ಕಾಂಗ್ರೆಸ್ ನ ಹಿರಿಯ ರಾಜಕೀಯ ಧುರೀಣ ಶಿವರಾಯಪ್ಪ.ಡಿ. ಜೋಗೀನ ಅಧಿಕೃತವಾಗಿ ಆಮ್ ಆದ್ಮಿ ಪಕ್ಷ ಸೇರ್ಪಡೆ

ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಹಿರಿಯ ರಾಜಕೀಯ ಧುರೀಣರಾದ ಶಿವರಾಯಪ್ಪ.ಡಿ. ಜೋಗೀನ ಅಧಿಕೃತವಾಗಿ ಆಮ್ ಆದ್ಮಿ ಪಕ್ಷ ಸೇರ್ಪಡೆ.ಹೊಸ ತಿರುವು ಪಡೆದುಕೊಂಡ ಬಾದಾಮಿ ಮತಕ್ಷೇತ್ರ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರದ ಕಾಂಗ್ರೆಸ್ ನ ಹಿರಿಯ ರಾಜಕಾರಣಿ ತಾಲೂಕಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ರಾಜಕೀಯ ಧುರೀಣರಾದ ಶಿವರಾಯ ಪ್ಪಾ.ಡಿ. ಜೋಗೀನ ಕಾಂಗ್ರೆಸ್ ನಲ್ಲಿ ಅಸಮಾಧಾನಗೊಂಡು ಪಕ್ಷಕ್ಕೆ ರಾಜೀನಾಮೆ ನೀಡಿದ್ದರ ಬೆನ್ನಲ್ಲೇ ಅರವಿಂದ ಕೇಜ್ರಿವಾಲ್ ಸಾರಥ್ಯದ ಬ್ರಷ್ಟಾಚಾರದ ಮುಕ್ತ ಸರಕಾರ ಎನ್ನುವ ಧ್ಯೇಯೋದ್ದೇಶ ಇಟ್ಟುಕೊಂಡು ದೆಹಲಿ ಮತ್ತು ಪಂಜಾಬ್ ನಲ್ಲಿ ಉತ್ತಮ ಆದರ್ಶ್ ಆಡಳಿತ ನೀಡುತ್ತಿರುವ ಆಮ್ ಆದ್ಮಿ ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿಕೊಂಡು ಆಮ್ ಆದ್ಮಿ ಪಕ್ಷದ ರಾಜ್ಯ.ಮಟ್ಟದ ಮುಖಂಡರು ಶಿವರಾಯ ಪ್ಪಾ. ಜೋಗಿ ನ ಅವರ ಜೊತೆ ಮಾತುಕತೆ ನಡೆಸಿ ಅವರನ್ನು ಬೆಂಗಳೂರಿನಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು..

ಇದರ ಜೊತೆಗೆ ಶಿವರಾಯ ಪ್ಪಾ.ಡಿ. ಜೋಗೀನ ಅವರು ಬೇರೆ ಬೇರೆ ಜಿಲ್ಲೆಗಳ ಪ್ರಮುಖ ಮುಖಂಡರನ್ನು ಸೇರಿಸಿಕೊಂಡು ಬೆಂಗಳೂರಿನ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರಿದರು.

ಶಿವರಾಯಪ್ಪ.ಡಿ.ಜೋಗೀನ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಬಾದಾಮಿ ಮತಕ್ಷೇತ್ರದಲ್ಲಿ ಹೊಸ ತಿರುವು ಪ್ರಾರಂಭವಾಗಬಹುದು ಎಂಬುದು ಮತಕ್ಷೇತ್ರದ ಜನರಲ್ಲಿ ಕೇಳಿಬರುತ್ತಿದೆ.

ಬಾದಾಮಿ ಮತಕ್ಷೇತ್ರದ ಹಿರಿಯ ರಾಜಕಾರಣಿ ಶಿವಾರಾಯಪ್ಪ.ಡಿ. ಜೋಗೀನ್ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಮುಖಂಡರನ್ನು ಪಕ್ಷಕ್ಕೆ ಎಸ್.ಡಿ. ಜೋಗೀನ ಅವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ,,ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಡಿ.ಜಿ. ಪಿ.ಭಾಸ್ಕರ್ ರಾವ್,ಶಾಸಕ ದಿಲೀಪ್ ಪಾಂಡೆ,ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹಾಗೂ ರೈತ ಮುಖಂಡ ಮುತ್ತಪ್ಪ.ಕೋಮಾರ, ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!