ಕ್ಯಾತಗಾನ ಕೆರೆ ಭರ್ತಿ ಗಂಗಾ ಪೂಜೆ ನೆರೆವೇರಿಸಿ ಬಾಗಿನ ಅರ್ಪಿಸಿದ ಶಾಸಕ ವೆಂಕಟರಮಣಪ್ಪ

ಪಾವಗಡ: ತಾಲೂಕಿನಲ್ಲಿ ಸುರಿದ ಬಾರಿ ಮಳೆಯಿಂದಾಗಿ 22 ವರ್ಷಗಳ ನಂತರ ಕ್ಯಾತಗಾನಕೆರೆ ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿದ್ದು ಗುರುವಾರ ಶಾಸಕ ವೆಂಕಟರಮಣಪ್ಪ ಕೆರೆಗೆ ಗಂಗಾ ಪೂಜೆ ನೆರೆವೇರಿಸಿ ಬಾಗಿನ ಅರ್ಪಿಸಿದರು.

ತಾಲೂಕಿನಲ್ಲಿ ಸುರಿದ ಬಾರಿ ಮಳೆಯಿಂದಾಗಿ ನಾಗಲಮಡಿಕೆ ಹೋಬಳಿ, ಬಿ.ಕೆ ಹಳ್ಳಿ ಗ್ರಾ.ಪಂ ವ್ಯಾಪ್ತಿಗೆ ಸೇರಿದ ಕ್ಯಾತಗಾನಕೆರೆ ಗ್ರಾಮದ ಕೆರೆ ಭರ್ತಿಯಾಗಿ 22 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕೆರೆ ಕೋಡಿ ಬಿದ್ದ ಹಿನ್ನಲೆಯೆಲ್ಲಿ ಸ್ಥಳಿಯ ಮುಖಂಡರೊಂದಿಗೆ ಕೆರೆ ವೀಕ್ಷಣೆ ಮಾಡಿದ ಶಾಸಕರು ಗಂಗಾ ಪೂಜೆ ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಕಳೆದ 40 ವರ್ಷಗಳ ಹಿಂದೆ ಸುರಿದಿದ್ದ ಸಂತೃಷ್ಟಕರವಾದ ಮಳೆ ಈ ಬಾರಿ ಸುರಿದಿದ್ದು ತಾಲೂಕಿನ ಜನರ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಮನೆಗಳು ಮತ್ತು ಬೆಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಸ್ಥಳಗಳಿಗೆ ಭೆಟಿ ನೀಡಿ ಮಾಹಿತಿ ಪಡೆಯಲಾಗಿದೆ, ಪ್ರಸ್ತುತವಾಗಿ ಸರ್ಕಾರದಿಂದ ಮನೆ ಹಾನಿಯಾಗಿರುವ ಕುಟುಂಬಕ್ಕೆ ಐವತ್ತು ಸಾವಿರು, ಅಲ್ಪ ಪ್ರಮಾಣದ ಹಾನಿಯಾಗಿರುವ ಮನೆಗಳಿಗೆ ಇಪ್ಪತ್ತೈದು ಸಾವಿರ ಹಣ ನೀಡಲಾಗುತ್ತಿದೆ.

ಹುಸೇನಪುರ ಗ್ರಾಮದಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುವ ಮನೆಗಳಿಗೆ ಭೇಟಿ ನೀಡಲಾಗಿದೆ, ಸಂಕಷ್ಟದಲ್ಲಿದ್ದ ಪ್ರತಿ ಕುಟುಂಬಕ್ಕೆ ತಲಾ ಹತ್ತು ಸಾವಿರ ಹಣ ನೆರೆವು ನೀಡಿ ಕಷ್ಟಕ್ಕೆ ಸ್ಪಂದಿಸಲಾಗಿದೆ, ಸರ್ಕಾರದಿಂದ ಬರಬೆಕಾದ ನೆರೆವು ಕೊಡಿಸಲು ಕ್ರಮ ಜರುಗಿಸಲಾಗಿದೆ ಎಂದರು.

ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಕೆರೆಗಳು ತುಂಬಿವೆ ಆದರೆ ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾಗಿ ನೀರಿನ ಸಮಸ್ಯೆಯಾಗಿ ತೊಂದರೆಯಾಗಬಾರದು ಆದ್ದರಿಂದ ಕೆರೆಗಳಿಗೆ ನೀರು ಹರಿಸುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಶೀರ್ಘವಾಗಿ ಪೂರ್ಣಗೊಳಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಇತ್ತೀಚೆಗಷ್ಟೆ ಗ್ರಾ.ಪಂ ಸದಸ್ಯೆ ಮಹಾದೇವಿ ಎಂಬುವರ ಪತಿ ಮೃತ ಪಟ್ಟಿದ್ದ ಹಿನ್ನೆಲೆಯಲ್ಲಿ ಮನೆಗೆ ಭೇಟಿ ನೀಡಿದ ಅವರು ಆರ್ಥಿಕ ನೆರೆವು ನೀಡಿ ಮಕ್ಕಳ ಶಿಕ್ಷಣಕ್ಕೆ ಅಗತ್ಯ ನೆರೆವು ನೀಡುವ ಭರವಸೆ ನಿಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ರಾಮಲಿಂಗಪ್ಪ, ಸದಸ್ಯರಾದ ಅಂಜಯ್ಯ, ಪಿಡಿಒ ಮುತ್ಯಾಲು, ಸಣ್ಣ ನೀರಾವರಿ ಇಲಾಖೆಯ ಚಿತ್ತಯ್ಯ, ಗುತ್ತಿಗೆದಾರ ಶಂಕರರೆಡ್ಡಿ, ಮುಖಂಡರಾದ ಮಲ್ಲಿಕಾರ್ಜುನ, ರಾಮಲಿಂಗ, ಸುಬ್ಬರಾಯಪ್ಪ, ಗೋಪಾಲ, ಲಕ್ಷ್ಮಣ, ಶಂಕರನಾಯ್ಕ, ಕಾಲೇನಾಯ್ಕ, ಭೂಷಪ್ಪ, ವೇಣುಗೋಪಾಲರೆಡ್ಡಿ, ಜಗನ್ನಾಥಶೆಟ್ಟಿ ಸೇರಿದಂತೆ ಗ್ರಾಮಸ್ಥರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!