ಮಧುಗಿರಿ :- ಪಟ್ಟಣದ ಐತಿಹಾಸಿಕ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ವತಿಯಿಂದ ಏರ್ಪಡಿಸಿದ್ದ ತೆಪ್ಪೋತ್ಸವ ಕಾರ್ಯಕ್ರಮ ಅಪಾರ ಭಕ್ತರ ಸಮ್ಮುಖದಲ್ಲಿ ಶನಿವಾರ ನಡೆಯಿತು.
ಪಟ್ಟಣದ ಬೆಸ್ಕಾಂ ಕಚೇರಿ ಮುಂಭಾಗ ಇರುವ ಐತಿಹಾಸಿಕ ಕಲ್ಯಾಣಿಯಲ್ಲಿ ದೇವರ ಉತ್ಸವಮೂರ್ತಿಯನ್ನು ಕುಳ್ಳಿರಿಸಿ 7ಬಾರಿ ಪ್ರದಕ್ಷಿಣೆ ಮಾಡಿಸಲಾಯಿತು.
ಇದಕ್ಕೂ ಮುನ್ನಾ ಮಧುಗಿರಿ ಪಟ್ಟಣದ ವೆಂಕಟರಮಣ ಸ್ವಾಮಿ ದೇವಾಲಯದಿಂದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಅಪಾರ ಭಕ್ತರು ಕರೆತಂದರು.
ಸೇವಾಕರ್ತರಾದ ಹರಿಪ್ರಸನ್ನ ,ಧಾರ್ಮಿಕ ಮುಖಂಡ ಡಾ. ಎಂ.ಜಿ. ಶ್ರೀನಿವಾಸ್ ಮೂರ್ತಿ, ಪುರಸಭಾ ಮಾಜಿ ಅಧ್ಯಕ್ಷ ಎಂ.ವಿ.ಗೋವಿಂದರಾಜು, ಪುರಸಭಾ ಮಾಜಿ ಸದಸ್ಯ ರಮೇಶ್, ಸದಸ್ಯ ಎಂ ಎನ್ ಗಂಗರಾಜು,ಲಾಲಾಪೆಟೆ ಮಂಜುನಾಥ್, ಹಾಗೂ ಶ್ರೀಪಾದ ಸೇವಾಕರ್ತರು ಇದ್ದರು