ಬಸ್ ಚಾಲಕ ಹಾಗೂ ಶಾಲಾ ಆಡಳಿತದ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ….
ಮಧುಗಿರಿ : ಪಟ್ಟಣದ ಹೊರವಲಯದ ಮಧುಗಿರಿ ತುಮಕೂರು ಬೈಪಾಸ್ ಮುಖ್ಯರಸ್ತೆ ಸಮೀಪವಿರುವ ಶ್ರೀ ರಾಘವೇಂದ್ರ ಇಂಟರ್ನ್ಯಾಷನಲ್ ಸ್ಕೂಲ್ ಗೆ ಸಂಬಂಧಿಸಿದ ಶಾಲಾ ವಾಹನದಲ್ಲಿ ಶಾಲಾ ವಿದ್ಯಾರ್ಥಿಗಳು ಬಸ್ ನ ಫುಟ್ ಬೋರ್ಡ್ನಲ್ಲಿ ನೇತಾಡಿಕೊಂಡು ಅಪಾಯಕಾರಿ ರೀತಿಯಲ್ಲಿ ನೇತಾಡುತ್ತಾ ಪ್ರಯಾಣ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಲಾ ವಾಹನದಲ್ಲಿ ನೇತಾಡಿಕೊಂಡು ಹೋದ ದೃಶ್ಯವನ್ನು ಗಮನಿಸಿದ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದು, ಪ್ರಯಾಣದ ವೇಳೆ ವಿದ್ಯಾರ್ಥಿಗಳಿಗೆ ಏನಾದರು ಅಪಾಯ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿದ್ದಾರೆ.
ಶಾಲಾ ಬಸ್ ಕೆಪಾಸಿಟಿಗು ಹೆಚ್ಚಾಗಿ ವಿದ್ಯಾರ್ಥಿಗಳನ್ನು ತುಂಬಿಕೊಂಡು ಸಂಚರಿಸಿದ್ದು ತುಂಬಾನೇ ಅಪಾಯಕಾರಿ, ರಸ್ತೆಗಳಲ್ಲಿ ಹೆಚ್ಚಿನ ಗುಂಡಿಗಳು ಬಿದ್ದಿರುವುದರಿಂದ ಈ ರೀತಿ ಪ್ರಯಾಣ ಬಳಸುವುದು ತುಂಬಾನೇ ಅಪಾಯಕರವಾಗಿದೆ,
ಹಾಗೂ ಏನಾದರೂ ಅನಾಹುತವಾದರೆ ಇದಕ್ಕೆ ಶಾಲಾ ಆಡಳಿತ ನವರು ಅಥವಾ ಆರ್. ಟಿ. ಓ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳುತ್ತಾರ ಎಂದು ಜನಸಾಮಾನ್ಯರು ಪ್ರಶ್ನಿಸಿದರು…
ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಶಾಲೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಒಂದು ವೇಳೆ ಬಸ್ಗಳ ಕೊರತೆಯಿದ್ದರೆ, ಹೆಚ್ಚುವರಿ ಬಸ್ ಒದಗಿಸಿ, ಮುಂದಾಗುವ ಅಪಾಯವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