.
ಪಾವಗಡ ತಾಲೂಕಿನ ಕೆ ಟಿ ಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕೋಣನಕುರಿಕೆ ಶಾಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಪ್ರಸಾದ್ ಉದ್ಘಾಟಿಸಿ ಮಾತನಾಡಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಸಹಪಠ್ಯ ಚಟುವಟಿಕೆಗಳ ಕಾರ್ಯಕ್ರಮ ಪ್ರತಿಭಾ ಕಾರಂಜಿ ಯಾಗಿದ್ದು. ಮಕ್ಕಳ ತಮ್ಮ ವಿಶಿಷ್ಟ ಕಲೆಯನ್ನು ಪ್ರದರ್ಶಿಸಲು ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕೆಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸಿ. ಆರ್. ಪಿ. ತಿಪ್ಪೇಸ್ವಾಮಿ ರವರು ಮಾತನಾಡುತ್ತಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಲ್ಲಿ ವಿಶೇಷ ಪ್ರತಿಭೆಗಳಿದ್ದು ಮಕ್ಕಳನ್ನು ಬೆಳೆಸಿ ಪ್ರೋತ್ಸಾಹಿಸಿ ಅವರ ಕಲೆಯನ್ನು ಪರಿಚಯಿಸುವ ವೇದಿಕೆಯೇ ಪ್ರತಿಭಾಕಾರಂಜಿ ಕಾರ್ಯಕ್ರಮ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಬಿ. ಆರ್. ಪಿ. ಮುರುಗೇಶ್ ಗಚ್ಚಿನ ಮಠ .ಸಿ. ಆರ್ .ಪಿ . ಗಳಾದ ನರೇಂದ್ರ ನಾಯಕ್ ಹಾಗೂರಂಗಪ್ಪ. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ್. ಗ್ರಾಮ ಪಂಚಾಯತಿ ಸದಸ್ಯೆ ನಾಗ ಮಣಿ. ಕೋಣನಕುರಿಕೆ ಶಾಲೆಯ ಮುಖ್ಯ ಶಿಕ್ಷಕಿ ಲೋಕಮ್ಮ ಸಹ ಶಿಕ್ಷಕಿ ಲತಾ ಸಹ ಶಿಕ್ಷಕ ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು