.
ಕೊರಟಗೆರೆ :- ತಾಲ್ಲೂಕಿನ ಜಟ್ಟಿ ಅಗ್ರಹಾರ ಗ್ರಾಮದ ಬಳಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳು ನಡೆಯುತ್ತಲೇ ಇವೆ
ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿದರೂ
ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಸ್ಥಳದಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಿದರು …
ಈ ಅಪಘಾತಗಳಿಗೆ ಕೆಶಿಪ್ ನಿರ್ಮಾಣ ಮಾಡಿರುವ ಅವೈಜ್ಞಾನಿಕ ರಸ್ತೆ ಮುಖ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದರು ..
ವರ್ಷದಲ್ಲಿ 200ರಿಂದ 300 ಅಪಘಾತಗಳು ನಡೆಯುತ್ತಿರುತ್ತವೆ
ಅದರಲ್ಲಿ ಬಹುತೇಕ ಜನರು ಸಾವನ್ನಪ್ಪುತ್ತಿದ್ದಾರೆ
ಕೈಕಾಲು ಮುರಿದುಕೊಂಡವರು ಅದೆಷ್ಟು ಲೆಕ್ಕಕ್ಕೆ ಇಲ್ಲ
ಇಂದು ಕೂಡ ಒಂದು ಅಪಘಾತ ನಡೆಯಿತು ತನ್ನ ಮಗುವನ್ನು ಶಾಲೆಗೆ ಬಿಡಲು ಹೋದ ಅಜ್ಜಿಗೆ ಬಸ್ ಹಿಂಭಾಗದಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನನ್ನು ಗುದ್ದಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯವಾಗಿತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳಿಸಿಕೊಡಲಾಗಿದೆ ಎಂದು ಸ್ಥಳೀಯರು ತಿಳಿಸಿದರು …
ಜಟ್ಟಿ ಅಗ್ರಹಾರ ಗ್ರಾಮದಲ್ಲಿ ಇರುವ ಶಾಲೆಗೆ ಪ್ರತಿನಿತ್ಯ ಮಕ್ಕಳು ರಸ್ತೆ ದಾಟಿ ಹೋಗಬೇಕು
ಅತಿ ವೇಗವಾಗಿ ಬರುವ ವಾಹನಗಳು ಕಾಟದಿಂದ ಇದು ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ ..
ಸ್ಥಳಿಯ ಅಗ್ರಹಾರ ಗ್ರಾಮದ ಶಾಲೆಯ ರಸ್ತೆ ಬಳಿ ಎರಡು ರಸ್ತೆ ಹಂಪ್ ಗಳನ್ನು ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದರು..
ಸ್ಥಳಕ್ಕೆ ಆರ್ ಟಿಒ ಅಧಿಕಾರಿಗಳು ಮತ್ತು ಸ್ಥಳೀಯ ಕೊರಟಗೆರೆ ಪೋಲಿಸ್ ಠಾಣಾ ಅಧಿಕಾರಿಗಳು ಭೇಟಿ ನೀಡಿ ಜನರಿಗೆ ಮನವರಿಕೆ ತಿಳಿಸಿ ವಾಹನ ಸವಾರರಿಗೆ ಸಂಚರಿಸಲು ರಸ್ತೆ ತೆರವು ಮಾಡಿಕೊಟ್ಟರು …
ಗಿರಿಯಮ್ಮ ಎನ್ನುವ ವೃದ್ಧೆ ತನ್ನ ಮೊಮ್ಮಗುವನ್ನು ಶಾಲೆಗೆ ಬಿಟ್ಟು ಬರುವ ಸಂದರ್ಭದಲ್ಲಿ ಈ ಘಟನೆ ಜರುಗಿದೆ
ಸದ್ಯ ಯಾವುದೇ ಪ್ರಾಣಾಪಾಯವಾಗದೇ ವೃದ್ಧೆ ಹಾಗೂ ದ್ವಿಚಕ್ರ ವಾಹನ ಸವಾರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ
ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕಳಿಸಲಾಗಿದೆ…