ಹಕ್ಕಿನಂತೆ ಕರ್ತವ್ಯ ನಿರ್ವಹಣೆ ನಮ್ಮೆಲ್ಲರ ಹೊಣೆ: ಕೃಷ್ಣಮೂರ್ತಿ

ತುಮಕೂರಿನ ಶ್ರೀ ಸಿದ್ದಗಂಗಾ ಮಹಿಳಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಭೋದಕ ಸಿಬ್ಬಂದಿಗಳಿಗೆ ಮತದಾನ/ಮತದಾರರ ಅರಿವು ಮೂಡಿಸುವ ಅಂಗವಾಗಿ ಆಧಾರ್ ಸಂಖ್ಯೆಯನ್ನು ವೋಟರ್ ID ಗೆ ಲಿಂಕ್ ಮಾಡುವ ಬಗ್ಗೆ ತರಬೇತಿ ಮತ್ತು Hands on Training ನೀಡುವ ತರಬೇತಿಯನ್ನು ಕಾಲೇಜಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಈ ಕುರಿತು ವಿದ್ಯಾರ್ಥಿಗಳಿಗೆ ಪ್ರಾಸ್ತಾವಿಕ ನುಡಿ ಮೂಲಕ ಮತದಾನದ ಮಹತ್ವ, ಸಂವಿಧಾನವು ನಮಗೆ ನೀಡಿರುವ ಮೂಲಭೂತ ಹಕ್ಕುಗಳ ರೀತಿಯಲ್ಲಿಯೇ ಕರ್ತವ್ಯಗಳನ್ನು ನಾವೆಲ್ಲರೂ ನಿರ್ವಹಿಸಬೇಕಿದೆ ಎಂದು ತುಮಕೂರು ಜಿಲ್ಲಾ ಪಂಚಾಯಿತಿಯ ಉಪ-ಕಾರ್ಯದರ್ಶಿ(ಆಡಳಿತ)ಗಳಾದ ಶ್ರೀ ಕೃಷ್ಣಮೂರ್ತಿ ರವರು ಮಾಹಿತಿ ನೀಡಿದರು.

ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಾದ ಗುರು ಬಸವ ರಾಜೇಗೌಡ
ರವರು ಮಾತನಾಡಿ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಸಂಖ್ಯೆಗೆ ಜೋಡಣೆ ಮಾಡುವ ಹಾಗೂ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸುವ ಪ್ರಕ್ರಿಯೆ ಕುರಿತು ಮಾಹಿತಿ ಒದಗಿಸಿದರು.

ತರಬೇತಿಯಲ್ಲಿ ಜಿ.ಪಂ ತಾಂತ್ರಿಕ ಸಹಾಯಕರಾದ ಶ್ರೀನಿವಾಸ ಆಧಾರ್ ಲಿಂಕ್ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಗಂಗಾ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ//ಸಣ್ಣಸ್ವಾಮಿ, ಜಿ.ಪಂ. ಸಮಾಲೋಚಕರಾದ ಶ್ರೀ ಟಿ.ಕೆ. ವಿನುತ್, ಮಹಾನಗರ ಪಾಲಿಕೆ ಅಧಿಕಾರಿಗಳು ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!