ಮನೆಗಳಿಗೆ ನುಗ್ಗಿದ ಮಳೆ ನೀರು : ಕಂಗಾಲಾದ ಸಂತ್ರಸ್ತರಿಗೆ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಸಹಾಯ

ಗುಬ್ಬಿ: ಇಡೀ ರಾತ್ರಿ ಸುರಿದ ಮಳೆಗೆ ಸಿಲುಕಿದ ತಾಲ್ಲೂಕಿನ ಚೇಳೂರು ಹೋಬಳಿ ಸಿ. ಹರಿವೇಸಂದ್ರ ಗ್ರಾಮದ ಹಲವು ಮನೆಗೆ ನೀರು ನುಗ್ಗಿ ದವಸ ಧಾನ್ಯ ಕೊಚ್ಚಿ ಹೋಗಿ ಕೆಲ ಮನೆಗಳು ಅಪಾಯದಂಚಿನಲ್ಲಿದ್ದು ಕಂಡ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಸಂತ್ರಸ್ತರ ನೆರವಿಗೆ ನಿಂತು ಎಂಟು ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ ಮಾನವೀಯತೆ ಮೆರೆದರು.

ಅತ್ಯಧಿಕ ಮಳೆ 122 ಮಿಮೀ ಚೇಳೂರು ಹೋಬಳಿಯಲ್ಲಿ ದಾಖಲಾಗಿ ಈ ಗ್ರಾಮದಲ್ಲಿ ಹೆಚ್ಚು ಮಳೆ ಬಿದ್ದು ನಿರಂತರ ನೀರು ಸುರಿದು ಇಡೀ ಗ್ರಾಮವೇ ಕಂಗಾಲಾಗಿ ಜನರು ಮನೆಯಿಂದ ಹೊರ ಬಂದ ಘಟನೆ ನಡೆದಿದೆ. ದವಸ ಧಾನ್ಯ ಕೊಚ್ಚಿ ಹೋಗಿದ ಜೊತೆ ಕೆಲ ಮನೆಯ ಗೋಡೆಗಳು ಕುಸಿದಿದೆ. ಮನೆಯಿಂದ ನೀರು ಹೊರ ಹಾಕಲು ಹರಸಾಹಸ ಪಡಬೇಕಾಯಿತು.

ವಿಚಾರ ತಿಳಿದ ತಕ್ಷಣ ಸಿ. ಹರಿವೇಸಂದ್ರ ಗ್ರಾಮಕ್ಕೆ ಭೇಟಿ ನೀಡಿದ ಬಿ.ಎಸ್.ನಾಗರಾಜು ಎಲ್ಲಾ ಸಂತ್ರಸ್ತರ ಮನೆಗೆ ಭೇಟಿ ನೀಡಿ ವಸ್ತು ಸ್ಥಿತಿ ಅವಲೋಕಿಸಿ ತೀರಾ ತೊಂದರೆಗೆ ಒಳಗಾದ ಎಂಟು ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಮಾತನಾಡಿದ ಅವರು ಹೇಮಾವತಿ ಇಲಾಖೆ ನಿರ್ಮಿಸಿದ ಚರಂಡಿ ಅವೈಜ್ಞಾನಿಕವಾಗಿದೆ. ಸರಾಗವಾಗಿ ಹರಿಯದ ನೀರು ಮನೆಗೆ ನುಗ್ಗಿದೆ. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಜೊತೆ ಚರ್ಚಿಸಿ ದುರಸ್ಥಿ ಮಾಡಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕೀರಪ್ಪ, ಮುಖಂಡರಾದ ಗಂಗಾಧರ್, ಶಿವಾಜಿ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!