ಕಡಬ ಹೋಬಳಿಯಲ್ಲಿ ವರುಣನ ಆರ್ಭಟ : ಪೆದ್ದನಹಳ್ಳಿಯಲ್ಲಿ ಧರೆಗುರುಳಿದ ಮನೆ

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಯಲ್ಲಿ ಅತಿ ಹೆಚ್ಚು 133.4 ಮಿಲೀ ಮಳೆ ಬಿದ್ದು ಕಡಬ ಸಮೀಪದ ರಾಯರಪಾಳ್ಯ ಗ್ರಾಮದಲ್ಲಿ ಮನೆಗಳು ಸಂಪೂರ್ಣ ಜಲಾವೃತಗೊಂಡು ಒಂದು ಮನೆ ಕುಸಿಯುವ ಹಂತದಲ್ಲಿದ್ದು, ದವಸ ಧಾನ್ಯ ಇನ್ನಿತರ ವಸ್ತುಗಳು ಕೊಚ್ಚಿ ಹೋದ ಘಟನೆ ಭಾನುವಾರ ಮುಂಜಾನೆ ನಡೆದಿದೆ.

ಇಡೀ ರಾತ್ರಿ ಸುರಿದ ಧಾರಾಕಾರ ಮಳೆ ಇಡೀ ಕಡಬ ಹೋಬಳಿಯನ್ನೇ ತತ್ತರಿಸಿದೆ. ಹೊಲ ತೋಟಗಳಲ್ಲಿ ನಿರಂತರ ನೀರು ಹರಿದಿದೆ. ಹಳೇ ಮನೆಗಳಿಗೆ ಅಪಾಯ ತಂದ ಈ ಮಳೆಯ ಅವಾಂತರಕ್ಕೆ ಒಟ್ಟು ಮೂರು ಮನೆಗೆ ಅಪಾಯ ತಂದಿದೆ. ರಾಯರಪಾಳ್ಯ ಗ್ರಾಮದ ವೀರಭದ್ರಯ್ಯ ಅವರ ಮನೆಗೆ ನೀರು ನುಗ್ಗಿ ದವಸ ಧಾನ್ಯ, ತೆಂಗು, ಭತ್ತ ಕೊಚ್ಚಿಕೊಂಡು ಸಾಗಿದೆ. ಗವಿರಂಗಮ್ಮ ಅವರ ಮನೆಯು ಅಪಾಯದಂಚಿನಲ್ಲಿದೆ. ಪೆದ್ದನಹಳ್ಳಿ ಗ್ರಾಮದಲ್ಲಿ ಒಂದು ಮನೆ ಭಾಗಶಃ ಬಿದ್ದಿದೆ. ಜಲಾವೃತ ಮನೆಗೆ ತೆರಳಲು ತೆಪ್ಪ ಬಳಸಿ ಮನೆಯಿಂದ ಕುಟುಂಬಸ್ಥರನ್ನು ಕರೆ ತರಲಾಗಿದೆ.

ಕಳೆದೆರಡು ದಿನದಿಂದ ತಾಲ್ಲೂಕಿನಲ್ಲಿ ಬಿದ್ದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಕಸಬ ಹೋಬಳಿ ಅಡಗೂರು ಗ್ರಾಮದಲ್ಲಿ ಒಂದು ಮನೆ ಕುಸಿದಿರುವ ಬಗ್ಗೆ ಕೂಡಾ ವರದಿಯಾಗಿದೆ. ಮಳೆಯಿಂದ ಅನಾಹುತಗಳ ಬಗ್ಗೆ ಕಂದಾಯ ಮೇಲಾಧಿಕಾರಿಗಳು ತುರ್ತು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಕಡಬ ಭಾಗದ ಮುಖಂಡರು ಒತ್ತಾಯಿಸಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಶಿಲ್ಪ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!