ಅವಳಿಗಳಿಗೆ ಜನ್ಮ ನೀಡಿದ ಯುವತಿ, ಆದರೆ ತಂದೆ ಮಾತ್ರ ಬೇರೆ ಬೇರೆ..!

ನವದೆಹಲಿ: ಈ ಜಗತ್ತು ಹಲವಾರು ವಿಚಿತ್ರ ರಹಸ್ಯಗಳಿಂದ ತುಂಬಿದೆ. ಅನೇಕ ರಹಸ್ಯಗಳನ್ನು ವೈದ್ಯಕೀಯ ವಿಜ್ಞಾನದಿಂದಲೂ ಪರಿಹರಿಸಲಾಗಿಲ್ಲ. ಉದಾಹರಣೆಗೆ ಗರ್ಭಧಾರಣೆಯ ವಿಚಾರದಲ್ಲಿ ಹುಟ್ಟಿದ ಮಗು ಒಂದೇ ಅಥವಾ ಅವಳಿ ಎಂದು ಆರಂಭದಲ್ಲಿ ಯಾರಿಗೂ ತಿಳಿದಿರುವುದಿಲ್ಲ. ಅನಿರೀಕ್ಷಿತವಾಗಿ ಸಂಭವಿಸುವ ಇಂತಹ ಅನೇಕ ವಿಷಯಗಳಿವೆ, ಇದರ ಬಗ್ಗೆ ಖಚಿತವಾಗಿ ಏನನ್ನೂ ಹೇಳಲಾಗುವುದಿಲ್ಲ. ಇಂತಹದ್ದೇ ಒಂದು ವಿಚಿತ್ರ ಘಟನೆ ಪೋರ್ಚುಗಲ್‌ನಲ್ಲಿ ನಡೆದಿದೆ.

19 ವರ್ಷದ ಯುವತಿಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ ಅಚ್ಚರಿಯ ವಿಷಯವೆಂದರೆ ಈಕೆಯ ಅವಳಿ ಮಕ್ಕಳ ತಂದೆಯಂದಿರು ಮಾತ್ರ ಬೇರೆ ಬೇರೆ! ಹೌದು, ಇದು ಅಚ್ಚರಿಯಾದ್ರೂ ನಿಜವಾಗಿ ನಡೆದಿರೋ ಘಟನೆ. ಪೋರ್ಚುಗಲ್‌ನ ಮಿನೆರೋಸ್ ಸಿಟಿಯಲ್ಲಿ ಪ್ರಕರಣ ನಡೆದಿದೆ. ಒಂದೇ ದಿನದಲ್ಲಿ ಇಬ್ಬರು ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರಿಂದ ಹೀಗೆ ಬೇರೆ ಬೇರೆ ವ್ಯಕ್ತಿಗಳಿಂದ 19 ವರ್ಷದ ಯುವತಿಗೆ ಅವಳಿ ಮಕ್ಕಳು ಹುಟ್ಟಿದ್ದಾರೆ ಅಂತಾ ವೈದ್ಯರು ತಿಳಿಸಿದ್ದಾರೆ. ಋತುಚಕ್ರ ಮುಗಿದ ಕೆಲವೇ ದಿನಗಳಲ್ಲಿ ಒಂದೇ ದಿನ ಇಬ್ಬರು ವ್ಯಕ್ತಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಕಾರಣ ಈ ರೀತಿ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಮಕ್ಕಳ ಡಿಎನ್ಎ ಪರೀಕ್ಷೆ ಮಾಡಿದಾಗ ಈ ವಿಷಯ ಬಹಿರಂಗವಾಗಿದೆ. ಅವಳಿ ಮಕ್ಕಳ ಪೈಕಿ ಒಂದು ಮಗುವಿನ ಡಿಎನ್‌ಎ ತನ್ನ ತಂದೆಗೆ ಹೊಂದಿಕೆಯಾಗುತ್ತಿತ್ತು. ಆದರೆ ಇನ್ನೊಂದು ಮಗುವಿನ ಡಿಎನ್‌ಎಗೆ ಹೊಂದಿಕೆಯಾಗಲಿಲ್ಲ. ಇದರಿಂದ ಯುವತಿ ಮತ್ತು ಆಕೆಯ ಪತಿಯಲ್ಲಿ ದೊಡ್ಡ ಗೊಂದಲೇ ಸೃಷ್ಟಿಯಾಯ್ತು.

ಇಂತಹ ಕ್ರಿಯೆಯನ್ನು ವೈದ್ಯಕೀಯ ಭಾಷೆಯಲ್ಲಿ ಹೆಟೆರೊಪಟರ್ನಲ್ ಸೂಪರ್‌ಫೆಕಂಡೇಶನ್ (Heteropaternal Superfecundation) ಎಂದು ಕರೆಯಲಾಗುತ್ತದಂತೆ. ಪ್ರಪಂಚದಲ್ಲಿ ಇಲ್ಲಿಯವರೆಗೆ 20 ಮಂದಿಯಲ್ಲಿ ಈ ರೀತಿ ನಡೆದಿಯಂತೆ. ಮಕ್ಕಳು ಹುಟ್ಟಿದಾಗ ಈ ವಿಷಯ ತಿಳಿದಿರಲಿಲ್ಲ. ಅವರ ಮೊದಲ ಹುಟ್ಟುಹಬ್ಬದ ವೇಳೆ ತಾಯಿಗೆ ಈ ಮಕ್ಕಳ ತಂದೆ ಯಾರೆಂದು ತಿಳಿದುಕೊಳ್ಳುವ ಕುತೂಹಲವಾಗಿದೆ. ಹೀಗಾಗಿ ಡಿಎನ್​ಎ ಪರೀಕ್ಷೆ ಮಾಡಲಾಗಿತ್ತು. ಆದರೆ ವೈದ್ಯರಿಗೇ ಅಚ್ಚರಿ ಎನ್ನುವಂತೆ ಇಬ್ಬರು ಮಕ್ಕಳ ಡಿಎನ್​ಎ ಪರೀಕ್ಷೆಯ ವರದಿ ಬೇರೆ ಬೇರೆ ರೀತಿ ಬಂದಿತ್ತು.

ನಂತರ ವೈದ್ಯರು ಯುವತಿಯ ಬಳಿ ಚರ್ಚಿಸಿದಾಗ ತಾನು ಒಂದೇ ದಿನ ಇಬ್ಬರ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿರುವ ಬಗ್ಗೆ ತಿಳಿಸಿದ್ದಾಳೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗಿದ್ದು, ಈ ವಿಷಯ ಬೆಳಕಿಗೆ ಬಂದಾಗ ಮಕ್ಕಳ ತಂದೆ ದಿಗ್ಭ್ರಮೆಗೊಂಡಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!