ಗುಬ್ಬಿ: ರಾಷ್ಟ್ರೀಯ ಪಕ್ಷಗಳ ಆಳ್ವಿಕೆಗೆ ಬೇಸತ್ತ ಜನರು ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ತರಲು ಸಜ್ಜಾಗಿದ್ದಾರೆ. ಜನಾಭಿಪ್ರಾಯಕ್ಕೆ ತಕ್ಕನಾದ ಕಾರ್ಯಕ್ರಮ ರೂಪಿಸಿಕೊಂಡ ಮಾಜಿ ಸಿಎಂ ಕುಮಾರಣ್ಣ ಆಶಯದಲ್ಲಿ ಪಂಚರತ್ನ ಯೋಜನೆ ಮಹತ್ತರ ಪಾತ್ರ ವಹಿಸಲಿದೆ ಎಂದು ಜಿಪಂ ಮಾಜಿ ಸದಸ್ಯೆ ಗಾಯತ್ರಿದೇವಿ ನಾಗರಾಜು ತಿಳಿಸಿದರು.
ತಾಲ್ಲೂಕಿನ ಕಡಬ ಹೋಬಳಿ ಗಂಗಸಂದ್ರ, ಆಡಗೊಂಡನಹಳ್ಳಿ, ಅತ್ತಿಕಟ್ಟೆ ಸೇರಿದಂತೆ ಹಲವು ಗ್ರಾಮದಲ್ಲಿ ಪ್ರವಾಸ ಕೈಗೊಂಡು ಜೆಡಿಎಸ್ ಪಕ್ಷ ಪ್ರಣಾಳಿಕೆ ಅಂಶಗಳನ್ನು ಪ್ರಚಾರ ಕಾರ್ಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್ ಆಡಳಿತಕ್ಕೆ ಸಂದರ್ಭದಲ್ಲಿ ಬಡವರು, ರೈತರು, ಕೂಲಿ ಕಾರ್ಮಿಕರ ಪರ ಮಾಡಿದ ಹಲವು ಯೋಜನೆಗಳು ಇಂದಿಗೂ ಜನಮನ ಗೆದ್ದಿದೆ. ಪ್ರಸ್ತುತ ಬೇಸತ್ತ ಜನರಿಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಅರಿವಾಗಿದೆ ಎಂದರು.

ಗುಬ್ಬಿ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಎಂಬುದು ತಿಳಿದ ವಿಚಾರ. ದೇವೇಗೌಡರು ಮತ್ತು ಕುಮಾರಣ್ಣ ಅವರ ಆಡಳಿತ ಮೆಚ್ಚಿದ ಇಲ್ಲಿನ ಮತದಾರರು ಮತ್ತೊಮ್ಮೆ ಜೆಡಿಎಸ್ ಕೈ ಹಿಡಿಯುವ ಭರವಸೆ ಇದೆ. ಈಗಾಗಲೇ ಸಿ.ಎಸ್.ಪುರ ಜಿಪಂ ಕ್ಷೇತ್ರ ಅಭಿವೃದ್ಧಿ ಕೆಲಸ ನಮ್ಮ ಕಾರ್ಯ ವೈಖರಿ ಕನ್ನಡಿಯಾಗಿದೆ. ಇದೇ ಮಾದರಿಯಲ್ಲಿ ಗುಬ್ಬಿ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದ ಕೆಲಸವನ್ನು ಸಾಕಾರಗೊಳಿಸಿ ಹತ್ತುಹಲವು ಹೊಸ ಯೋಜನೆಯ ಕನಸು ಜನರಿಗೆ ತಿಳಿಸುತ್ತಿದ್ದೇವೆ. ಮಾದರಿ ಕ್ಷೇತ್ರ ನಿರ್ಮಾಣಕ್ಕೆ ನಾಗರಾಜು ಅವರನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದೇವೆ. ಜನರು ಸಹ ಉತ್ತಮ ಸ್ಪಂದನೆ ತೋರುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷೆ ಸಿದ್ದಗಂಗಮ್ಮ, ಗ್ರಾಪಂ ಸದಸ್ಯ ಪುರುಷೋತ್ತಮ್, ಆಡಗೊಂಡನಹಳ್ಳಿ ಶ್ರೀನಿವಾಸ್ ಇತರರು ಇದ್ದರು.