ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಅವರಿಗೆ ಆತ್ಮೀಯ ಸನ್ಮಾನ ಜತೆ ಅಭಿನಂದನೆ ಸಲ್ಲಿಸಿದ ಹಾಗಲವಾಡಿ ಜನತೆ.

.

.

ಗುಬ್ಬಿ: ತಾಲ್ಲೂಕಿನ ಹಾಗಲವಾಡಿ ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಅವರಿಗೆ ಅಭಿನಂದನೆ ಸನ್ಮಾನ ಕಾರ್ಯಕ್ರಮವನ್ನು ಎಚ್.ಸಿ.ಚಂದ್ರಶೇಖರ್ ಪೂಜಾರ್, ಗ್ರಾಪಂ ಸದಸ್ಯ ಎಚ್.ಕೆ.ಅನಿಲ್ ಕುಮಾರ್ ಹಾಗೂ ಕರಿಯಮ್ಮ ದೇವಿ ದೇವಾಲಯ ಸಮಿತಿಯ ಎಚ್.ಆರ್ ಕೆಂಪರಾಜು ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಜರುಗಿತು.

ಸನ್ಮಾನ ಸ್ವೀಕರಿಸಿದ ಮಾತನಾಡಿದ ಆರ್.ರಾಜೇಂದ್ರ ಮಾಜಿ ಸಂಸದ ಮುದ್ದಹನುಮೇಗೌಡ ಅವರು ನಮ್ಮ ಪಕ್ಷದಲ್ಲಿ ಉತ್ತಮ ರಾಜಕಾರಣಿ ಬಹಳ ಬುದ್ದಿವಂತರು ಅವರು ಯಾಕೆ ಬಿಜೆಪಿ ಕಡೆ ಮನಸು ಮಾಡಿದ್ದಾರೆ ಎಂಬ ವಿಷಯ ನಮಗೂ ಗೊತ್ತಾಗುತ್ತಿಲ್ಲ. ಅವರನ್ನ ಮನವೊಲಿಸುವ ಕೆಲಸವನ್ನು ನಮ್ಮ ನಾಯಕರು ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ನನ್ನ ಚುನಾವಣೆಗೆ ಸಹಕರಿಸಿದ ಗುಬ್ಬಿ ಶಾಸಕರ ಋಣ ನನ್ನ ಮೇಲೆ ಇದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಸಹ ಅವರ ಋಣ ತೀರುಸುತ್ತೇನೆ. ಮತ್ತೆ ಗುಬ್ಬಿಯಲ್ಲಿ ಅವರ ಗೆಲುವಿಗೆ ನಾನು ಕೂಡ ಸಹಕಾರ ನೀಡುತ್ತೇನೆ ಎಂದರು.

ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ ಹಾಗಲವಾಡಿ , ಚೇಳೂರು ಎರಡು ಹೋಬಳಿಗಳು ಸಹ ಹಿಂದುಳಿದ ಪ್ರದೇಶವಾಗಿದ್ದು ಅತಿ ಹೆಚ್ಚು ಬೋರ್ ವೆಲ್ ಗಳು , ಸಾಗುವಳಿ ಚೀಟಿಗಳನ್ನು ಈ ‌ಭಾಗಕ್ಕೆ ಕೊಟ್ಟಿದ್ದೇನೆ.ಅನುದಾನವನ್ನು ಕೂಡ ಪ್ರಾಮಾಣಿಕವಾಗಿ ಈ ಭಾಗಕ್ಕೆ ಕೊಟ್ಟಿದ್ದೇನೆ. ಸುಬೀಕ್ಷವಾಗಿ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿದೆ‌. ನೀರಾವರಿ ವಿಷಯದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿ ಸ್ವಲ್ಪ ತಡವಾಗಿದೆ. ಪೈಪ್ ಲೈನ್‌ ಮುಖಾಂತರ ಕಾಮಾಗಾರಿ ಮಾಡಲಾಗಿ ಹಾಗಲವಾಡಿ ಕೆರೆಗೆ ಹೇಮೆ ಹರಿಸಲಾಗುವುದು ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಹಾಗಲವಾಡಿ , ಮಂಚಲದೊರೆ , ಅಳಿಲಘಟ್ಟ , ಶಿವಪುರ , ಹೊಸಕೆರೆ ಗ್ರಾಮ ಪಂಚಾಯಿತಿ ಸದಸ್ಯರನ್ನ ವಿಧಾನ ಪರಿಷತ್ ಸದಸ್ಯ ಆರ್ ರಾಜೇಂದ್ರ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜ್ಯೋತಿ ಮಹೇಶ್ ಗ್ರಾ.ಪಂ.ಅಧ್ಯಕ್ಷರು,ನಿರ್ಮಲ ಡಿಸಿಸಿ ಬ್ಯಾಂಕ್ ಸದಸ್ಯರು, ಸಿಂಗದಹಳ್ಳಿ ರಾಜ್ ಕುಮಾರ್,ಮರಿಲಿಂಗಯ್ಯ, ಪಾಂಡುರಂಗಯ್ಯ,ತೆನಾಲಿ ರಾಮಕೃಷ್ಣ,ಅನಿಲ್ ಕುಮಾರ್,ಕರಿಬಸವಯ್ಯ ಶಿವರಾಂ ಪುರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!