ಸೆ:14 ಹಿಂದಿ ದಿವಸ ವಿರೋಧಿಸಿ ಜೆಡಿಎಸ್ ಬೃಹತ್ ಪ್ರತಿಭಟನೆ

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಇಂದು ಜಾತ್ಯಾತೀತ ಜನತಾದಳ ಬಾದಾಮಿ ಘಟಕದಿಂದ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರ ದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಕಬ್ಬಲಾಗೆರಿ ಕ್ರಾಸ್ ನ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಪ್ರತಿಭಟನೆ ಚಾಲನೆ ಜಿಲ್ಲಾಧ್ಯಕ್ಷ ಚಾಲನೆ ನೀಡಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ಯುದ್ದಕ್ಕೂ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ದ ಈ ಹಿಂದಿ ದಿವಸ ವಿರೋಧಿಸಿ ಧೋರಣೆಯನ್ನು ಖಂಡಿಸಿ ಸರಕಾಗಳ ವಿರುದ್ಧ ಘೋಷಣೆ ಕೂಗುತ್ತ ಸಾಗಿದ ಪ್ರತಿಭಟನೆ, ನಗರದ ಪುಲಿಕೇಶಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಹೊತ್ತು ರಸ್ತೆ ತಡೆ ನಡೆಸಿ ಘೋಷಣೆ ಕೂಗುತ್ತಾ ಸಾಗುತ್ತಾ ಅಂಬೇಡ್ಕರ್ ಸರ್ಕಲ್ ಗೆ ತಲುಪಿದ ಪ್ರತಿಭಟನೆ ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರ ದ ಮಾಲಾರ್ಪಣೆ ಮಾಡಿ ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಘೋಷಣೆಗಳನ್ನು ಕೂಗುತ್ತ ಡಾ! ಬಾಬಾಸಾಹೇಬ ಅಂಬೇಡ್ಕರ ಅವರಿಗೆ ನಮಿಸಿದರು.

ನಂತರ ಮಾತನಾಡಿದ ಜೆ. ಡಿ.ಎಸ್.ನ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ ಸಾವಿರಾರು ವರ್ಷಗಳ ಇತಿಹಾಸ ವಿರುವ ನಮ್ಮ ಮಾತೃಭಾಷೆ ಕನ್ನಡಕ್ಕೆ ನಾವು ಮೊದಲು ಮಾನ್ಯತೆ ಕೊಡಬೇಕು. ಈ ಭಾಷೆಯ ಮುಖಾಂತರ ನಾವು ನಮ್ಮ ಭಾವನಾತ್ಮಕ ಭಾಂಧಗಳನ್ನು ಬೆಸೆದುಕೊಂಡು ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದೇವೆ.ಇಂತಹದರ ಮೇಲೆ ಹಿಂದಿ ಹೇರಿಕೆ ಮಾಡಿ ಘಾಸಿ ಗೊಳಿಸಿದರೆ ಇಡೀ ಕರ್ನಾಟಕದ ಕನ್ನಡಿಗರಿಗೆ ಜಾಗೃತಗೊಳಿಸಿ ಜಾತ್ಯಾತೀತ ಜನತಾದಳ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಾರಥ್ಯದಲ್ಲಿ ಉಗ್ರ ಹೋರಾಟ ಮಾಡುತ್ತದೆ ಎಂದು ಈ ಮೂಲಕ ರಾಜ್ಯ ಸರಕಾರಕ್ಕೆ ಹಾಗೂ ಕೇಂದ್ರ ಸರಕಾರಕ್ಕೆ ಖಡ ಕ್ ಎಚ್ಚರಿಕೆಯನ್ನು ಮಾಧ್ಯಮದ ಮೂಲಕ ರವಾನಿಸಿದ್ದಾರೆ.

ನಂತರ ತಾಲೂಕಾ ದಂಡಾಧಿಕಾರಿ ಕಛೇರಿ ಆಡಳಿತಾಧಿಕಾರಿ ಗೆ ಮನವಿಯನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರ ದ ಹಿರಿಯ ಮುಖಂಡ ಎಂ.ಎಸ್. ಹಿರೇ ಹಾಳ,ನಗರ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ, ಯುವ ಮುಖಂಡರಾದ ಹುಚ್ಚೇಶ್ ಹದ್ದನ್ನವರ,ಚಂದ್ರು,ಪ್ರಕಾಶ್ ಕೋಟಿ,ಸಂತೋಷ್ ನಾಯನೇಗಲಿ, ತೈಯಬ ಖಲೀಫಾ,ಸಾಮಾಜಿಕ ಜಾಲತಾಣದ ತಾಲೂಕಾಧ್ಯಕ್ಷ ಬಸವರಾಜ್ ಅಮರಗೋಳ, ಹಾಗೂ ಪಕ್ಷದ ತಾಲೂಕಾ ಮುಖಂಡರು ಪದಾಧಿಕಾರಿಗಳು ಮಹಿಳಾ ಪದಾಧಿಕಾರಿಗಳು ,ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!