ಆ.31ರಿಂದ ಅ.5ರವರೆಗೆ 35 ದಿನಗಳ ಕಾಲ ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿಯಿಂದ ಗಣಪತಿ ಉತ್ಸವ

ತುಮಕೂರು : ಇಲ್ಲಿನ ವಿನಾಯಕನಗರದ ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿಯ 46ನೇ ವರ್ಷದ ಗಣಪತಿ ಪ್ರತಿಷ್ಠಾಪನೆ ಮಹೋತ್ಸವ ಆ.31ರಿಂದ ಅ.5ರವರೆಗೆ 35 ದಿನಗಳ ಕಾಲ ನಡೆಯಲಿದ್ದು, ಈ ಬಾರಿ ಅದ್ಭುತ ಗುಹಾಂತರ್ಗತ ದೇವಾಲಯದಲ್ಲಿ ಸಿಂಹಾರೂಢ, ಭವ್ಯ ದಶಭುಜ, ಅಭಯಹಸ್ತ ಶ್ರೀ ಸಿದ್ಧಿವಿನಾಯಕ ವೈಭವ ಸಂಗೀತ ದೃಶ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಮಂಡಳಿ ಉಪಾಧ್ಯಕ್ಷ ಹೆಚ್.ಆರ್. ನಾಗೇಶ್ ತಿಳಿಸಿದರು.

ನಗರದ ಸಿದ್ದಿವಿನಾಯಕ ಸೇವಾ ಮಂಡಳಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 35 ದಿನಗಳ ಕಾಲ ಗಣಪತಿ ಉತ್ಸವ ನಡೆಯಲಿದ್ದು, ಪ್ರತಿದಿನ ಸಂಜೆ ದೃಶ್ಯರೂಪಕದ ಪ್ರದರ್ಶನದೊಂದಿಗೆ ಜಿಲ್ಲೆ ಹಾಗೂ ರಾಜ್ಯದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ ಎಂದು ಹೇಳಿದರು.

ಆ.31 ರಂದು ಸಂಜೆ 5.30ಕ್ಕೆ ಗಣೇಶೋತ್ಸವದ ಉದ್ಘಾಟನೆ ನೆರವೇರಲಿದ್ದು, ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಮತ್ತು ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಲಿದ್ದು, ಮಂಡಳಿ ಅಧ್ಯಕ್ಷರಾದ ಜಿ.ಹೆಚ್.ಪರಮಶಿವಯ್ಯ ಅಧ್ಯಕ್ಷತೆ ವಹಿಸುವರು ಎಂದರು.

ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್‌ವಾಡ್, ವಿಶೇಷ ಆಹ್ವಾನಿತರಾಗಿ ಮಹಾನಗರಪಾಲಿಕೆ ಸದಸ್ಯರಾದ ನಾಸಿರಾಬಾನು, ಬೆಸ್ಕಾಂ ಅಧೀಕ್ಷಕ ಅಭಿಯಂತರ ಕೆ.ಎಲ್.ಲೋಕೇಶ್ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಆ.31 ರಂದು ಬೆಳಿಗ್ಗೆ 10ಕ್ಕೆ ಶ್ರೀ ಸಿದ್ಧಿವಿನಾಯಕಸ್ವಾಮಿ ವಿಶೇಷ ಅಲಂಕಾರ ಸಂಜೆ ೬ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಲಿದ್ದು, ರಾತ್ರಿ 8ಕ್ಕೆ ನಾದಸ್ವರ ಏರ್ಪಡಿಸಲಾಗಿದೆ ಎಂದರು.

