ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದ ಮಹಿಳೆಗೆ 45 ವರ್ಷ ಜೈಲು

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದ ಮಹಿಳೆಗೆ ಸೌದಿ ಅರೇಬಿಯಾದ ನ್ಯಾಯಾಲಯ 45 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ನೌರಾ ಬಿಂತ್‌ ಸಯೀದ್‌ ಅಲ್‌-ಕಹ್ತಾನಿ ಶಿಕ್ಷೆ ಅನುಭವಿಸುತ್ತಿರುವ ಮಹಿಳೆ. ಆಕೆಯು ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಆಕೆಯು ಸಾಮಾಜಿಕ ಜಾಲತಾಣಗಳನ್ನು ಬಳಸುವ ಮೂಲಕ ಸಾರ್ವಜನಿಕ ಸುವ್ಯವಸ್ಥೆಯ ನಿಯಮ ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಈ ಮಾಹಿತಿಯನ್ನು ಅಮೆರಿಕ ಮೂಲದ “ಡಾನ್‌’ ಪತ್ರಿಕೆಯು ವರದಿ ಮಾಡಿದೆ. ಆದರೆ ಸೌದಿ ಸರ್ಕಾರ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಮಹಿಳೆ ಯಾವ ವಿಚಾರದಲ್ಲಿ ಪೋಸ್ಟ್‌ ಮಾಡಿದ್ದರು ಎನ್ನುವ ವಿಚಾರವೂ ತಿಳಿದುಬಂದಿಲ್ಲ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!