ತಳ ಸಮೂದಾಯದ ವ್ಯಕ್ತಿಯನ್ನು ಗುರುತಿಸುವುದು ಅವರ ಶ್ರಮದಿಂದ: ಕೆ ಎನ್ ರಾಜಣ್ಣ


:ಮಧುಗಿರಿ: ತಳಸಮೂದಾಯದ ವ್ಯಕ್ತಿಯನ್ನು ಗುರುತಿಸುವುದು ಅವರ ಶ್ರಮದಿಂದ ಎಂದು ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ ಎನ್ ರಾಜಣ್ಣ ತಿಳಿಸಿದ್ದಾರೆ ಪಟ್ಟಣದ ಎಂ ಎನ್ ಕೆ ಸಮುದಾಯ ಭವನದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ವೆಂಕಟರಮಣಪ್ಪ ನವರಿಗೆ ಏರ್ಪಡಿಸಿದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಕ ವೆಂಕಟರಮಣಪ್ಪ ತಾಲೂಕಿಗೆ ಸರ್ವಜ್ಞ ಇದ್ದ ಹಾಗೆ ಎಂದು ತಿಳಿಸಿದವರು .ತಳ ಸಮುದಾಯಗಳು ಬಹಳ ನಿರ್ಲಕ್ಷಕ್ಕೆ ಒಳಗಾಗಿದ್ದು ಆ ಸಮುದಾಯಗಳು ಒಗ್ಗಟ್ಟಾಗಿ .ಶಿಕ್ಷಣವಂತರಾಗಿ ಆರ್ಥಿಕವಾಗಿ ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಶೋಷಣೆಯನ್ನು ತಪ್ಪಿಸಬಹುದು.

ತಳ ಸಮುದಾಯದ ವ್ಯಕ್ತಿಗಳ ಬುದ್ಧಿಶಕ್ತಿಯನ್ನು ಹೊರಹೊಮ್ಮಿಸುವ ಕೆಲಸ ಮಾಡಿದಾಗ ಮಾತ್ರ ಆತ ಸಮಾಜದ ಆಸ್ತಿಯಾಗುತ್ತಾನೆ ಈ ಸಮಾಜದಲ್ಲಿ ಕಳ ಶಿಕ್ಷಣವಂತರಾಗುವುದು ದೊಡ್ಡ ಸಾಧನೆ ಎಂದ ಅವರು ಕಷ್ಟ ಅರಿಯದವರಿಂದ ಸಮುದಾಯ ಸಮಸ್ಯೆಗಳ ನಿವಾರಣೆ ಅಸಾಧ್ಯ ನಮ್ಮಲ್ಲಿರುವ ಬದ್ಧತೆ ನಿವಾರಣೆಗೆ ರಾಜಕೀಯ ಶಕ್ತಿಯ ಅವಶ್ಯಕತೆ ಇದೆ ಎಂದರು ನಮ್ಮ ಸಮಾಜದಲ್ಲಿ ಶಿಕ್ಷಕರಿಗೆ ಹೆಚ್ಚಿನ ಸ್ಥಾನಮಾನವಿದೆ ವ್ಯಕ್ತಿಯ ಜೀವನ ರೂಪಿಸುವವರು ಶಿಕ್ಷಕರು ಶಿಕ್ಷಕರು ಸಮಾಜದ ನಿಜವಾದ ಆಸ್ತಿ ತಳ ಸಮುದಾಯಗಳಲ್ಲಿ ಜಾಗೃತಿಯ ಮೂಡಿದಾಗ ಮಾತ್ರ ಸಾಮಾಜಿಕವಾಗಿ ರಾಜಕೀಯವಾಗಿ ಅರ್ಥಿಕವಾಗಿ ಸದೃಢವಾಗಬಹುದುತಳಸಮುದಾಯಕ್ಕೆ ರಾಜಕೀಯ ಅಧಿಕಾರ ನೀಡಿದಾಗ ಮಾತ್ರ ಆ ಸಮಾಜ ನೆಮ್ಮದಿಯಾಗಿ ಮತ್ತು ಸ್ವಾಭಿಮಾನದಿಂದ ಬದುಕಬಹುದು ಎಂದರು…

