ಪ್ರಪಂಚದಲ್ಲೇ ಅತ್ಯಂತ ಗೌರವ ವೃತ್ತಿ ಶಿಕ್ಷಕ ವೃತ್ತಿ: ಶಾಸಕ ಎಂ.ವಿ. ವೀರಭದ್ರಯ್ಯ

ಮಧುಗಿರಿ:   ಪ್ರಪಂಚದಲ್ಲೇ ಅತ್ಯಂತ ಗೌರವ ವೃತ್ತಿ ಶಿಕ್ಷಕ ವೃತ್ತಿ. ಶಿಕ್ಷಕರು ರೋಲ್ ಮಾಡೆಲ್ ಗಳು ಎಂದು ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು.

ಪಟ್ಟಣದ ಕುಂಚಿಟಿಗ ವಕ್ಕಲಿಗರ ಸಮುಧಾಯ ಭವನದಲ್ಲಿ ಸೋಮವಾರ  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 135 ನೇ ಜಯಂತಿ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ಪ್ರಾಥಮಿಕ, ಫ್ರೌಡಶಾಲಾ ಶಿಕ್ಷಕರ ವೃತ್ತಿ ಅನನ್ಯವಾದುದು. ಉನ್ನತ ಶಿಕ್ಷಣದಲ್ಲಿ  ಶಿಕ್ಷಣ ಪಡೆದ  ವಿದ್ಯಾರ್ಥಿಗಳಿಗೆ ಹೆಚ್ಚಿನ ಶಿಕ್ಷಣ ನೀಡಲಾಗುತ್ತದೆ ಆದರೆ ಪ್ರಾಥಮಿಕ ಶಾಲೆಗಳಲ್ಲಿ  ಬೇರು ಮಟ್ಟದಿಂದ ಶಿಕ್ಷಣ ನೀಡಬೇಕು. ಪ್ರಾಥಮಿಕ ಹಾಗೂ ಫ್ರೌಡಶಾಲಾ ಶಿಕ್ಷಕರ ಇವರ ಜವಾಬ್ದಾರಿ, ಪಾತ್ರ ಬಹಳ ಮುಖ್ಯ, ದೇಶದ ಪ್ರಧಾನಿಯಿಂದ ಹಿಡಿದು ರಾಷ್ಟ್ರಪತಿಯವರೆಗೆ  ಪ್ರತಿಯೊಬ್ಬರು ಶಿಕ್ಷಕರ ಗರಡಿಯಲ್ಲೇ ಪಳಗಿದವರು ಎಂದರು.

ಆದರೂ ಶಿಕ್ಷಕರಿಗೆ ಅನುಕೂಲವಾಗಿದ್ದನ್ನು ನಾನು ಕಾಣಲಿಲ್ಲ, ಶಿಕ್ಷಕರು ಸಂಘಟಿತರಾಗಿ ಹೌಸಿಂಗ್ ಸೊಸೈಟಿ, ಮತ್ತು ಕೋ- ಆಪರೇಟೀವ್ ಬ್ಯಾಂಕ್ ಆರಂಭಿಸಬಹುದಿತ್ತು, ಇದರ ಬಗ್ಗೆ ಚಿಂತನೆ ನಡೆಸಿದಲ್ಲಿ ನಾನೂ ಸಹ ಸಹಕಾರ ನೀಡುತ್ತೇನೆ ಎಂದರು.

ಶಿಕ್ಷಕರ ಬೇಡಿಕೆಯಾದ 7 ನೇ ವೇತನ ಆಯೋಗದ ಬಗ್ಗೆ ಸದನದಲ್ಲಿ ಚರ್ಚಿಸಿ ಗಮನ ಸೆಳೆಯುತ್ತೇನೆ.  ಸಂಬಂದಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದು ಬಗೆ ಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ  ಆರೋಗ್ಯ ಸಂಜೀವಿನಿಯನ್ನು ಯೋಜನೆಯನ್ನು ನಿವೃತ್ತ ಸರ್ಕಾರಿ ನೌಕರರಿಗೂ  ವಿಸ್ತರಿಸಬೇಕು ಎಂದು ಸರ್ವಜ್ಞ ವೇದಿಕೆಯ ಅಧ್ಯಕ್ಷ ವೆಂಕಟರವಣಪ್ಪ ಶಾಸಕರಿಗೆ ಮನವಿ ಸಲ್ಲಿಸಿದಾಗ  ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ತಗ್ಗೀಹಳ್ಳಿ ರಾಮಕೃಷ್ಣ ಆಶ್ರಮದ ಶ್ರೀ ರಮಾನಂದ ಸ್ವಾಮೀಜಿ ಮಾತನಾಡಿ  ಶಿಕ್ಷಕರ ತಾಳ್ಮೆ ಯಾವ ಸನ್ಯಾಸಿಗೂ ಕಡಿಮೆಯಿಲ್ಲ. ಶಿಕ್ಷಕನಾಗಿದ್ದ ವ್ಯಕ್ತಿ ದೇಶದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಬಹುದು ಎಂಬುದಕ್ಕೆ ರಾಧಾಕೃಷ್ಣ ಉದಾಹರಣೆ. ಇಂಗ್ಲೀಷ್ ಪ್ರಭಾವ ದೇಶದಲ್ಲಿ ಹೆಚ್ಚಾಗಿದ್ದು, ಕಲಬೆರಕೆ ಭಾಷೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ದಿನ ನಿತ್ಯದ ಬಾಷೆಯನ್ನಾಗಿ ಅಳವಡಿಸಿಕೊಂಡಿದ್ದೇವೆ. ಶಿಕ್ಷಣದ ಬಗ್ಗೆ ಮತ್ತು ಕನ್ನಡದ ಬಗ್ಗೆ ಕಡೆಗಣನೆ ಸಲ್ಲದು.  ನಮ್ಮ ಮಾತೃ ಭಾಷೆಯ ಬಗ್ಗೆ ನಮಗೆ ಗೌರವವಿರಲಿ.  ನಮ್ಮ ಬಾಷೆ ಅವಮಾನಿಸಿದರೆ ತಾಯಿಯನ್ನೇ ಅವಮಾನಿಸಿದಂತೆ.

