ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿ ಗಡಿ ಭಾಗದ ಚಿಮ್ಮನಹಳ್ಳಿ ಗ್ರಾಮದ ತೋಟದಮನೆಯೊಂದರಲ್ಲಿ ಮಂಗಳವಾರ ಮುಂಜಾನೆ ಚಿರತೆಯೊಂದು ಬಂದು ಸಾಕು ನಾಯಿ ಹೊತ್ತೊಯ್ದ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗುಬ್ಬಿ ಎಪಿಎಂಸಿ ಮಾಜಿ ಸದಸ್ಯ ಹಾಗೂ ನಿವೃತ್ತ ಆಹಾರ ನಿರೀಕ್ಷಕ ವೀರಭದ್ರಯ್ಯ ಅವರ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. ತುರುವೇಕೆರೆ ತಾಲ್ಲೂಕು ಗಡಿ ಭಾಗದ ಈ ಗ್ರಾಮ ಸೇರಿದಂತೆ ಸುತ್ತಲಿನ ಎರಡು ತಾಲ್ಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಆಹಾರ ಹುಡುಕಿ ತೋಟದಮನೆಗಳತ್ತ ಬರುವ ಚಿರತೆ ನಾಯಿಗಳ ಬೇಟೆ ಆಡುತ್ತಿವೆ. ಮನುಷ್ಯರ ಮೆಲೇರೆಗುವ ಮುನ್ನ ಚಿರತೆ ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.