ಪಾವಗಡ: ಏನ್ರೀ ಕಿತ್ಕೋತೀರಾ?: ಬಿಜೆಪಿ ಮುಖಂಡನಿಗೆ ಪೊಲೀಸಪ್ಪ ಆವಾಜ್

ತುಮಕೂರು: ದೂರು ಕೊಡಲು ಬಂದಂತಹ ಬಿಜೆಪಿ ಮುಖಂಡನಿಗೆ ಪಾವಗಡದ ಸರ್ಕಲ್ ಇನ್ಸ್‌ಪೆಕ್ಟರ್ ಫುಲ್ ಆವಾಜ್ ಹಾಕಿದ್ದಾರೆ. ಈ ವೀಡಿಯೋ ಇದೀಗ ಫುಲ್ ವೈರಲ್ ಆಗಿದೆ. ಹೌದು, ಪಾವಗಡದ ಸಿಪಿಐ ಅಜಯ್ ಸಾರಥಿ ಅಸಂಬದ್ಧ ಪದ ಬಳಕೆ ( ಏನ್ರಿ ಕಿತ್ತುಕೊಳ್ತಿಯಾ ) ಮಾಡುವ ಮೂಲಕ ತಾನೊಬ್ಬ ಅಧಿಕಾರಿ ಎಂಬುದನ್ನೇ ಮರೆತು ಅನುಚಿತವಾಗಿ ವರ್ತಿಸಿದ್ದಾರೆ.

ಬಿಜೆಪಿ ಮುಖಂಡ ಪ್ರಭಾಕರ್ ಬಿಲ್ಡಿಂಗ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡ್ತಿದ್ದಾರೆ. ಕಳ್ಳತನ ಆಗ್ತಿದ್ದಂತಹ ಸಾಮಗ್ರಿಗಳ ಗೂಡ್ಸ್ ವಾಹನ ಹಿಡಿದು ಠಾಣೆಗೆ ದೂರು ನೀಡಲು ಬಂದಾಗ ಬಿಜೆಪಿ ಮುಖಂಡ ಹಾಗೂ ಸಿಪಿಐ ನಡುವೆ ವಾಗ್ವಾದ ಉಂಟಾಗಿದೆ. ತುಮಕೂರು ಜಿಲ್ಲೆ ಪಾವಗಡ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಈ ಇಬ್ಬರ ವಾಕ್ಸಮರದ ವೀಡಿಯೋ ಫುಲ್ ವೈರಲ್ ಆಗಿದೆ.

ಬಿಜೆಪಿ ಮುಖಂಡ ಪ್ರಭಾಕರ್ ಕಟ್ಟುವ ಬಿಲ್ಡಿಂಗ್ ಹತ್ತಿರ ಪುಟ್ಟನಾಯಕ ಎಂಬ ಗುತ್ತಿಗಾದಾರನಿಂದ ಸೆಂಟ್ರಿಂಗ್ ಸಾಮಗ್ರಿಗಳನ್ನು ಹಾಕಿಸಿಕೊಂಡಿದ್ದರು. ಬಿಜೆಪಿ ಮುಖಂಡ ಪ್ರಭಾಕರ್‌ ಆರೂವರೆ ಲಕ್ಷ ರೂಗಳನ್ನ ಪುಟ್ಟನಾಯಕ ಅವರಿಗೆ ಕೊಟ್ಟು ಈ ಸೆಂಟ್ರಿಂಗ್ ಸಾಮಗ್ರಿಗಳನ್ನು ಹಾಕಿಸಿದ್ದರು. ಕಟ್ಟಡ ಕಾಮಗಾರಿಯ ಕೆಲಸವನ್ನು ಮಾಡದೆ, ಪೋನು ರಿಸೀವ್ ಮಾಡದೆ ಇದ್ದಂತಹ ಪುಟ್ಟನಾಯಕ ಏಕಾಏಕಿ ಸೆಂಟ್ರಿಂಗ್ ಸಾಮಗ್ರಿಗಳನ್ನು ತುಂಬಿಕೊಂಡು ಹೋಗಲು ಕೆಲಸಗಾರರನ್ನ ಕಳುಹಿಸಿದ್ದಾರೆ.‌

ಈ ವೇಳೆ ಪ್ರಭಾಕರ್ ಗೂಡ್ಸ್‌ ವಾಹನ ತಂದು ಸೆಂಟ್ರಿಂಗ್ ಸಾಮಗ್ರಿಗಳನ್ನು ತುಂಬುತ್ತಿದ್ದಂತಹ ಚಾಲಕನನ್ನ ಕೇಳಿದ್ದಾರೆ. ಅದಕ್ಕೆ ಚಾಲಕ ಏನನ್ನೂ ಹೇಳದೆ ಗೂಡ್ಸ್ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಬಿಟ್ಟು ಹೋದಂತಹ ಗೂಡ್ಸ್ ವಾಹನವನ್ನು ಪ್ರಭಾಕರ್ ಪೊಲೀಸರಿಗೆ ಒಪ್ಪಿಸಿ ದೂರು ನೀಡಲು ಮುಂದಾದಾಗ ಈ ವಾಗ್ವಾದ ಉಂಟಾಗಿದೆ. ಅಲ್ಲದೆ, ದೂರು ನೀಡಿದರೂ ಕೂಡ ಕ್ರಮ ಕೈಗೊಳ್ಳದೆ ಅಧಿಕಾರಿ ಎಂಬುದನ್ನೇ ಮರೆತು ಅವಾಚ್ಯ ಶಬ್ದಗಳನ್ನ ಬಳಕೆ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗ್ತಿದೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!