ಬಜಾಜ್ ಪೈನಾನ್ಸ್ ಯಿಂದ ಯುವಕರಿಗೆ ಸಾಲ ಪೋಷಕರು ಶಾಖೆಗೆ ತೆರಳಿ ಸಿಬ್ಬಂದಿಗೆ ತರಾಟೆ

ಪಾವಗಡ : ಪಟ್ಟಣದ ಬಜಾಜ್ ಪೈನಾನ್ಸ್ ಲಿಮಿಟೆಡ್ ಹಾವಳಿ ಪೋಷಕರು ಶಾಖೆಗೆ ತೆರಳಿ ಸಿಬ್ಬಂದಿಯನ್ನ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಬುದವಾರ ನಡೆದಿದೆ.

ಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದ ತುಮಕೂರು ರಸ್ತೆಯಲ್ಲಿ ಆರಂಭಗೊಂಡಿರುವ ಖಾಸಗಿ ಬಜಾಜ್ ಪೈನಾನ್ಸ್ ಲಿಮಿಟೆಡ್‌ನಿಂದ ಯುವ ಜನತೆಗೆ ಯಾವುದೇ ಷರತ್ತು ಇಲ್ಲದೆ, ಆಧಾರ್, ಬ್ಯಾಂಕ್ ಖಾತೆ, ಪಾನ್‌ಕಾರ್‍ಡ್ ಪಡೆದು ಹಣವನ್ನ ಸುಲಭವಾಗಿ ಸಾಲವಾಗಿ ನೀಡುತ್ತಿದ್ದು, ಯುವ ಜನತೆಗೆ ಬಹುಬೇಗ ಸಾಲ ಪಡೆದು, ದುಚ್ಚಟಗಳಿಗೆ ಬಲಿಯಾಗುವುದಲ್ಲದೆ ಪೈನಾನ್ಸ್ ಒತ್ತಡದಿಂದ ಮನೆಗಳನ್ನ ತೋರೆಯುವ ಸನ್ನಿವೇಶ ನಿರ್ಮಾಣವಾಗಿದ್ದು ಹಲವು ಪೋಷಕರು ಶಾಖೆಗೆ ತೆರಳಿ ಶಾಖೆಯ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ ಘಟನೆಗಳು ಕಳೆದಾ ಒಂದು ವಾರದಿಂದ ಬೆಳಕಿಗೆ ಬಂದಿವೆ.

ಇದೇ ವೇಳೆ ಪರಮೇಶ ಎಂಬುವವರು ಮಾತನಾಡಿ ನಮ್ಮ ಸಂಬಂದಿ ಒಬ್ಬರು ೪೫ ಸಾವಿರ ಸಾಲ ಪಡೆದು ೨೯ ಸಾವಿರ ಸಾಲ ಮರು ಪಾವತಿ ಮಾಡಿದ್ದರು, ಸ್ಟೇಟಸ್ಸ್‌ನಲ್ಲಿ ಪೂರ್ಣ ಪ್ರಮಾಣದ ಸಾಲ ಹಾಗೇ ತೋರಿಸುತ್ತಿದ್ದು ನೀವು ಹಣವೇ ಪಾವತಿಸಿಲ್ಲ ಎಂದು ಗ್ರಾಹಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆಂದಾ ಅವರು 5 ರೂಗಿಂತ ಹೆಚ್ಚು ಬಡ್ಡಿಯನ್ನ ವಿಧಿಸುತ್ತಿದ್ದು ಆರ್‌ಬಿಐ ಗೈಡ್‌ಲೈನ್ಸ್ ಪಾಲನೆ ಮಾಡುತ್ತಿಲ್ಲ ಜೋತೆಗೆ ಹಲವು ಯುವಕರು ಸಾಲ ಮಾಡಿ ಬಡ್ಡಿಯ ಕಾಟಕ್ಕೆ ತಾಳಲಾರದೇ ಮನೆಯಲ್ಲಿ ಕೌಟುಂಬಿಕ ಜಗಳಗಳು, ಖಾಸಗಿ ಪೈನಾನ್ಸ್ ಕಿರುಕುಳದಿಂದ ಹಣ ಒದಗಿಸಲಾಗದೇ ಮನೆಗಳನ್ನ ತೋರೆದು ಪೋಷಕರಿಗೆ ಸೀಗದೇ ಮೋಬೈಲ್ ಸಂಪರ್ಕಕ್ಕೂ ಕೂಡ ಸೀಗದ ಪರಿಸ್ಥಿತಿ ಈ ಬಜಾಜ್ ಪೈನಾನ್ಸ್ ಲಿಮಿಟೆಡ್‌ನಿಂದ ನಿರ್ಮಾಣವಾಗಿದ್ದು ಬಡ್ಡಿಯ ಒತ್ತಡಕ್ಕೆ ಮಣಿದು ಯುವಕರು ಆತ್ಮಹತ್ಯೆಗಳನ್ನ ಮಾಡಿಕೊಳ್ಳುವ ಮುನ್ನವೇ ಇವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!