ಪಾವಗಡ: ತಾಲೂಕಿನ ಸಿ.ಕೆ.ಪುರ ಗ್ರಾ.ಪಂ ನೂತನ ಅದ್ಯಕ್ಷರಾಗಿ ಕೊತ್ತೂರು ಗ್ರಾಮದ ರತ್ನಮ್ಮ ಕೊಂಡಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾ.ಪಂ.ನಲ್ಲಿ ಈ ಹಿಂದೆ ಅದ್ಯಕ್ಷರಾಗಿದ್ದ ಲಕ್ಷ್ಮಿಈರಣ್ಣ ರವರ ರಾಜಿನಾಮೆಯಿಂದ ತೆರೆವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದಿದ್ದು, ಕೊತ್ತೂರು ಗ್ರಾಮದ ರತ್ನಮ್ಮ ಕೊಂಡಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ತಹಶಿಲ್ದಾರ್ ವರದರಾಜು ಅವಿರೋಧ ಆಯ್ಕೆ ಎಂದು ಘೋಷಿಸಿದರು.
ಒಟ್ಟು 15 ಸದಸ್ಯರಿರುವ ಸಿ.ಕೆ.ಪುರ ಗ್ರಾ.ಪಂ.ನಲ್ಲಿ ನೂತನ ಅದ್ಯಕ್ಷರ ಆಯ್ಕೆ ಕುರಿತು ಗ್ರಾಮದ ಮುಖಂಡರ ಸೂಚನೆಯಂತೆ ಚುನಾವಣೆಯಲ್ಲಿ ಅಧ್ಯಕ್ಷಸ್ಥಾನಕ್ಕೆ ಪೈಪೋಟಿ ಇಲ್ಲದೆ ರತ್ನಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು ನಿಗದಿತ ಸಮಯದಲ್ಲಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ರತ್ನಮ್ಮ ಕೊಂಡಪ್ಪ ನವರು ನೂತನ ಅದ್ಯಕ್ಷರಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ವರದರಾಜು ಭಾಗವಹಿಸಿದ್ದರು, ಗ್ರಾ.ಪಂ ಉಪಾದ್ಯಕ್ಷೆ ಮಮತ, ಪಿಡಿಒ ಸುದರ್ಶನ್, ಎಸ್.ಎಸ್.ಕೆ ಸಂಘದ ಉಪಾದ್ಯಕ್ಷ ಆನಂದರಾವ್, ಮುಖಂಡರಾದ ಕೋಟೆ ಪ್ರಭಾಕರ್, ಕೊಂಡಪ್ಪ, ಕೆಇಬಿ ಯರ್ರಪ್ಪ, ಆರ್.ಐ ಶ್ರೀನಿವಾಸ್, ರಾಮಲಿಂಗಪ್ಪ, ಅಶೋಕ್, ಸುಬ್ಬರಾಯ, ಅಶ್ವಥ್, ಹನುಮಂತರಾಯ, ನಾಗಲಿಂಗಪ್ಪ, ಪ್ರಭಾಕರ್, ಸುವರ್ಣಮ್ಮ, ವೆಂಕಟೇಶ್, ಚಂದ್ರಕಳಾ, ಅರುಂದತಿ, ಲಕ್ಷ್ಮಮ್ಮ, ಸಣ್ಣಬೋರಕ್ಕ, ಗಿರೀಶ್, ಮಹಾಲಿಂಗಪ್ಪ, ಕಮಲ, ರಾಜಪ್ಪ ಸೇರಿದಂತೆ ಮುಖಂಡರು ಹಾಜರಿದ್ದು ನೂತನ ಅದ್ಯಕ್ಷರನ್ನು ಅಭಿನಂದಿಸಿದರು.