ಮಧುಗಿರಿ : ಸ್ತ್ರೀ ಶಕ್ತಿ ಪ್ರಪಂಚದಲ್ಲೇ ಅತ್ಯುತ್ತಮ ಶಕ್ತಿ: ಡಾ.ಜಿ.‌ಪರಮೇಶ್ವರ್ 

ಮಧುಗಿರಿ : ಸ್ತ್ರೀ ಶಕ್ತಿ ಪ್ರಪಂಚದಲ್ಲೇ ಅತ್ಯುತ್ತಮ ಶಕ್ತಿಯಾಗಿದ್ದು, 

ನಮ್ಮ ದೇಶದಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನ ನೀಡುವುದರ ಜೊತೆಗೆ ಮತದಾನದ ಹಕ್ಕನ್ನೂ ನೀಡಲಾಗಿದೆ ಎಂದು ಮಾಜಿ ಡಿಸಿಎಂ, ಕೊರಟಗೆರೆ ಶಾಸಕ ಡಾ.ಜಿ.‌ಪರಮೇಶ್ವರ್  ಅಭಿಪ್ರಾಯ ಪಟ್ಟರು.  

ತಾಲೂಕಿನ ಪುರವರ ಗ್ರಾಮದಲ್ಲಿ ಸೋಮವಾರ ಗೌರಿ ಗಣೇಶ ಹಬ್ಬದ ಪ್ರಯುಕ್ತ ಪುರವರ ಹೋಬಳಿಯ ಹೆಣ್ಣುಕ್ಕಳಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಮೇರಿಕಾದಂತಹ ರಾಷ್ಟ್ರದಲ್ಲಿ 150 ವರ್ಷ ಮತದಾನದ ಹಕ್ಕು ನೀಡಿರಲಿಲ್ಲ ಎಂದ ಅವರು ದೇಶದ ಸ್ವಾತಂತ್ರ ಹೋರಾಟದಲ್ಲಿ  ಅನೇಕ ಮಹಿಳೆಯರು  ಬ್ರಿಟೀಷರ ವಿರುದ್ದದ ಹೋರಾಟದಲ್ಲಿ ತ್ಯಾಗ ಬಲಿದಾನ ಗೈದಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ , ಜಾನ್ಸಿ ರಾಣಿ ಲಕ್ಷ್ಮೀಬಾಯಿ, ದುರ್ಗದ ಒನಕೆ ಓಬವ್ವರಂತಹ ಧೀಮಂತ ರಾಣಿಯರು ಸಂಗ್ರಾಮದಲ್ಲಿ ನಡೆಸಿದ ಹೋರಾಟ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಉಕ್ಕಿನ ಮಹಿಳೆ ಇಂದಿರಾ ಗಾಂಧಿ ದೇಶವನ್ನು 16 ವರ್ಷಗಳ ಕಾಲ ಇಡೀ ಪ್ರಪಂಚವೇ ತಿರುಗಿ ನೋಡುವಂತೆ ಆಡಳಿತ ಮಾಡಿದ್ದರು. ಗಿರಿಜನ ಮಹಿಳೆ ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿದ್ದು, ಸೋನಿಯಾ ಗಾಂಧೀ 18 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದಾರೆ ಇವರೆಲ್ಲರೂ ದೇಶದಲ್ಲಿ ಮಹಿಳಾ ಶಕ್ತಿ ಪ್ರಧಾನ ಪಾತ್ರ ವಹಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.   ಆದರೆ  ಎಂದರು.

ಕಳೆದ 3 ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಹಬ್ಬದ ಆಚರಣೆ ಇರಲಿಲ್ಲ.  ಆದರೆ ಈ ಬಾರಿ ಕೋವಿಡ್ ಕಡಿಮೆಯಾದ ಹಿನ್ನೆಲೆಯಲ್ಲಿ  ಹಬ್ಬದ ಸಡಗರದ ವಾತಾವರಣವಿದೆ. ಕೋವಿಡ್ ಕಷ್ಟಗಳನ್ನು ದೂರ ಮಾಡಲು ಗೌರಿ ಗಣೇಶನಿಗೆ ಪ್ರಾರ್ಥನೆ ಮಾಡುತ್ತೇನೆ ಎಂದರು. 

ನಿವೆಲ್ಲ ನನಗೆ ಸಹೋದರಿಯದ್ದಂತೆ, ಆರೋಗ್ಯವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ವಿಧಿ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ರಾಯಚೂರಿನಿಂದ ಕೂಲಿ ನಡೆಸಲು ಬಂದ 15 ಜನರ ಕುಟುಂಬ ಅಪಘಾತದಲ್ಲಿ ಮೃತಪಟ್ಟಿದ್ದು, 10 ಜನ ಸ್ಥಳದಲ್ಲೇ ಮೃತಪಟ್ಟಿರುವುದು ನನಗೆ ತೀವ್ರ ನೋವು ತಂದಿದೆ. ಎಂದ ಅವರು ಇತ್ತೀಚೆಗೆ ಗೊರವನಹಳ್ಳಿ  ತೀಥಾ ಮದ್ಯದಲ್ಲಿ ಸೇತುವೆಯೊಂದು ಮಳೆಗೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲು ಹೋದ ಸಂದರ್ಭದಲ್ಲಿ ನನಗೂ ಇದರ ಅನುಭವವಾಗಿದ್ದು, ಪರಿಶೀಲನೆ ನಡೆಸಿ ಪಕ್ಕಕ್ಕೆ ತೆರಳಿದಾಗ ಇಡೀ ಸೇತುವೆಯೇ ಕುಸಿದು ಬಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದರು

ಇದೇ  ಸಂದರ್ಭದಲ್ಲಿ ಮಹಿಳೆಯರಿಗೆ ಬಾಗಿನ ವಿತರಿಸಲಾಯಿತು ಹಾಗೂ ಪುರವರ ಹೋಬಳಿಯಲ್ಲಿ ಮನೆ ಬಿದ್ದು ಹಾನಿಗೊಳಗಾದ 25 ಫಲಾನುಭವಿಗಳಿಗೆ ತಲಾ 50  ಸಾವಿರ ಚೆಕ್ ವಿತರಿಸಲಾಯಿತು.

ಜಿ.ಪಂ. ಮಾಜಿ ಸದಸ್ಯೆ ರಮಾಬಾಯಿ, ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ್, ಶಂಕರ್, ಮಾಜಿ ಅಧ್ಯಕ್ಷ ಮೈಲಾರಪ್ಪ , ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್ ಮೂರ್ತಿ , ಉಪಾಧ್ಯಕ್ಷ ರಾಜ್ ಕುಮಾರ್ , ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸುವರ್ಣಮ್ಮ , 

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ  ಜಯಮ್ಮ ,  ಗ್ರಾ.ಪಂ.ಅಧ್ಯಕ್ಷರಾದ ವನಜಾಕ್ಷಿ , ಸವಿತಾ , ನಾಗರತ್ನಮ್ಮ ಭೈರಪ್ಪ , ಶೈಲಾಜ , ಮಾಜಿ ಅಧ್ಯಕ್ಷೆ ಮಂಜುಳಾ ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!