ಕುಣಿಗಲ್: ಲಾರಿ ಹಾಗೂ ಮಹೇಂದ್ರ ಬೋಲೇರೋ ವಾಹನಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಒಬ್ಬರು ಸಾವು ಒಬ್ಬ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಿರುವ ಘಟನೆ ನಡೆದಿದೆ
ತಾಲೂಕಿನ ಹುಲಿಯೂರುದುರ್ಗ ಹೋಬಳಿ ಪಿ ಹೊನಮಾಚನಹಳ್ಳಿ ರಾಜ್ಯ ಹೆದ್ದಾರಿ 33ರಲ್ಲಿ ಬೆಳಿಗ್ಗೆ ಏಳರ ಸಮಯದಲ್ಲಿ ಕುಣಿಗಲ್ ಮಾರ್ಗವಾಗಿ ಮದ್ದೂರಿಗೆ ಹೋಗುತ್ತಿದ್ದ ಲಾರಿ ಹಾಗೂ ಹುಲಿಯೂರುದುರ್ಗದಿಂದ ಪಶು ಆಹಾರ ತುಂಬಿಕೊಂಡು ಮದ್ದೂರ್ ಕಡೆಗೆ ಹೋಗುತ್ತಿದ್ದಾಗ ಓವರ್ ಟೆಕ್ ಮಾಡಲು ಯತ್ನಿಸಿದಾಗ ಬರುತ್ತಿದ್ದ ಡಿಕ್ಕಿ ಸಂಭವಿಸಿ ಮಹೇಂದ್ರ ಬುಲಾರ ವಾಹನದಲ್ಲಿದ್ದ ಸಲೀಂ ಪಾಷಾ( 30) ಎಂಬಾತನು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬನಿಗೆ ತೀವ್ರ ಗಾಯಗಳಾಗಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