ಮಳೆಯಿಂದ ಹಾನಿಗೊಳಗಾದ ರೈತರ ಬೆಳೆಗಳಿಗೆ ಪರಿಹಾರದ ಹಣ ಹೆಚ್ಚಿಸಿ: ವಿಧಾನ ಪರಿಷತ್ ಸದಸ್ಯ ಆರ್ ರಾಜೇಂದ್ರ ರಾಜಣ್ಣ

ಮಧುಗಿರಿ : ಮಳೆಯಿಂದ ಹಾನಿಗೊಳಗಾದ ರೈತರ ಬೆಳೆಗಳಿಗೆ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಪರಿಹಾರದ ಮತ್ತವನ್ನು ಹೆಚ್ಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್ ರಾಜೇಂದ್ರ ರಾಜಣ್ಣ ಒತ್ತಾಯಿಸಿದರು

ತಾಲೂಕಿನ ಕಸಬಾ ವ್ಯಾಪ್ತಿಯ ಬೆಲ್ಲದಮಡಗು ಸೇರಿದಂತೆ ಮಳೆಯಿಂದ ಹಾನಿಗೊಳಗಾದ ರೈತರ ಬೆಳೆ ಮತ್ತು ಕೆರೆಗಳನ್ನು ವೀಕ್ಷಿಸಿ ಮಾತನಾಡಿದ ಅವರು ಸತತವಾಗಿ ಸುರಿಯುತ್ತಿರುವ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿಯೇ ಮಧುಗಿರಿ ತಾಲೂಕಿನಲ್ಲಿ ಅತಿ ಹೆಚ್ಚು ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ತಾಲೂಕಿನಲ್ಲಿ ತೆಂಗು ಮತ್ತು ಅಡಿಕೆ ಬೆಳೆಗಳಿಗೆ ಬಹಳಷ್ಟು ಹಾನಿಯಾಗಿದೆ. ತಾಲೂಕಿನ ರೈತರು ಸಾಲ ಸೋಲ ಮಾಡಿ ಜಮೀನುಗಳಲ್ಲಿ ಬೆಳೆಗಳನ್ನು ಇಟ್ಟಿದ್ದು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರೆಲ್ಲ ಜಮೀನಿಗಳಿಗೆ ನುಗ್ಗಿ ಬೆಳಗಳೆಲ್ಲ ಹಾಳಾಗಿವೆ. ಈಗ  ಸರ್ಕಾರದ ವತಿಯಿಂದ ಹಾನಿಗೊಳಗಾದ ರೈತರ ಬೆಳೆಗಳಿಗೆ  ಮಳೆ ಆಶ್ರಯಿತ ಬೆಳೆಗಳಿಗೆ ಹೆಕ್ಟರ್ ಗೆ 13 ಸಾವಿರ  ರೂಗಳು, ನೀರಾವರಿ ಬೆಳೆಗಳಿಗೆ 25 ಸಾವಿರ ರೂಗಳು ಮತ್ತು  ಬಹು ವಾರ್ಷಿಕ ಬೆಳೆಗಳಿಗೆ 28 ಸಾವಿರ ರೂಗಳನ್ನು ಪರಿಹಾರವಾಗಿ ನೀಡಲು ನಿಗದಿಪಡಿಸಿದ್ದು, ಈ ಪರಿಹಾರದ ಮೊತ್ತ ಏನೇನು ಸಾಲದು ಇದರಿಂದ ರೈತರಿಗೆ ಬಹಳಷ್ಟು ಅನ್ಯಾಯವಾಗಲಿದೆ.  ರಸ್ತೆ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಸಂದರ್ಭದಲ್ಲಿ ಹೆಕ್ಟರ್ ಗೆ ಆಯಾ ಪ್ರದೇಶದಲ್ಲಿರುವ ಒಂದೊಂದು ಗಿಡಕ್ಕೆ ಇಂತಿಷ್ಟು ಪರಿಹಾರ ಎಂದು ನಿಗದಿಗೊಳಿಸಿ ರೈತರಿಗೆ ಫರಿಹಾರ ನೀಡಲಾಗುತ್ತದೆ. ಸರ್ಕಾರ ಅದೇ ಮಾದರಿಯನ್ನು ಅನುಸರಿಸಿ ಈಗ ಮಳೆಯಿಂದ ಹಾನಿಗೊಳಗಾದ ರೈತರ ಜಮೀನುಗಳಿಗೂ ಅದೇ ಮಾದರಿಯಲ್ಲಿ ಪರಿಹಾರ ನೀಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ‌ ಇದರ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. 

