ಮದಕರಿ ನಾಯಕರ ನಾಡಿನ ಮಠದಲ್ಲಿ ಟಿಪ್ಪುವಿನ ಪುತ್ಥಳಿ ಮಾಡಿದ್ದು‌ ತಪ್ಪು: ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ.

ಮುರುಘಾ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ವಿಜಯಪುರದಲ್ಲಿ ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ್.

ಟಿಪ್ಪು ಸುಲ್ತಾನನನ್ನು ವರ್ಣನೆ ಮಾಡಿದಕ್ಕೆ ಸ್ವಾಮೀಜಿಗೆ ಈ ಗತಿ ಬಂದಿದೆ.

ಟಿಪ್ಪು ಸುಲ್ತಾನ್ ಪರವಾಗಿದ್ದರ ಪರಸ್ಪಿತಿ ಏನಾಗಿದೆ ನೋಡಿ.

ಟಿಪ್ಪು ಖಡ್ಗ ಪಡೆದ ವಿಜಯ ಮಲ್ಯ ಹಾಳಾದ, ಟಿಪ್ಪು ಸಿನಿಮಾ ಮಾಡಿ ಪ್ರೂಡ್ಯೂಸರ್ ಹಾಳಾದ.

ಟಿಪ್ಪು ಜಯಂತಿ ಮಾಡಿ ಸಿದ್ದರಾಮಯ್ಯ ಸೋತರು.

ಇದೀಗ ಸ್ವಾಮೀಜಿಗಳ ಸರದಿ ಎಂದು ವಾಗ್ದಾಳಿ ನಡೆಸಿದ ಶಾಸಕ ಯತ್ನಾಳ್.

ಚಿತ್ರದುರ್ಗ ಮದಕರಿ ನಾಯಕರು, ಒನಕೆ ಓಬವ್ವರ ನಾಡು.

ಅಂತಹ ನಾಯಕರ ನಾಡಿನಲ್ಲಿರುವ ಮಠದಲ್ಲಿ ಟಿಪ್ಪುವಿನ ಪುತ್ಥಳಿ ಮಾಡಿದ್ದು‌ ತಪ್ಪು.

ಮದಕರಿ ನಾಯಕರ ನೂರಾರು ಎಕರೆ ಜಮೀನು ಮಠಕ್ಕೆ ನೀಡಿದ್ದಾರೆ.

ಮದಕರಿ ನಾಯಕರ ಪ್ರದೇಶದ ಮಠದಲ್ಲಿ ಟಿಪ್ಪುವಿನ ವರ್ಣನೆ ಮಾಡಬಾರದಿತ್ತು.

ಮುರುಘಾ ಮಠ ಲಿಂಗಾಯತ ಮಠ. ಹಿಂದೂಗಳ ಮಠ.

ಆದರೆ ಅಲ್ಲಿನ ಸ್ವಾಮಿಗಳು ಕಮುನಿಷ್ಠರನ್ನು ನಂಬಿ ಹೀಗಾದರು.

ಶ್ರೀಗಳನ್ನು ಬದಲಾಯಿಸಿ ಬೇರೆಯವರಿಗೆ ಮಠ ನೀಡಬೇಕು

ಉತ್ತಮ ಆಡಳಿತಗಾರರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ ಯತ್ನಾಳ್.

ಸಮಾಜದ ಹಿರಿಯರು ಈ ವಿಚಾರದಲ್ಲಿ ಗಮನ ಹರಿಸಬೇಕು ಎಂದು ಆಗ್ರಹಿಸಿದ ಯತ್ನಾಳ್.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!