ಕೊರಟಗೆರೆ: ಎತ್ತಿನಹೊಳೆ ಮ್ಯಾನೇಜರ್ ಮನೆಯಲ್ಲಿ 35 ಲಕ್ಷ ಕಳ್ಳತನ! ಪೊಲೀಸ್ ಠಾಣೆಗೆ ದೂರನ್ನು ನೀಡದ ಮ್ಯಾನೇಜರ್

ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರನ್ನು ನೀಡದ ಮ್ಯಾನೇಜರ್ ..

ಕೊರಟಗೆರೆ ಪಟ್ಟಣದ
ಶಿವಗಂಗಾ ಚಿತ್ರಮಂದಿರದ ಮುಂಭಾಗದಲ್ಲಿರುವ ಆನಂದಪ್ಪ ಎನ್ನುವವರ ಮನೆಯಲ್ಲಿ ವಾಸವಿದ್ದ ಎತ್ತಿನಹೊಳೆ ಮ್ಯಾನೇಜರ್ …

ನಿಗೂಢವಾಗಿದೆ 35 ಲಕ್ಷ ಕಳ್ಳತನದ ಘಟನೆ …

ಕಳ್ಳತನ ನಡೆದ ಸ್ಥಳದಲ್ಲಿ ಮಧುಗಿರಿಯ ಡಿವೈಎಸ್ಪಿ ಕೊರಟಗೆರೆಯ ಸರ್ಕಲ್ ಇನ್ಸ್ ಪೆಕ್ಟರ್ ಸೇರಿದಂತೆ ಶ್ವಾನದಳ ಕೂಡ ಸ್ಥಳದಲ್ಲಿ ಪರಿಶೀಲಿಸಲಾಯಿತು ..

ಆದರೆ ಈ ಘಟನೆ ಬಗ್ಗೆ ಇಲ್ಲಿಯವರೆಗೂ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎನ್ನುವುದೇ ಈ ಒಂದು ಕಳ್ಳತನಕ್ಕೆ ಸಂಶಯಗಳ ಯಕ್ಷ ಪ್ರಶ್ನೆಯಾಗಿದೆ ….

ಇನ್ನೂ ಕಳ್ಳತನ ನಡೆದಿರುವ ಮನೆಯ ಬಾಗಿಲ ಬೀಗವನ್ನು ಒಡೆಯದೆ ಮನೆಯೊಳಗೆ ಬೇರೆ ಯಾವ ವಸ್ತುವನ್ನು ತೆಗೆದುಕೊಳ್ಳದೆ…

ಮನೆಯೊಳಗೆ ಕಳ್ಳತನ ಮಾಡುವ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ವಿಚ್ ಆಫ್ ಮಾಡಿ ಕೇವಲ ಹಣ ಮಾತ್ರ ಕಳ್ಳತನ ಮಾಡಿದ್ದಾರ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆಯಾಗಿದೆ ..

ಬಿಗಿ ಒಡೆಯದೆ ಬಾಗಿಲು ಮುರಿಯದೆ ಮನೆಯಲ್ಲಿ ಹಣ ಕಳ್ಳತನವಾಗಿರುವುದು ಸಂಶಯಕ್ಕೆ ಕಾರಣವಾಗಿದೆ ನಿಜವಾಗಿಯೂ ಹಣ ಕಳ್ಳತನವಾಗಿದೆಹೇ.ಇಲ್ಲವೇ ಎತ್ತಿನಹೊಳೆ ಯೋಜನೆಯ ಹಣವನ್ನು ಲಪಟಾಯಿಸಲು ಕೆಲವರು ಹೂಡಿದ ಸಂಚಾಗಿರಬಹುದೇ ಎನ್ನುವುದು ನಿಗೂಢವಾಗಿದ್ದು ತನಿಖೆಯಿಂದ ಪ್ರಕರಣ ಹೊರಬೀಳಬೇಕಾಗಿದೆ …

ವರದಿ:- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ ….

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!