ಅಧಿಕಾರಿಗಳೂ ಸಹ ಮಳೆಯಿಂದ ತೊಂದರೆಗೊಳಗಾದ ಜಮೀನುಗಳಿಗೆ ನೇರವಾಗಿ ಹೋಗಿ ಸರ್ವೆ ಕಾರ್ಯ ನಡೆಸದೆ ಆಯಾ ಜಮೀನುಗಳಿಗೆ ಸಂಬಂಧಪಟ್ಟ ರೈತರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಸರ್ವೇ ನಡೆಸಿದಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಯಾವ ಬೆಳೆಗಳು ಬೆಳೆದಿರುತ್ತಾರೆ ಎಂಬ ಮಾಹಿತಿ ಅಧಿಕಾರಿಗಳಿಗೆ ಸಿಗಲಿದ್ದು,  ಸರ್ಕಾರಕ್ಕೆ ಸಮರ್ಪಕ ಮಾಹಿತಿ ನೀಡಲು ಸಹಾಯಕವಾಗಲಿದೆ ಎಂದರು.

ಬೆಲ್ಲದ ಮಡುಗು ಗ್ರಾಮದ ಕೆರೆಯ ಕೋಡಿ ಒಡೆದು ಹೋಗಿದ್ದು, ಈ ಕೆರೆಯ ನೀರು ಬಿಟ್ಟನಕುರಿಕೆ ಸೇರಿದಂತೆ ಇನ್ನಿತರೆ ಗ್ರಾಮಗಳಿಗೆ ನುಗ್ಗಿದ್ದು, ಇದರಿಂದ ರೈತರ ಜಮೀನುಗಳಲ್ಲಿ ಬಹಳಷ್ಟು ಹಾನಿಯಾಗಿದೆ. ಇದರ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು ತುರ್ತು ಕ್ರಮ ವಹಿಸಲು  ತಿಳಿಸಿದ್ದು, ರಸ್ತೆಗಳಿಲ್ಲದ ಪ್ರದೇಶದಲ್ಲಿ ಮಳೆ ನಿಲ್ಲುವವರೆಗೂ  ತಾತ್ಕಾಲಿಕ  ರಸ್ತೆ ನಿರ್ಮಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಲು ಸೂಚಿಸಲಾಗಿದೆ ಎಂದರು.

 ತಹಶೀಲ್ದಾರ್ ಸುರೇಶಾಚಾರ್. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್,

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು, ಗ್ರಾ. ಪಂ, ಅಧ್ಯಕ್ಷೆ ಭಾರತಿ ಸಿದ್ದೇಶ್ , ಗ್ರಾ, ಪಂ, ಸದಸ್ಯರಾದ ರೇಹನಾ ಬಾನ್,  ವಜೀರ್ ಸಾಬ್, ಬಿ ಆರ್ ಕಾಂತರಾಜು , ಬಿ ಎನ್ ಪಾಂಡುರಂಗಯ್ಯ, ಬಿ. ಸಿದ್ದರಾಮಯ್ಯ, ಪಿ ಚೌಡಪ್ಪ, ರಮೇಶ್,  ನಾಗರಾಜು,  ಮುಖಂಡರಾದ ಡಿ.ಹೆಚ್. ನಾಗರಾಜು,  ಬಿ.ವಿ. ಮಂಜುನಾಥ್, ಬಿ.ಎನ್. ಮಂಜುನಾಥ್   ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!