತೆ, ಮುಂತಾದ ವಿಚಾರಗಳಲ್ಲಿ ಸಂಶೋಧಕರಿಂದ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಟಿಪ್ಪುವನ್ನು ದೇಶದ್ರೋಹಿ,ವ್ಯಾಪಾಕ ಮತಾಂತರ ಮಾಡಿದವ, ಹಿಂದು ವಿರೋಧಿ ಎಂಬಂತಹ ಚರ್ಚೆಗಳು ಹೆಚ್ಚು ಪ್ರಚಲಿತದಲ್ಲಿವೆ.ಇಲ್ಲಿ ಸಂಶೋಧಕ ತಾನು ಕಂಡುಕೊಂಡ ಸತ್ಯದ ಪರ ನಿಲ್ಲಬೇಕೋ, ಇಲ್ಲ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕೆ ಎಂಬ ಕ್ಲೀಷ್ಟಕರ ಸನ್ನಿವೇಶ ಸೃಷ್ಟಿಯಾಗುತ್ತಿವೆ. ಸಂಶೋಧನಾಕಾರ ಸತ್ಯವನ್ನು ಹೇಳದಿದ್ದರೆ ಆತ ಚರಿತ್ರೆಗೆ ಹಾಗೂ ತನ್ನ ವೃತ್ತಿಗೆ ಅಪರಾಧ ಮಾಡಿದಂತೆ ಎಂದು ಪ್ರತಿಪಾದಿಸಿದರು.

ಇತಿಹಾಸದಲ್ಲಿ ದಲಿತರು, ಓಬಿಸಿಗಳು ಸೇರಿದಂತೆ ತಳ ಸಮುದಾಯಗಳ ವಿಸೃತಿ ಬಹಳ ದೊಡ್ಡದಿದೆ. ನಮ್ಮ ಹಬ್ಬ,ಹರಿದಿನಗಳು, ಆಚಾರ, ವಿಚಾರಗಳು ದುಖಃ, ದುಮ್ಮಾನ, ಸಂತೋಷ ಎಲ್ಲವೂ ಆರಂಭವಾಗುವುದು ಮಾಂಸಾಹಾರದಿಂದ.ದೇಶದಲ್ಲಿ ಶೇ80ರಷ್ಟು ಜನ ಮಾಂಸಾಹಾರಿಗಳು. ಉಳಿದ ಶೇ20ರ ಜನರು ಹೇಳುವ ಸಸ್ಯಾಹಾರವೇ ಶ್ರೇಷ್ಠ ಎಂದು ಎನ್ನುವ ವಾದವನ್ನು ಪ್ರತಿರೋಧಿಸುವ ಕೆಲಸ ಮಾಡುತ್ತಿಲ್ಲ.ಬದಲಾಗಿ, ಅವರಂತೆ ನಾವುಗಳು ಸಹ ಸೋಮವಾರ, ಗುರುವಾರ, ಶನಿವಾರ ಮಾಂಸಾಹಾರವನ್ನು ಮುಟ್ಟದೆ ಗೋಸಂಗಿಗಳ ತರ ನಡೆದುಕೊಳ್ಳುತ್ತಿದ್ದೇವೆ.ಆಹಾರ ನಮ್ಮ ಇಚ್ಚೆ ಎಂಬುದನ್ನು ಧೈರ್ಯವಾಗಿ ಹೇಳುವ ಕನಿಷ್ಠ ಪ್ರಜ್ಞೆಯನ್ನಾದರೂ ಅಕ್ಷರ ಪಡೆದ ತಳ ಸಮುದಾಯಗಳ ಅಧುನಿಕ ಬ್ರಾಹ್ಮಣರು ಮಾಡುವ ಮೂಲಕ ದ್ರಾವಿಡ ಪರಂಪರೆಯನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟುವ ಕೆಲಸ ಆಗಬೇಕಿದೆ.ಆಹಾರವನ್ನು ಚರ್ಚೆಯ ವಸ್ತುವಾಗಿಸಿದವರಿಗೆ ಛೀಮಾರಿ ಹಾಕಬೇಕೆಂದ ಎಂದ ಡಾ.ಎಲ್.ಹನುಮಂತಯ್ಯ ಇತ್ತೀಚಿನ ಸಿದ್ದರಾಮಯ್ಯ ಪ್ರಕರಣವನ್ನು ಉದಾಹರಣೆಯಾಗಿ ನೀಡಿದರು.

