ಹುಳಿಯಾರು ತಾಲೂಕು ಕೇಂದ್ರ ಹೋರಾಟಕ್ಕೆ ಚಾಲನೆ: ಕೆ.ಎಸ್.ಕಿರಣ್ ಕುಮಾರ್

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿಗೆ ನೀರಾವರಿ ಯೋಜನೆಯನ್ನ ತರುತ್ತೇನೆಂದು ಯಾವಾತ್ತಾದರು ಹೇಳಿದ್ದರೆ, ದೇವರ ಮುಂದೆ ಪ್ರಮಾಣ ಮಾಡಲಿ ನಾನು ರಾಜಕೀಯ ನಿವೃತ್ತಿಯನ್ನ ಗೋಷಿಸುತ್ತೇನೆಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್. ರವರು ವೇದಿಕೆ ಮೂಲಕ ಸಚಿವ ಜೆ.ಸಿ.ಮಾಧುಸ್ವಾಮಿಗೆ ಸವಾಲಾಕಿದರು.

ತನ್ನ ಜನ್ಮದಿನದ ಅಂಗವಾಗಿ ಹುಳಿಯಾರಿನಲ್ಲಿ ಕೆ.ಎಸ್.ಕೆ.ಅಭಿಮಾನಿಗಳಿಂದ ಮಂಗಳವಾರದಂದು ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಭಾಗವಯಿಸಿದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿದರು.

ಇಂದು ನೀರು ತಂದೆ ಎಂದು ಹೇಳಿಕೊಳ್ಳೂವ ತಾಲೂಕಿನ ಮಂತ್ರಿಗಳು ಆತ್ಮಾವಲೋಕನ ಮಾಡಿಕೊಳ್ಳಲ್ಲಿ. ಹೇಮಾವತಿಗಾಗಿ ಅಲವು ಮಠಾಧೀಶರು ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ನಾನು ಹೋರಾಟವನ್ನ ನಡೆಸಿದ ಫಲ. ಇಂದು ಹೇಮಾವತಿ ನೀರು ಕೆರೆ ಕಟ್ಟೆ ತುಂಬಿ ಬೋರನಕಣಿವೆ ಜಲಾಶಯಕ್ಕೆ ತಲುಪಿದ್ದು ಜಲಾಶಯ ತುಂಬಿ ಕೋಡಿ ನೀರು ಹರಿಯುತ್ತಿರುವುದನ್ನ ನಾವೇಲ ನೋಡಬಹುದಾಗಿದೆ.

ಹೇಮಾವತಿ ಯೋಜನೆಗಾಗಿ ಹೋರಾಟ ನಡೆಸುವ ಆಂದಿನ ಅವಧಿಯಲ್ಲಿ ನೀರು ಬರೋದಿಲ್ಲಾ ಅಂತ ಗೇಲಿಮಾಡಿ ಜಂಬಲ್ಲಿ ತರಬೇಕಾ, ಬಿಂದಿಗೆಲ್ಲೀ ತರಬೇಕಾ ಅಂತ ಕೆಟ್ಟ ಪದಗಳಿಂದ ಹೋರಾಟಗಾರರನ್ನ ಬೈದು, ದೂಷಣೆ ಮಾಡಿದವರು. ಇಂದು ನಾನು ನೀರಿನ ಮಂತ್ರಿಯಾಗಿ ನೀರು ತಂದಿದ್ದೇನೆ ಎಂದು ಹೇಳಿಕೊಳ್ಳಲು ನಾಚಿಕೆ ಆಗಬೇಕು. ತಾಲೂಕಿಗೆ ಅನುಷ್ಟಾನಗೊಂಡಿರುವ ನೀರನ್ನ ಬೀಡುವ ನೀರುಗಂಟ್ಟಿ ಕೆಲಸವನ್ನ ಮಾಡುತ್ತಾ ನಾನು ನೀರು ತಂದೆ ಎಂದು ಹೇಳಿಕೊಳ್ಳಲು ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಳಿಯಾರು ಕೆರೆಗೆ ಹೇಮಾವತಿ ನೀರು: ೨೦೦೮ರ ಚುನಾವಣೆಯಲ್ಲಿ ಸೊತಾಗ ಅಧಿಕಾರಿ ಇಲ್ಲದೆ ಇದ್ದರು ಕೂಡ ಸಾಕಷ್ಟು ಕೆಲಸ ಕಾರ್ಯಗಳನ್ನ ನಡೆಸಿದ್ದೇನೆ. ತಿಮ್ಲಾಪುರ ಕೆರೆಯಿಂದ ಹುಳಿಯಾರು ಕೆರೆಗೆ ಸಂಪರ್ಕ ಇರುವ ದೊಡ್ಡ ಓಣಕಾಲುವೆಯನ್ನ ಜನರ ಸಹಕಾರದಿಂದ ದುರಸ್ತಿಮಾಡಿಸಿ ತಿಮ್ಲಾಪುರ ಕೆರೆ ನೀರು ಹುಳಿಯಾರು ಕೆರೆಗೆ ಹೋಗುವಂತ ಕೆಲಸವನ್ನ ನಿರ್ವಾಯಿಸಿದ್ದೇನೆ, ಇದರ ಫಲ ಇಂದು ಹೇಮವಾತಿ ನೀರು ಸಹಾ ಹುಳಿಯಾರು ಕೆರೆಗೆ ಹರಿದು ಬರಲು ಸಹಕಾರಿಯಾಗಿದೆ ಎಂದರು.