ಸಮಾರಂಭದ.ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಕುಂಬಾರ ಗುರುಪೀಠದ ಶ್ರೀ ಶ್ರೀ ಬಸವ ಕುಂಬಾರ ಗುಂಡಯ್ಯ ಮಹಾಸ್ವಾಮಿಗಳು ವ್ಯಕ್ತಿಗಳು ತಮ್ಮ ವೃತ್ತಿಯಿಂದ ನಿವೃತ್ತರಾದರು ಪ್ರವೃತ್ತಿಯಿಂದ ನಿವೃತ್ತರಾಗುವುದಿಲ್ಲ ಪ್ರವೃತ್ತಿಯಿಂದ ಜೀವನ ಸುಗಮವಾಗಿ ಸಾಗುತ್ತದೆ ಶಿಕ್ಷಕರ ನಿವೃತ್ತಿ ಇತರ ಶಿಕ್ಷಕರಿಗೆ ಮಾದರಿಯಾಗುತ್ತದೆ ಪ್ರವೃತ್ತಿಯಿಂದ ಜೀವನ ಸುಖವಾಗಿ ಸಾಗುತ್ತದೆ ಸಮಾಜ ಸೇವೆಗೆ ದಾರಿಯಾಗುತ್ತದೆ ವೆಂಕಟರಮಣಪ್ಪ ಕುಂಬಾರ ಜನಾಂಗದ ಜನಿಸಿದರು

ಎಲ್ಲಾ ಸಮುದಾಯದವರಿಗೆ ಶಿಕ್ಷಣ ನೀಡಿದ್ದಾರೆ ಕುಂಬಾರ ಸಮಾಜ ಸಂಘಟಿತರಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಆರ್ಥಿಕವಾಗಿ ಬಲಿಷ್ಠರಾಗಬಹುದು ಕುಂಬಾರ ಜನಾಂಗ ವರ್ಷಕ್ಕೊಮ್ಮೆಯಾದರೂ ಮಠಕ್ಕೆ ಭೇಟಿ ನೀಡಬೇಕು ಎಂದರು.. ಜಿಲ್ಲಾ ಜಾತ್ಯತೀತ ಮಾನವ ವೇದಿಕೆ ಅಧ್ಯಕ್ಷರಾದ ಟಿ ಆರ್ ಅಂಜಿನಪ್ಪ.ಸಮಾರಂಭ  ಉದ್ಘಾಟಿಸಿ ಮಾತನಾಡಿದರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯ ಕುಮಾರ್. ನಿವೃತ್ತ ಅಪಾರ ಮುಖ್ಯ ಕಾರ್ಯದರ್ಶಿ ಗೋಪಾಲಯ್ಯ. ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಶ್ರೀನಿವಾಸ್. ತಾಲೂಕು ಅಧ್ಯಕ್ಷ ಚಿಕ್ಕಣ್ಣ .ಉಪನ್ಯಾಸಕ ಎನ್ ಮಹಾಲಿಂಗೇಶ್. ಪುರಸಭಾಮಾಜಿ ಅಧ್ಯಕ್ಷರು ಗಳಾದ ಎನ್ ಗಂಗಣ್ಣ. ಎಂ ಕೆ ನಂಜುಂಡಯ್ಯ. ಗುರುಮೂರ್ತಿ. ಸಿದ್ದಾಪುರ ವೀರಣ್ಣ .ಎಂ ಜಿ ಶ್ರೀನಿವಾಸಮೂರ್ತಿ. ಮ.ಲ.ನ. ಮೂರ್ತಿ. ಶ್ರೀಮತಿ ಅನ್ನಪೂರ್ಣ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ ಎಚ್ ವೆಂಕಟೇಶಯ್ಯ. ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ಮೂರ್ತಿ. ಪ್ರಾಂಶುಪಾಲರಾದ ರಂಗಪ್ಪ. ರೋಟರಿ ಅಧ್ಯಕ್ಷ ಕರಿಯಣ್ಣ .ಪುರಸಭಾ ಸದಸ್ಯರಾದ ಅಲೀಮ್ ಉಲ್ಲಾ. ಶ್ರೀಮತಿ ಗಾಯಿತ್ರಿ ನಾರಾಯಣ್. ಎಂಎಸ್ ಚಂದ್ರಶೇಖರ್  ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!