ಪ್ರತಿದಿನ ಸಂಜೆ 7ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದ್ದು, ಸೆ.1 ರಂದು ಸುಗಮ ಸಂಗೀತ, ಜಾನಪದ ಹಾಗೂ ಕನ್ನಡ ಚಲನಚಿತ್ರ ಗೀತೆಗಳು, ಸೆ.2 ರಂದು ಹಳೆಯ ಚಲನಚಿತ್ರ ಗೀತೆಗಳು, ಸುಗಮ ಸಂಗೀತ, ಸೆ.3 ರಂದು ಭರತನಾಟ್ಯ, ಜಾನಪದ ಹಾಗೂ ಚಲನಚಿತ್ರ ಗೀತೆಗಳಿಗೆ ನೃತ್ಯ, ಸೆ.4 ರಂದು ಹಾಸ್ಯ-ಲಾಸ್ಯ-ಮಿಮಿಕ್ರಿ ನಗೆ ಹಬ್ಬ, ಸೆ.5 ರಂದು ಕಾಲೇಜು ಹುಡುಗ ನಗೆ ನಾಟಕ, ಸೆ.6 ರಂದು ಸಂಜೆ 6.30ರಿಂದ ಮನರಂಜನಾ ನೃತ್ಯಗಳು, ಶಾಲಾ ಮಕ್ಕಳಿಂದ ನೃತ್ಯ ಕಾರಂಜಿ, ಸೆ.7 ರಂದು ವೈವಿಧ್ಯಮಯ ಶಾಲಾ ಮಕ್ಕಳ ನೃತ್ಯ, ಮಹಿಳಾ ತಂಡದಿಂದ ಭಜನೆ, ಕೋಲಾಟ, ಸೆ.8 ರಂದು ನೃತ್ಯ ಜಲಪಾತ ನೃತ್ಯ ಸಂಭ್ರಮ, ಸೆ.9 ರಂದು ನಾಟ್ಯ ವೈವಿಧ್ಯ ನೃತ್ಯ ರೂಪಕ, ಸೆ.10 ರಂದು ಭರತನಾಟ್ಯ ಜಾನಪದ ನೃತ್ಯ ಚಲನಚಿತ್ರ ಗೀತೆಗಳಿಗೆ ನೃತ್ಯ ನಡೆಯಲಿದೆ ಎಂದು ತಿಳಿಸಿದರು.

ಸೆ.11 ರಂದು ಬೆಳಿಗ್ಗೆ 9ರಿಂದ ಎಲ್ಲಾ ಶಾಲಾ ಮಕ್ಕಳಿಗೆ ಸಾಮೂಹಿಕ ಚಿತ್ರ ಬರೆಯುವ ಸ್ಪರ್ಧೆ, ಸಂಜೆ ೭ರಿಂದ ಸಂಗೀತ ಸಂಭ್ರಮ ಸುಮಧುರ ಗೀತೆಗಳ ಗಾಯನ, ಸೆ.12 ರಂದು ಡಾ.ರಾಜ್‌ಕುಮಾರ್ ಮತ್ತು ಡಾ.ಪುನೀತ್‌ರಾಜ್‌ಕುಮಾರ್ ನೆನಪಿನಂಗಳದ ಗೀತೆಗಳು ಹಾಗೂ ಪುಷ್ಪಾರ್ಚನೆ, ಸೆ.೧೩ ರಂದು ಮಧ್ಯಾಹ್ನ ೩ಕ್ಕೆ ಸಾಮೂಹಿಕ ಸಂಕಷ್ಟಹರ ಗಣಪತಿ ಪೂಜೆ, ನೃತ್ಯಗಳು, ವಿಶೇಷ ಮನರಂಜನೆ, ಸೆ.14 ರಂದು ನೃತ್ಯ ಕಾರ್ಯಕ್ರಮ, ಸಾಹಸ ಪ್ರದರ್ಶನ, ಸೆ.೧೫ ರಂದು ಸುಗಮ ಸಂಗೀತ, ಜಾನಪದ ಗೀತೆ ಹಳೆಯ ಚಲನಚಿತ್ರ ಗೀತೆಗಳು, ಸೆ.16 ರಂದು ಶಾಲಾ ಕಾಲೇಜು ಮಕ್ಕಳಿಂದ ವಿಶೇಷ ನೃತ್ಯಗಳ ಸಂಭ್ರಮ, ಸೆ.17, 19, 23 ಮತ್ತು 28 ರಂದು ವಾದ್ಯಗೋಷ್ಠಿ, ಸೆ.18 ರಂದು ಬೆಳಿಗ್ಗೆ 10ಕ್ಕೆ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ, ನಿಮ್ಮ ಆಟ-ನಿಮ್ಮ ನೃತ್ಯ ನೀವೇ ಸ್ಪರ್ಧಿಗಳು ಕಾರ್ಯಕ್ರಮ, ಸೆ.20 ರಂದು ಭರತನಾಟ್ಯ ನೃತ್ಯ ರೂಪಕ ಜಾನಪದ ನೃತ್ಯ ಜರುಗಲಿದೆ ಎಂದರು.

ಸೆ.21 ರಂದು ಸಂಜೆ 6.30ಕ್ಕೆ ನಿಗೂಡ ಪವಾಡಗಳ ಅನಾವರಣ, ರಾತ್ರಿ ೮ಕ್ಕೆ ಭಜನೆ, ನೃತ್ಯ, ಸೆ.22 ರಂದು ಸಂಜೆ 5.30ಕ್ಕೆ ಚಿತ್ರಕಲಾಸ್ಪರ್ಧೆ ವಿಜೇತರಿಗೆ ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ, ಶಾಲಾ ಕಾಲೇಜು ಮಕ್ಕಳಿಗೆ ನೃತ್ಯ, ಸೆ.24ರಂದು ಭರತನಾಟ್ಯ, ನೃತ್ಯ ರೂಪಕ ಜಾನಪದ ನೃತ್ಯ,ಸೆ.25 ರಂದು ಡ್ಯಾನ್ಸ್, ಡ್ಯಾನ್ಸ್ ನೃತ್ಯ ಜಲಧಾರೆ, ಸೆ.26 ರಂದು ಜಾನಪದ ಜಾದೂ ಪ್ರದರ್ಶನ, ಸೆ.27 ರಂದು ವೈವಿಧ್ಯಮಯ ನೃತ್ಯಗಳು, ಸೆ.29 ರಂದು ಮ್ಯಾಜಿಕ್ ಷೋ, ಸೆ.30 ರಂದು ಡಾ.ರಾಜ್‌ಕುಮಾರ್ ಸವಿನೆನಪಿನ ಗಾಯನ, ಅ.1 ರಂದು ಸಂಜೆ 6.30ಕ್ಕೆ ಶ್ರೀ ಅಯ್ಯಪ್ಪಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ, ಅಲಂಕಾರ ಹಾಗೂ ಭಜನೆ, ಅ.2 ರಂದು ಬೆಳಿಗ್ಗೆ 10ಕ್ಕೆ ಗಿರಿಜಾ ಕಲ್ಯಾಣೋತ್ಸವ, ಸಂಜೆ 7ಕ್ಕೆ ಹಾಸ್ಯನಟಿ ರೇಖಾದಾಸ್, ಹಾಸ್ಯನಟ ಮೂಗು ಸುಂದರ್ ಅವರಿಂದ ಹಾಸ್ಯ ರಸಮಂಜರಿ, ಅ.3 ರಂದು ಸಂಜೆ 5.30ಕ್ಕೆ ಮುಕ್ತಾಯ ಸಮಾರಂಭ, ಸಂಜೆ 7ಕ್ಕೆ ವಾದ್ಯಗೋಷ್ಠಿ, ಅ.4 ರಂದು ಸಂಜೆ 7ಕ್ಕೆ ನೃತ್ಯ ಸಂಭ್ರಮ ನಡೆಯಲಿದೆ ಎಂದು ವಿವರಿಸಿದರು.

ಅ.5 ರಂದು ಸಂಜೆ 4 ಗಂಟೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಿದ್ಧಿವಿನಾಯಕಸ್ವಾಮಿಯ ವೈಭವದ ಮೆರವಣಿಗೆ ನಡೆಯಲಿದ್ದು, ಮರುದಿನ ಬೆಳಿಗ್ಗೆ 5ಕ್ಕೆ ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿದ್ದಿವಿನಾಯಕ ಸೇವಾ ಮಂಡಲಿ ಕಾರ್ಯದರ್ಶಿ ಕೆ.ಎಸ್.ರಾಘವೇಂದ್ರರಾವ್, ಸಹ ಕಾರ್ಯದರ್ಶಿ ಜಗಜ್ಯೋತಿ ಟಿ.ಎಸ್.ಸಿದ್ಧರಾಮಯ್ಯ, ಖಜಾಂಚಿ ಎಸ್.ಬಿ.ಪ್ರಭು, ನಿರ್ದೇಶಕರುಗಳಾದ ಟಿ.ಹೆಚ್.ಪ್ರಸನ್ನ ಕುಮಾರ್, ಕೆ.ನರಸಿಂಹಮೂರ್ತಿ, ಲಿಂಗಪ್ಪ, ಜಿ.ಎಸ್.ಸಿದ್ಧರಾಜು, ಟಿ.ಆರ್.ನಟರಾಜ್, ಟಿ.ಎಚ್.ಮಹೇಶ್, ಜಿ.ಸಿ.ವಿರೂಪಾಕ್ಷ, ಡಾ.ಎನ್.ವೆಂಕಟೇಶ್, ಟಿ.ಕೆ.ಪದ್ಮರಾಜು, ಎಂ.ಎನ್.ಉಮಾಶಂಕರ್, ಡಾ.ಅನಸೂಯ ರುದ್ರಪ್ರಸಾದ್, ರೇಣುಕಾ ಪರಮೇಶ್, ಇಂದ್ರಾಣಿ ಪ್ರಕಾಶ್ ಸೇರಿದಂತೆ ನಿರ್ದೇಶಕರು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!