ಆರಕ್ಷಕರು ಅಪರಾದ ತೆಡಯುವಲ್ಲಿ ಕಾರ್ಯೋನ್ಮುಕರಾಗಬೇಕು : ಕೆ ಷಡಕ್ಷರಿ

ತಿಪಟೂರು : ಆರಕ್ಷಕರು ಅಪರಾದ ತಡೆಯುತ್ತಿದ್ದಾರೆ ಆದರೂ ಸಹ ಅಪರಾದಿಗಳು ಅವರಿಗಿಂತ ಹೆಚ್ಚಿನ ರೀತಿಯಲ್ಲಿ ಕಳ್ಳತನಮಾಡುತ್ತಿದ್ದು ಆರಕ್ಷಕರು ಇನ್ನಷ್ಟು ಕಾರ್ಯಪ್ರೌವೃತ್ತರಾಗಿ ಅಪರಾದಿಗಳನ್ನು ಬಂದಿಸಬೇಕೆAದು ಮಾಜಿ ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದಲ್ಲಿ ಹೆಚ್ಚುತ್ತಿರವುವ ಕಳ್ಳತನ ಹಾಗೂ ಆರಕ್ಷಕರಿಂದ ತೊಂದರೆಯಾಗುತ್ತಿದೆ ಮೇಲಿನ ಅಧಿಕಾರಿಗಳು ಹೇಳುವವರೆಗೂ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ದೂರು ತೆಗೆದುಕೊಳ್ಳುವುದಿಲ್ಲ ಹಾಗೂ ಚಿಕ್ಕನಾಯಕನಹಳ್ಳಿ, ತಿಪಟೂರು ಹುಳಿಯಾರು ಸೇರಿದಂತೆ ಹೆಚ್ಚಿನ ಕಳ್ಳತನಗಳಾಗುತ್ತಿರುವ ಬಗ್ಗೆ ಕಾಂಗ್ರೆಸ್ ವಕ್ತಾರ ಮುರಳೀದರ ಹಾಲಪ್ಪ ನಗರದ ಡಿ.ವೈ.ಎಸ್ಪಿ ಕಛೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆಗೆ ಕಳ್ಳರು ಚಳ್ಳೇಹಣ್ಣು ತಿನ್ನುತ್ತಿದ್ದಾರೆ ಹಾಗೂ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಟ್ಕಾ ಪ್ರಕರಣ ಹೆಚ್ಚಾಗುತ್ತಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ ಬೈಕು ಕಳ್ಳತನ, ಮನೆ ಕಳ್ಳತನ ಹೆಚ್ಚಾಗಿದೆ, ಸಾರ್ವಜನಿಕರು ಭಯಭೀತರಾಗಿದ್ದಾರೆ. ಆದರೆ ನೀವು ಮಾತ್ರ ಕೆಲವು ದೂರುಗಳನ್ನು ತೆಗೆದುಕೊಂಡು ತನಿಖೆ ಮಾಡುತ್ತೀವೆಂದು ಕಳುಹಿಸುತ್ತೀರಾ ನಗರದ ತುಂಬೆಲ್ಲಾ ಭಿಕ್ಷಕರು, ಹಳ್ಳಿಹಳ್ಳಿಗಳಲ್ಲಿ ಸರಕುಗಳನ್ನು ಮಾರುವವರು ಹೆಚ್ಚಾಗುತ್ತಿದ್ದಾರೆ ಅವರಿಂದ ನೀವೇನಾದರು ದಾಖಲೆಗಳನ್ನು ಪರಿಶೀಲಿಸಿದ್ದೀರಾ ಮೊದಲು ಅವರ ದಾಖಲೆಗಳನ್ನು ಪಡೆದು ವ್ಯಾಪಾರ ಮಾಡಲು ಬಿಡಿ ಇಲ್ಲದಿದ್ದರೆ ಹಗಲು ಬೀದಿಗಳಲ್ಲಿ ಸಂಚರಿಸಿ ರಾತ್ರಿಹೊತ್ತು ಯಾರು ಇಲ್ಲದ ಮನೆಗಳನ್ನು ಕಳ್ಳತನಮಾಡುವ ಸಾಧ್ಯತೆ ಹೆಚ್ಚಾಗಿದ್ದು ಶೀಗ್ರವೇ ಬೀಟ್ ವ್ಯವಸ್ಥೆಯನ್ನು ಹೆಚ್ಚಿಸಿ ಸಾರ್ವಜನಿಕರು ಕಳ್ಳತನದ ಭಯದಿಮದ ಪಾರುಮಾಡಿ ಎಂದು ತಿಳಿಸಿದರು.
ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ ಮಾತನಾಡಿ ಇಂದಿನ ದಿನಗಳಲ್ಲಿ ಸೌಹಾರ್ದ ಪೊಲೀಸ್ ವ್ಯವಸ್ಥೆ ಹೆಚ್ಚಾಗಿದ್ದು ಹೆಚ್ಚಿನದಾಗಿ ಸ್ಥಳೀಯರೇ ಪೊಲೀಸ್ ಠಾಣೆಯ ಸಿಬ್ಬಂದಿಗಳಾಗಿರುವುದು ಸಂತೋಷವಾದರೆ ಇದೇ ಕೆಲವು ಕಡೆ ದೋಷವು ಆಗುತ್ತಿದೆ ಹೇಗೆಂದರೆ ನನಗೆ ಅವರು ಗೊತ್ತು ಇವರು ಗೊತ್ತು ಎಂದು ಹೇಳುತ್ತಾ ಆರಕ್ಷಕ ಇಲಾಖೆಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇನ್ನು ಮುಖ್ಯವಾಗಿ ತಿಪಟೂರು, ಹುಳಿಯಾರು, ಚಿಕ್ಕನಾಯಕನಹಳ್ಳಿಯಲ್ಲಿ ಅಪ್ರಾಪ್ತರು ದ್ವಿಚಕ್ರವಾಹನ ಚಾಲನೆ, ಎಲ್ಲಿ ಬೇಕೆಂದರಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳ ನಿಲುಗಡೆಮಾಡುವುದು ಇದರಿಂದಲೇ ಅಪಘಾತಗಳು ಹೆಚ್ಚಾಗುತ್ತಿವೆ ಕೂಡಲೇ ನಿಮ್ಮ ಉಪವಿಭಾಗದಲ್ಲಿ ಸೂಕ್ತ ಕ್ರಮಕೈಗೊಂಡು ಅನೈತಿಕ ಚಟುವಟಿಕೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!