ನಮ್ಮ ಸಂಸ್ಕೃತಿ,  ಆಚಾರ ವಿಚಾರಗಳು ಶಿಕ್ಷಣದ ಮೂಲ ಬೇರುಗಳು ಮನುಷ್ಯನಿಗೆ ದೈವಿಕ ಜ್ಞಾನವೇ ಪ್ರಧಾನ. ಅಂದಿನ ಕಾಲದಲ್ಲೇ ನಳಂದ ವಿಶ್ವ ವಿದ್ಯಾಲಯಕ್ಕೆ 70 ಸಾವಿರ ಜನ ದೇಶ ವಿದೇಶಗಳಿಂದ ಶಿಕ್ಷಣ ಪಡೆಯಲು ಬರುತ್ತಿದ್ದರು ಎಂದರೆ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಹೇಗಿತ್ತು ಎಂಬುದನ್ನು ತೋರಿಸುತ್ತದೆ ಎಂದರು. 

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಹೆಚ್. ವೆಂಕಟೇಶಯ್ಯ ಮಾತನಾಡಿ ಸರ್ಕಾರಿ ನೌಕರರಿಗೆ ಅನುಕೂಲವಾಗುವ ಆರೋಗ್ಯ ಸಂಜೀವಿನಿ ಯೋಜನೆಗೆ ಶೀಘ್ರದಲ್ಲೇ ಮುಖ್ಯಮಂತ್ರಿಗಳು  ಚಾಲನೆ ನೀಡಲಿದ್ದು, ಇದು ಜಾರಿಗೊಂಡಲ್ಲಿ  ಒಂದು ಸಾವಿರ ಖಾಯಿಲೆಗಳಿಗೆ ಚಿಕಿತ್ಸೆ ದೊರೆಯಲಿದೆ. 7 ನೇ ವೇತನ ಆಯೋಗ ಜಾರಿಗೆ ಎಲ್ಲ ಸಿದ್ದತೆ ನಡೆದಿದ್ದು, ರಾಜ್ಯದ ಸರ್ಕಾರಿ ನೌಕರರಿಗೂ ಕೇಂದ್ರ ಮಾದರಿಯಲ್ಲಿ ವೇತನ ನೀಡಬೇಕು.  ಶಾಸಕರು  7 ನೇ ವೇತನ ಆಯೋಗ ಜಾರಿಗೆ ಸಂಬಂದಪಟ್ಟವರೊಂದಿಗೆ ಚರ್ಚಿಸಿ ಜಾರಿಗೆ ತುರ್ತಾಗಿ ಜಾರಿಗೆ ತರಲು  ಶ್ರಮಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ  ಕರುನಾಡ ವಿಜಯ ಸೇನೆ,  ರಕ್ತ ದಾನಿ ಶಿಕ್ಷಕ ಬಳಗ,  ರೋಟರಿ ಕ್ಲಬ್  ಗುಡ್ ಲೇಬರ್ ಇಂಡಿಯಾ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.  

 ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ತಿಮ್ಮರಾಯಪ್ಪ, ಬಿಇಓ ಎನ್. ನಂಜುಂಡಯ್ಯ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಡಿ.ಎಸ್. ಹನುಮಂತರಾಯಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಸಂಘದ ಅಧ್ಯಕ್ಷ ಸಂಜಯ್, ಕಾರ್ಯದರ್ಶಿ ಎಂ.ಎನ್. ನಟರಾಜು,  ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಟಿ ರಂಗಧಾಮಯ್ಯ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚೆನ್ನಿಗರಾಮಯ್ಯ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಪದ್ಮಾವತಮ್ಮ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದೊಡ್ಡಯರಗಾಮಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್ ಆರ್ ಶಶಿಕುಮಾರ್ ಕ ಶಾಪ ಅಧ್ಯಕ್ಷ ಸಹನಾ ನಾಗೇಶ್, ಸರ್ವಜ್ಞ ವೇದಿಕೆಯ ಅಧ್ಯಕ್ಷ ವೆಂಕಟರವಣಪ್ಪ ಇತರರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!