ತಾಲೂಕು ಕೇಂದ್ರಕ್ಕೆ ಹೋರಾಟ: ಹೇಮಾವತಿ ಯೋಜನೆಗೆ ಹೋರಾಟ ನಡೆಸುವ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರಿಗೆ ಹೇಳಿದ್ದೇ ಹುಳಿಯಾರು ತಾಲೂಕು ಕೇಂದ್ರ ಆಗಬೇಕು ಅಂತ ಆದರೆ ಅವರು ಹೇಮಾವತಿ ಯೋಜನೆ ಜಾರಿಮಾಡಿದರು, ತಾಲೂಕು ಕೇಂದ್ರದ ಪ್ರಸ್ತಾಪ ಕೈಬಿಟ್ಟಿದ್ದರು.

 

ಈಗ ಹುಳಿಯಾರು ತಾಲೂಕು ಕೇಂದ್ರದ ಹೋರಾಟವನ್ನ ನಾವೇಲ್ಲಾ ಸೇರಿ ಪ್ರಾರಂಭಿಸೋಣ. ಅಲ್ಲದೆ ಇನ್ನು ಅಲವಾರು ನೀರಾವರಿ ಹೋರಾಟವನ್ನ ಮುಂದಿನ ದಿನಗಳಲ್ಲಿ ನಡೆಸಬೇಕಿದೆ.

ಕಳಪೆ ರಸ್ತೆಕಾಮಗಾರಿ: ಕಳೆದ ಎರಡು ತಿಂಗಳಿಂದ ತಾಲೂಕಿನ ಹಳ್ಳಿಗಳನ್ನ ಪ್ರವಾಸಡ ನಡೆಸುತ್ತಿದ್ದೇನೆ. ಎಲ್ಲಾ ಕಡೆ ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಕಾರಣ ಆ ರಸ್ತೆ ಕಾಮಗಾರಿ ನಡೆಸುವ ಗುತ್ತಿಗೆದಾರರನ್ನ ಪ್ರಶ್ನೀಸುವಂತ ನೈತಿಕತೆಯನ್ನ ಜನಪ್ರತಿನಿದಿಗಳು ಕಳೆದುಕೊಂಡಿದ್ದಾರೆ. ಇದನ್ನ ಸರಿಪಡಿಸಲು ಇನ್ನು ಮುಂದೆ ಹೋರಾಟವನ್ನ ನಡೆಸಲು ಪ್ರಾರಂಭಿಸ ಬೇಕಿದೆ. ಇದಕ್ಕೆ ತಾಲೂಕಿನ ಜನರು ನನ್ನಜೋತೆ ಕೈಜೋಡಿಸುವಂತೆ ಮನವಿಮಾಡಿದರು. ಮುಂದಿನ ಚುನಾವಣೆಯ ದಿನಗಳು ನಮಗೆ ಅನುಕೂಲಕರವಾಗಿದೆ ಅದನ್ನ ನಾವುಗಳು ಸದುಪಯೋಗ ಪಡಿಸಿಕೊಳ್ಳನ ಎಂದರು.

ಈ ಸಮಾರಂಭದಲ್ಲಿ ಸಂಸದರಾದ ಜೆ.ಎಸ್.ಬಸವರಾಜು, ಮಾಜಿ ಶಾಸಕ ಸುರೇಶ್ ಗೌಡ್ರು, ಹಾಗೂ ಮಠಾಧೀಶರಾದ ಜ್ನಾನಪ್ರಭು ಸಿದ್ಧರಾಮದೇಶೀಕೇಂದ್ರ, ಮೃತ್ಯುಂಜಯ ದೇಶೀಕೇಂದ್ರ, ಶ್ರೀವಿಭವ ವಿದ್ಯಾಶಂಕರ ದೇಶೀಕೇಂದ್ರ, ಬಸವಭೃಂಗೇಶ್ವರ, ಸಂಜಯಕುಮಾರ್, ಸೇವಾಲಾಲ್ ಸರ್ದಾರ್, ಇಮ್ಮಡಿ ಬಸವ ಮೇದಾರ ಕೇತೇಶ್ವರ, ಬಸವ ರಮಾನಂದ, ನೀರಂಜನಮೂರ್ತಿ, ಗಂಗಾಧರ ಸ್ವಾಮಿ, ಹಾಗೂ ಬಿಜೆಪಿ ಅನೇಕ ಮುಖಂಡರು ಹಾಗೂ ಕವಿತಾ ಕಿರಣ್‌ಕುಮಾರ್ ಹಾಜರಿದ್ದರು.

ಸಮಾರಂಭಕ್ಕೂ ಮುನ್ನ ಗಾಂಧಿಪೇಟೆಯ ಮಾಜಿ ಶಾಸಕರ ನಿವಾಸದಿಂದ ಮಾಠಾಧೀಶ ಹಾಗೂ ಅಭಿಮಾರನಿಗಳ ಬೈಕ್ ರ್‍ಯಾಲಿ, ಮೆರವಣಿಗೆ, ಜನಾಪದ ಕಲಾತಂಡಗ ನೃತ್ಯ ಪ್ರದರ್ಶನ ಸಾಗಿತು.

.

   

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!