ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಬಡವನಪಾಳ್ಯ ಗ್ರಾಮದ ಶ್ರೀ ಕಲ್ಲೇಶ್ವರ ಯುವಕರ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಉದ್ಘಾಟಿಸಿದರು.
ವಾಲಿಬಾಲ್ ಅಂಕಣದಲ್ಲಿ ಆಟವಾಡುವ ಮೂಲಕ ಚಾಲನೆ ನೀಡಿದ ಬಿ.ಎಸ್.ನಾಗರಾಜು ಆಟಗಾರರನ್ನುದ್ದೇಶಿಸಿ ಮಾತನಾಡಿ ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ತರಬೇತಿ ಸಿಕ್ಕಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ತಯಾರಿಕೆ ಆಗಲಿದೆ. ಕೃಷಿ ಚಟುವಟಿಕೆ ಮಧ್ಯೆ ವಾಲಿಬಾಲ್ ಆಡುವ ಯುವಕರು ಸದೃಢಕಾಯರಗಿದ್ದಾರೆ. ಅವರಲ್ಲಿನ ಆಸಕ್ತಿಗೆ ನೀರೆರೆಯುವ ಕಾಯಕ ಸರ್ಕಾರ ಮಾಡಬೇಕು ಎಂದರು.
ಪಂದ್ಯಾವಳಿ ಆಯೋಜಕರ ಸಂಘಕ್ಕೆ ಆರ್ಥಿಕ ನೆರವು ನೀಡಿ, ಕುಗ್ರಾಮಗಳಲ್ಲಿ ರಾಜ್ಯ ಮಟ್ಟದ ಆಟಗಳು ನಡೆದಿರುವುದು ಸಂತಸದ ಸಂಗತಿ. ಇಂತಹ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯ. ದೈಹಿಕ ಕಸರತ್ತು ಮಾಡುವ ಗ್ರಾಮೀಣ ಪ್ರತಿಭೆಗೆ ಸೂಕ್ತ ವೇದಿಕೆ ಸೃಷ್ಠಿಗೆ ಜನ ಪ್ರತಿನಿಧಿಗಳ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಸಂಘದ ದಯಾನಂದ್, ಪುಟ್ಟರಾಜು, ವಿನಯಪ್ರಸಾದ್, ರೇಣುಕಾಪ್ರಸಾದ್ ಇತರರು ಇದ್ದರು.