ಗ್ರಾಮದ ಸ್ವಚ್ಚತೆ ಕಾಪಾಡಿ: ತಾಪಂ‌ ಯೋಜನಾಧಿಕಾರಿ ಮಲ್ಲಿಕಾರ್ಜುನ ಕರೆ


ಪಾವಗಡ: ಮನೆಮನೆಗೂ ಇಂಗುಗುಂಡಿ ಹಾಗೂ ಉತ್ತಮ ಚರಂಡಿ ವ್ಯವಸ್ಥೆ , ಹಾಗೂ ಸಮುದಾಯ ಶೌಚಾಲಯವನ್ನು ನಿರ್ಮಾಣ ಮಾಡುವುದರಿಂದ ಯಿಂದಾಗಿ ಮಾತ್ರ ನಾವು ಗ್ರಾಮದ ಸ್ವಚ್ಛತೆಯನ್ನು ಕಾಪಾಡಲು ಸಾಧ್ಯವಾಗಲಿದೆ ಎಂದು ತಾಪಂ ಯೋಜನಾಧಿಕಾರಿ ಮಲ್ಲಿಕಾರ್ಜುನ ರವರು ತಿಳಿಸಿದರು.

ಕೆ.ಟಿ.ಹಳ್ಳಿ ಗ್ರಾಮದ ಸಾಂಸ್ಕೃತಿಕ ಭವನದಲ್ಲಿ
ಸ್ವಚ್ಛಭಾರತ ಮಿಷನ್ ಅಭಿಯಾನದಡಿ “ಗ್ರಾಮ ನೈರ್ಮಲ್ಯ ಯೋಜನೆ ತಯಾರಿಸುವ ಕುರಿತು ತರಬೇತಿ ಕಾರ್ಯಾಗಾರ” ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮದ ಸ್ವಚ್ಛತಾ ಕಾರ್ಯದಿಂದ‌ ನಮ್ಮ ಗ್ರಾಮದ ಜನತೆಯನ್ನು ರೋಗರುಜಿನಗಳಿಂದ ರಕ್ಷಣೆ‌ಮಾಡಿಕೊಳ್ಳ ಬಹುದಾಗಿದೆ.
ನಂತರ ಜಿಪಂ ಸ್ವಚ್ಛ ಭಾರತ ಮಿಷನ್ ನ ಸಂಯೋಜಕರಾದ ಬಲರಾಜು ಮಾತನಾಡಿ,
ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮದ ನೈರ್ಮಲ್ಯ ಕ್ರಿಯಾಯೋಜನೆಯನ್ನು ರೂಪಿಸ ಬೇಕು ಎಂದರು.
ಈ ವೇಳೆ ತಾಪಂ ಸ್ವಚ್ಛ ಭಾರತ ಸಂಯೋಜಕರಾದ ಚಕ್ರಧರ, ತಾಲೂಕು ಮನರೇಗಾ ಐಇಸಿ ಸಂಯೋಜಕರಾದ ಶ್ರೀಕಾಂತ್ ಕುಮಾರ್ ಹಾಗೂ ಕೆ.ಟಿ.ಹಳ್ಳಿ ಗ್ರಾಪಂ‌ ಅಭಿವೃದ್ಧಿ ಅಧಿಕಾರಿ ಮಂಜುನಾಥ, ಅಧ್ಯಕ್ಷರಾದ ಓಬಮ್ಮ ರವರು, ಹಾಗೂ 34 ಗ್ರಾಪಂ ಅಧ್ಯಕ್ಷರುಗಳು ಹಾಗೂ PDO’s , DEO’s. MBK’sರವರುಗಳು , ಶ್ರೀರಾಮ ಫ್ರೌಡ ಶಾಲೆಯ SDMC ಅಧ್ಯಕ್ಷರಾದ ರಂಗೇಗೌಡ ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!