ಮಲಪ್ರಭಾ ನದಿಯ ಬೆಣ್ಣೆ ಹಳ್ಳದ ಹೂಳೆತ್ತಿ ತಡೆಗೋಡೆ ನಿರ್ಮಿಸಲು ಒತ್ತಾಯ

ಬಾದಾಮಿ: ಮಲಪ್ರಭಾ ನದಿಯಿಂದ ಪ್ರವಾಹಕ್ಕೆ ಬಲು ಮುಖ್ಯ ಪಾತ್ರ ಇರುವ ಬೆಣ್ಣೆ ಹಳ್ಳದ ಹೂಳೆತ್ತಿ ತಡೆಗೋಡೆ ನಿರ್ಮಿಸಲು ಒತ್ತಾಯಿಸಿ ಬಾದಾಮಿಯ ಬಹುಜನ ಚಳುವಳಿ ಸಂಘಟನೆಯಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ನವರಿಗೂ ಘನ ಸರಕಾರದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಯವರಿಗೂ ಮನವಿ ಸಲ್ಲಿಸಲಾಯಿತು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಲಪ್ರಭಾ ನದಿಯ ಪದೇ ಪದೇ ಪ್ರವಾಹಕ್ಕೆ ನದಿ ಪಾತ್ರದ ಜನರು ತತ್ತರಿಸಿ ಹೋಗುತ್ತಿರುವುದು ಇಂದು ಮಾನ್ನೆಯದಲ್ಲ, ಪ್ರವಾಹದ ರಭಸಕ್ಕೆ ಬಹು ಮುಖ್ಯ ಪಾತ್ರ ವಹಿಸುವುದು ಬೆಣ್ಣೆ ಹಳ್ಳ ಇದು ತಾಲೂಕಿನ ಹೇಬ್ಬಳ್ಳಿ ಗ್ರಾಮದಿಂದ ಕೂಡಿಕೊಳ್ಳುತ್ತದೆ. ಹೀಗಾಗಿ ಹೆಬ್ಬ ಬಳ್ಳಿಯಿಂದ ಜಕನೂರ ಗ್ರಾಮದ ವರೆಗಿನ ಮಲಪ್ರಭಾ ನದಿಯ ಹುಳ್ಳೆತ್ತಿಸಿ ತಡೆಗೋಡೆ ನಿರ್ಮಾಣ ಮಾಡಿದರೆ ಪ್ರವಾಹಕ್ಕೆ ತತ್ತರಿಸಿ ಹೋಗುವ ಜನರು ಜಾನುವಾರುಗಳು ನಮ್ಮ ಉಪಜೀವನ ಮಾಡಿಕೊಳ್ಳಲು ಇರುವ ಜಮೀನು ಎಲ್ಲವೂ ಉಳಿಯುತ್ತವೆ ಈ ಕ್ರಮ ತೆಗೆದುಕೊಳ್ಳದಿದ್ದರೆ ಈ ಎಲ್ಲಾ ಗ್ರಾಮಗಳು ಸಂಪೂರ್ಣ್ ಪ್ರವಾಹಕ್ಕೆ ಮುಳುಗಿ ಜೀವನ ನಲುಗಿ ಹೋಗುವುದು ಅದಕ್ಕಾಗಿ ಬಾದಾಮಿ ಮತಕ್ಷೇತ್ರದ ಶಾಸಕರು ಹಾಗೂ ವಿರೋಧ ಪಕ್ಷದ ನಾಯಕರೂ ಆದ ಸಿದ್ದರಾಮಯ್ಯ ನವರು ಸರಕಾರವನ್ನು ಒತ್ತಾಯಿಸಬೇಕು ಹಾಗೂ ಘನ ಸರಕಾರದ ಮುಖ್ಯಮಂತ್ರಿಗಳು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಾದಾಮಿ ತಾಲೂಕಾ ದಂಡಾಧಿಕಾರಿ ಗಳ ಕಛೇರಿಗೆ ಬಾದಾಮಿ ತಾಲೂಕಾ ಅಧ್ಯಕ್ಷರಾದ ಪ್ರಕಾಶ.ಎಸ್. ಸರನಾಯಕ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಬಹುಜನ ಚಳುವಳಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಹಿರಿಯಪ್ಪ ಅಣ್ಣ ಮಾದರ,,ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಸಾಗರ ರೊಡ್ಡ ಪ್ಪನವರ,,ಹಣಮಂತ ಲೆಂಕೆನ್ನವರ,ಹಾಗೂ ದಲಿತ ಮುಖಂಡ ನಾಗೇಶ್ ದೊಡಮನಿ,,ನಿಂಗಪ್ಪ.ಲೆಂಕನ್ನವರ ಹಾಗೂ ಎಲ್ಲಾ ತಾಲೂಕಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!