ವಕೀಲ ಹಾಗೂ ಸಂಶೋಧಕ ಡಾ.ದಿನೇಶಕುಮಾರ್ ಪಿ.ಎನ್. ಅವರ ಹೊಸದುರ್ಗ ಪ್ರದೇಶದ ಪಾಳೆಗಾರರು ಎಂಬ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ತುಮಕೂರು ವಿವಿ ಕುಲಸಚಿವ ಪ್ರೊ.ನಿರ್ಮಲ್ ರಾಜ್, ಚರಿತ್ರೆಗೂ, ಸಾಹಿತ್ಯಕ್ಕೂ ಅಜಗಜಾಂತರ ವೆತ್ಯಾಸವಿದೆ. ಸಾಹಿತ್ಯವನ್ನು ಯಾರು ಬೇಕಾದರೂ ರಚಿಸಬಹುದಾಗಿದೆ. ಆದರೆ ಚರಿತ್ರೆಯ ಸೃಷ್ಟಿ ಅಷ್ಟು ಸುಲಭವಲ್ಲ.೨೦ನೇ ಶತಮಾನದಲ್ಲಿ ರಾಮಚಂದ್ರಗುಹ ಎಂಬುವವರು ತಳಸ್ತರದ ಚರಿತ್ರೆಯನ್ನು ಕೊಟ್ಟಿಕೊಡುವ ಪರಂಪರೆಯನ್ನು ಆರಂಭಿಸಿದರು. ಆ ನಂತರದಲ್ಲಿ ದಲಿತರು, ರೈತರು, ಮಹಿಳೆಯರು ಚರಿತ್ರೆಗಳು ಬಿಚ್ಚಿಕೊಳ್ಳಲು ಪ್ರಾರಂಭಗೊಂಡವು. ಅದರ ಮುಂದುವರೆದ ಭಾಗವೇ ಈ ಕೃತಿ.ಇದು ಸ್ಥಳೀಯ ಚರಿತ್ರೆಗೆ ಹೊಸ ಅರ್ಥ ನೀಡಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾಗೂ ಸಂಶೋಧನೆಯ ಮಾರ್ಗದರ್ಶಕರು ಆದ ಹಿರಿಯ ಇತಿಹಾಸಕಾರ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ,ವೃತ್ತಿಯಲ್ಲಿ ವಕೀಲರಾದರೂ, ಸಂಶೋಧನೆ ನಡೆಸುವ ಮೂಲಕ ಸಮಾಜಕ್ಕೆ ಹೊಸ ಚರಿತ್ರೆಯೊಂದನ್ನು ಕಟ್ಟಿಕೊಡುವ ದಿಟ್ಟತವನ್ನು ಡಾ.ದಿನೇಶಕುಮಾರ್ ತೊರಿದ್ದಾರೆ. ಇದು ಕೇವಲ ರಾಜಕೀಯ ಚರಿತ್ರೆಯಾಗದೆ ಆ ಪ್ರದೇಶದ ಸಮಾಜಿಕ, ಆರ್ಥಿಕ, ಕಲೆ, ಸಾಹಿತ್ಯ, ವಾಸ್ತುಶಿಲ್ಪಗಳ ಅಂಶಗಳನ್ನು ಒಳಗೊಂಡಿದೆ ಎಂದರು.

ಹೊಸದುರ್ಗ ಪ್ರದೇಶದ ಪಾಳೆಗಾರರು ಕೃತಿಯ ಕುರಿತು ಪ್ರೊ.ಎಲ್.ಪಿ.ರಾಜು ಮಾತನಾಡಿದರು.ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ, ಸಹ ಪ್ರಾಧ್ಯಾಪಕ ಡಾ.ಓ.ನಾಗರಾಜು, ಡಾ.ಬಿ.ನಂಜುಂಡಸ್ವಾಮಿ, ನಿವೃತ್ತ ಅಧಿಕಾರಿ ಬಸವರಾಜಪ್ಪ ಆಪ್ಪಿನಕಟ್ಟೆ, ದೊಡ್ಡಯ್ಯ, ಡಾ.ಸಣ್ಣಹೊನ್ನಯ್ಯ ಕಂಟಲಗೆರೆ,ಡಾ.ಕೃತಿಕಾರರಾದ ಡಾ.ದಿನೇಶಕುಮಾರ್ ಪಿ.ಎನ್, ಡಾ.ಹನುಮಂತರಾಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!