ಪಾವಗಡ: ಗ್ರಾಹಕರು ಮತ್ತು ಏಜೆಂಟರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಈ ಕೂಡಲೆ ಎಲ್ ಐ ಸಿ ಯ ಉನ್ನತ ಮಟ್ಟದ ಅಧಿಕಾರಿಗಳು ಮುಂದಾಗಬೇಕು ಎಂದು ಸೋಮವಾರ ಪಟ್ಟಣದ ಕಚೇರಿ ಮುಂಭಾಗ ಎಲ್ ಐ ಸಿ ಪ್ರತಿನಿಧಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗಿತು.
ಗ್ರಾಹಕರ ಪಾಲಿಸಿ ಮೇಲಿನ ಜಿಎಸ್‌ಟಿ ರದ್ದುಗೊಳಿಸುವುದು, ಪಾಲಿಸಿದಾರರ ಬೋನಸ್ ಹೆಚ್ಚಳ, ಲೋನ್ ಮತ್ತು ಬಡ್ಡಿ ಧರದ ತಾರತಮ್ಯ ಕಡಿಮೆ ಮಾಡುವುದು, ಏಜೆಂಟರಿಗೆ ಟರ್ಮ್ ಇನ್ಸುರೆನ್ಸ್, ಪೆನ್ಷನ್ ಸ್ಕೀಮ್, ಎಲ್.ಐ.ಸಿ ಚಾನಲೆ, ಗುಂಪು ವಿಮೆ ಹಾಗೂ ಏಜೆಂಟರಟ ಆರೋಗ್ಯ ವಿಮೆಗಳನ್ನು ನೀಡಿ ಗ್ರಾಹಕರು ಮತ್ತು ಏಜೆಂಟರ ನೆರೆವಿಗೆ ಬರಬೇಕೆಂದು ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗಿತು.
ಈ ವೇಳೆ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘಟನೆಯ್ಷ ವೆಂಕಟೇಶಪ್ಪ, ನಾಗಭೂಷಣ್, ಹನುಮಂತರಾಯ, ಅಕ್ಕಲಪ್ಪ, ಸತ್ತಾರ್, ಬಾಲು, ಗೋವಿಂದ ರೆಡ್ಡಿ ಫನಿರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.